ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಿಲ್ಲದೆ ಪರದಾಟ
ಇಲಾಖಾ ಕಾರಣದಿಂದ ಆಗದ ವೇತನ; ಮಕ್ಕಳ ತಜ್ಞರು ರಜೆಯಲ್ಲಿ
Team Udayavani, Nov 8, 2019, 5:04 AM IST
ಬ್ರಹ್ಮಾವರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ಒಂದು ತಿಂಗಳಿನಿಂದ ಮಕ್ಕಳ ತಜ್ಞರಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ.
ಪ್ರತಿನಿತ್ಯ ಪರಿಸರದ ಹತ್ತಾರು ಊರುಗಳಿಂದ ಬರುವವರು ನಿರಾಸೆಯಿಂದ ಹಿಂದಿರುಗುತ್ತಿದ್ದು, ಅನಿವಾರ್ಯವಾಗಿ ಅಧಿಕ ಹಣ ನೀಡಿ ಖಾಸಗಿ ಸಂಸ್ಥೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬಡ ಜನರು ಮಕ್ಕಳ ತಜ್ಞರಿಗಾಗಿ ಬ್ರಹ್ಮಾವರ ಸರಕಾರಿ ಆಸ್ಪತ್ರೆಯನ್ನು ಅವಲಂಭಿಸಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ.
ಆರೋಗ್ಯ ಕೇಂದ್ರಕ್ಕೆ ಜನರಲ್ ಡ್ನೂಟಿ ಮೆಡಿಕಲ್ ಆಫೀಸರ್ ಆಗಿ ನೇಮಕವಾದ ಡಾ| ಮಹಾಬಲ ಅವರು ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಅವರಿಗೆ ತಜ್ಞ ಸೇವೆಯ ಯಾವುದೇ ಭತ್ಯೆ ದೊರಕುತ್ತಿರಲಿಲ್ಲ.
ಕಳೆದ ವರ್ಷ ಸರಕಾರದ ಅನುಮತಿ ಪಡೆದು ಮಕ್ಕಳ ತಜ್ಞ ಹುದ್ದೆಗೆ ಅರ್ಜಿ ಹಾಕಿ ನೇಮಕಾತಿ ಆಗಿದ್ದರು. ಆದರೆ ಮೊದಲಿನ ಹುದ್ದೆಯಿಂದ ಬಿಡುಗಡೆಗೊಳಿಸುವ ಪತ್ರ ಒಂದು ವರ್ಷ ಕಳೆದರೂ ಸರಕಾರದಿಂದ ದೊರೆತಿಲ್ಲ. ಆ ಪತ್ರ ದೊರೆಯದ ಕಾರಣ ಅವರಿಗೆ ಒಂದು ವರ್ಷದಿಂದ ವೇತನ ದೊರೆಯುತ್ತಿಲ್ಲ ಎನ್ನಲಾಗಿದೆ. ಪರಿಣಾಮ ವೈದ್ಯರು ಸುಮಾರು ಒಂದು ತಿಂಗಳಿನಿಂದ ಕರ್ತವ್ಯಕ್ಕೆ ರಜೆ ಹಾಕಿದ್ದಾರೆ.
ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು ತತ್‌ಕ್ಷಣ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗಮನಕ್ಕೆ ತರಲಾಗಿದೆ
ವಿಚಾರವನ್ನು ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರು ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
-ಡಾ| ಅಜಿತ್ ಶೆಟ್ಟಿ, ಪ್ರಭಾರ ಆಡಳಿತ ವೈದ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ
ಸ್ಪಂದನೆ ದೊರೆತಿಲ್ಲ
ಸಮಸ್ಯೆ ಕುರಿತು ಆರೋಗ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಸಚಿವರು, ಶಾಸಕರಲ್ಲಿ ಮನವಿ ಮಾಡಿದ್ದೇನೆ. ಯಾವುದೇ ಸ್ಪಂದನೆ ದೊರೆತಿಲ್ಲ. ಜೀವನೋಪಾಯಕ್ಕಾಗಿ ಅನಿವಾರ್ಯವಾಗಿ ಸರಕಾರಿ ಸೇವೆಗೆ ರಜೆ ಹಾಕಿ ಖಾಸಗಿ ಸೇವೆ ನೀಡುತ್ತಿದ್ದೇನೆ. ವ್ಯವಸ್ಥೆ ನನ್ನನ್ನು ಈ ರೀತಿ ಮಾಡಿದೆ.
–ಡಾ| ಮಹಾಬಲ್,
ಮಕ್ಕಳ ತಜ್ಞರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ಲವ ಸಂವತ್ಸರದ ಸ್ವಾಗತಕ್ಕೆ ಸಜ್ಜಾದ ಜನತೆ
ಮತ್ತೆ ಕುಂಟುತ್ತಾ ಸಾಗಿದ ಫ್ಲೈಓವರ್ ಕಾಮಗಾರಿ : ಮತ್ತೂಮ್ಮೆ ಹೊಸ ಗಡುವು ನಿರೀಕ್ಷೆ!
ಪರ್ಕಳ ರಾ.ಹೆ. ವಿಸ್ತರಣೆ ಕಾಮಗಾರಿ : ಖಾಲಿ ಕಟ್ಟಡಗಳ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿ
ಮಿಸ್ ಯೂನಿವರ್ಸ್ಇಂಟರ್ ನ್ಯಾಷನಲ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ ಉಡುಪಿಯ ಬೆಡಗಿ
ಕಟಪಾಡಿ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ!