ಮತದಾರರ ಸಹಾಯವಾಣಿಗೆ ಉತ್ತಮ ಪ್ರತಿಕ್ರಿಯೆ
Team Udayavani, Mar 15, 2019, 12:30 AM IST
ಉಡುಪಿ: ಚುನಾವಣಾ ಆಯೋಗದ ಆದೇಶಾನುಸಾರ ಲೋಕ ಸಭಾ ಚುನಾವಣೆಗೆ ಸಂಬಂಧಿಸಿ ಡಿಸಿ ಕಚೇರಿಯಲ್ಲಿ ಜ. 25ರಿಂದ ತೆರೆದಿರುವ ಮತದಾರರ ಸಹಾಯವಾಣಿ 1950ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಫೆ.11ರಿಂದ ಕರೆಗಳ ಸ್ವೀಕೃತಿ ಆರಂಭವಾಗಿತ್ತು.
ಮೊದಲಿಗೆ ನಿತ್ಯ 11ರಿಂದ 12 ಕರೆಗಳು ಬರುತ್ತಿದ್ದವು. ಚುನಾ ವಣೆ ದಿನಾಂಕ ಘೋಷಣೆಯಾದ ಅನಂತರ ಕರೆಗಳ ಸಂಖ್ಯೆ ದಿನಕ್ಕೆ ಸರಾಸರಿ 60ರಿಂದ 65ಕ್ಕೆ ತಲುಪಿದೆ ಎನ್ನುತ್ತಾರೆ ಇಲ್ಲಿನ ಸಿಬಂದಿ. ಮಾ.14ರ ವರೆಗೆ ಬಂದ ಕರೆಗಳ ಸಂಖ್ಯೆ 532.
ಮತದಾರರ ಗುರುತು ಚೀಟಿ, ಮತ ದಾರರ ನೋಂದಣಿ, ಮತಗಟ್ಟೆ ವಿವರ, ಅರ್ಜಿಗಳ ಪರಿಶೀಲನೆ, ಅಧಿಕಾರಿಗಳ ಬಗ್ಗೆ ಮಾಹಿತಿಯನ್ನು ಸಹಾಯ ವಾಣಿಯಿಂದ ಕೇಳಿ ಪಡೆಯುತ್ತಿದ್ದಾರೆ.
ಅನ್ಯ ಜಿಲ್ಲೆಯವರಿಗೂ ಮಾಹಿತಿ
ಅನ್ಯ ಜಿಲ್ಲೆಯವರು ಈ ಸಹಾಯವಾಣಿಗೆ ಕರೆ ಮಾಡಿದರೂ ಸಿಬಂದಿ ಮಾಹಿತಿ ನೀಡುತ್ತಿದ್ದಾರೆ. ಹೆಸರು, ನೋಂದಣಿ, ಅರ್ಜಿಗಳ ಪರಿಶೀಲನೆ, ವಿದ್ಯುನ್ಮಾನ ಯಂತ್ರಗಳ ಬಗ್ಗೆಯೂ ಸಲಹೆ ಕೇಳುತ್ತಾರೆ.
24ಗಂಟೆ ಸೇವೆ
ಮತದಾರರ ಸಹಾಯವಾಣಿ 24 ಗಂಟೆ ಕಾರ್ಯಾಚರಿಸುತ್ತಿದ್ದು, 4 ಮಂದಿ ಸಿಬಂದಿಯಿದ್ದಾರೆ. ಬೆಳಗ್ಗೆ 8ರಿಂದ ರಾತ್ರಿ 8 ಹಾಗೂ ರಾತ್ರಿ 8ರಿಂದ ಮರುದಿನ ಬೆಳಗ್ಗೆ 8 ಗಂಟೆವರೆಗೆ ಸಿಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ