800 ವರುಷ ಇತಿಹಾಸದ ತುಳುಲಿಪಿ ಶಿಲೆ ಪತ್ತೆ

Team Udayavani, Nov 12, 2019, 5:58 AM IST

ಕೊಲ್ಲೂರು: ನೂಜಾಡಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವಠಾರದಲ್ಲಿ ಸುಮಾರು 800 ವರುಷಗಳ ಪುರಾತನ ತುಳು ಲಿಪಿಯಲ್ಲಿ ಬರೆದಿರುವ ಶಿಲೆ ಪತ್ತೆಯಾಗಿದೆ.

ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನ ಇತಿಹಾಸ ಪ್ರಾಚಾರ್ಯ ಟಿ. ಮುರುಗೇಶ ಹಾಗೂ ಕೊಲ್ಲೂರು ದೇಗುಲದ ಎಂಜಿನಿಯರ್‌ ಮುರಳೀಧರ ಹೆಗಡೆ ಅವರು ತುಳು ಲಿಪಿಯ ಶಿಲೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.

ದೇಗುಲದ ಆರ್ಚಕರಾದ ಲಕ್ಷ್ಮೀನಾರಾಯಣ ಭಟ್‌, ರಾಘವೇಂದ್ರ ಭಟ್‌ ಹಾಗೂ ಕೊಲ್ಲೂರಿನ ಛಾಯಾಚಿತ್ರಗ್ರಾಹಕ ರಾಘವೇಂದ್ರ ಐತಾಳ್‌ ಅವರು ಪುರಾತನ ಶಿಲೆಯ ಮಾಹಿತಿಯನ್ನು ಸಂಶೋಧಕರಲ್ಲಿ ಹಂಚಿಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ