Udayavni Special

ಡೀಪ್‌ಸೀ ಬೋಟ್‌ಗಳ ವಿರುದ್ಧ  ಕ್ರಮಕ್ಕೆ ಆಗ್ರಹ

Team Udayavani, Mar 16, 2019, 12:30 AM IST

z-25.jpg

ಮಲ್ಪೆ: ಮಲ್ಪೆಯ ಡೀಪ್‌ಸೀ ಟ್ರಾಲ್‌ಬೋಟ್‌ ಮೀನುಗಾರರು ನಡೆಸುತ್ತಿರುವ ವಿನಾಶಕಾರಿ ಮತ್ತು ಅಕ್ರಮ ಮೀನುಗಾರಿಕೆ ವಿರುದ್ಧ ಇಲಾಖೆ ಇದುವರೆಗೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪರ್ಸಿನ್‌ ಮೀನುಗಾರರೆಲ್ಲರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಮಲ್ಪೆ ಪರ್ಸಿನ್‌ ಮೀನುಗಾರ ಸಂಘ ಎಚ್ಚರಿಸಿದೆ.

ಎಲ್‌ಇಡಿ ಲೈಟನ್ನು ಬಳಸದೇ ಬೆಳಕು ಮೀನುಗಾರಿಕೆ ಮಾಡಬಹುದು ಎಂದು ಉಚ್ಚ ನ್ಯಾಯಾಲಯ ಆದೇಶಿಸಿದ್ದರೂ ಮಂಗಳೂರು ಮತ್ತು ಉಡುಪಿ ಮೀನುಗಾರಿಕೆ ಉಪನಿರ್ದೇಶಕರು ಯಾವುದೇ ರೀತಿಯ ಲೈಟನ್ನು ಉಪಯೋಗಿಸಬಾರದೆಂದು ಲಿಖೀತ ಆದೇಶ ನೀಡಿರುವ ಕಾರಣ ಬಹುತೇಕ ಪಸೀìನ್‌ ಮೀನುಗಾರ ಕಾರ್ಮಿಕರು ಮೀನುಗಾರಿಕೆ ಸ್ಥಗಿತಗೊಳಿಸಿ ನ್ಯಾಯಾಲಯದ ಆದೇಶಕ್ಕೆ ಕಾದು ಬಳಿಕ ತಮ್ಮ ಊರಿಗೆ ಮರಳಿದ್ದಾರೆ. ಈ ಮಧ್ಯೆ ಕೆಲವು ಪರ್ಸಿನ್‌ ಬೋಟಿನವರು ತಮ್ಮ ಕಾರ್ಮಿಕರನ್ನು ಉಳಿಸಿಕೊಳ್ಳುವುದಕ್ಕಾಗಿ ಆಗಾಗ ಮೀನುಗಾರಿಕೆಗೆ ತೆರಳುತಿದ್ದರೇ ವಿನಾ ಬೆಳಕು ಮೀನುಗಾರಿಕೆ ನಡೆಸಿಲ್ಲ ಎಂದು ಸಂಘವು ತಿಳಿಸಿದೆ. ಪರ್ಸಿನ್‌ ಮತ್ತು ಆಳಸಮುದ್ರ ಮೀನುಗಾರರ ಮಧ್ಯೆ ಉಂಟಾದ ಸಮಸ್ಯೆಯನ್ನು ಪರಿಹರಿಸುವಲ್ಲಿ ಮಲ್ಪೆ ಮೀನುಗಾರರ ಸಂಘದ ಮುಖೇನ ಇದುವರೆಗೂ ಯಾವುದೇ ಸಂಧಾನವಾಗಿಲ್ಲವೆಂದು ಯಶೋಧರ ಅಮೀನ್‌ ತಿಳಿಸಿದ್ದಾರೆ.

ಪರಿಹಾರ ಕೊಡಲಿ
ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಪರ್ಸಿನ್‌ ಮತ್ತು ಆಳಸಮುದ್ರ ಮೀನುಗಾರಿಕೆಯ ನಡುವೆ ಇಬ್ಬಗೆಯ ನೀತಿ ತೋರುತ್ತಿದ್ದಾರೆ. ಈಗಾಗಲೇ ಬೆಳಕು ಮೀನುಗಾರಿಕೆಗಾಗಿ ಪರಿವರ್ತನೆ ಮಾಡಿದ ಎಲ್ಲ ಬೋಟುಗಳನ್ನು ಸರಕಾರ ವಶಪಡಿಸಿಕೊಂಡು, ಅವುಗಳ ಮೇಲಿರುವ ಸಾಲ ಮತ್ತು ಈವರೆಗಿನ ನಷ್ಟವನ್ನು ಮೀನುಗಾರರಿಗೆ ಭರಿಸಬೇಕು ಎಂದು ಪರ್ಸಿನ್‌ ಮೀನುಗಾರರು ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳಲ್ಲಿ ಮನವಿ ನೀಡಿ ಆಗ್ರಹಿಸಿದರು. ಮಲ್ಪೆ ಪರ್ಸಿನ್‌ ಮೀನುಗಾರರ ಸಂಘದ ಅಧ್ಯಕ್ಷ ಯಶೋಧರ ಅಮೀನ್‌, ನವೀನ್‌ ಕೋಟ್ಯಾನ್‌, ರಾಮ ಸುವರ್ಣ, ನವೀನ್‌ ಸುವರ್ಣ, ಮಧು ಕರ್ಕೇರ, ಸಂತೋಷ್‌ ಸಾಲ್ಯಾನ್‌, ಚಂದ್ರಕಾಂತ್‌ ಪುತ್ರನ್‌, ವಿಶ್ವನಾಥ್‌ ಉಪಸ್ಥಿತರಿದ್ದರು.

ಆರೋಪಗಳೇನು?
ಡೀಪ್‌ಸೀ ಟ್ರಾಲ್‌ಬೋಟಿನವರು 500 ಅಶ್ವಶಕ್ತಿಯ ಎಂಜಿನ್‌ಬಳಸಿ, 35ಎಂ.ಎಂ. ಕೊಡೆಂಟ್‌ ಬಲೆಯನ್ನು ಉಪಯೋಗಿಸದೇ 10ರಿಂದ 50 ಟನ್‌ ವರೆಗೆ ಮರಿಮೀನನ್ನು (ಚಲ್ಟ್) ಹಿಡಿದು ತಂದು ಮೀನಿನ ಗೊಬ್ಬರಕ್ಕಾಗಿ ಮಾರಾಟ ಮಾಡುತ್ತಿದ್ದಾರೆ. 5ರಿಂದ 10 ಕೆವಿ ಜನರೇಟರನ್ನು ಬೋಟಿನ ಕ್ಯಾಬಿನಿನೊಳಗೆ ಇಟ್ಟು ಬೆಳಕು ಮೀನುಗಾರಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಇಲಾಖಾಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಯಶೋಧರ ಅಮೀನ್‌ ಆರೋಪಿಸಿದ್ದಾರೆ.

ಟಾಪ್ ನ್ಯೂಸ್

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

gvhfghftyt

ಭಾರತೀಯರ ಪ್ರಾಣದ ಜೊತೆ ಪಾಕ್ T-20 ಆಡುತ್ತಿದೆ : ಕೇಂದ್ರದ ವಿರುದ್ಧ ಓವೈಸಿ ವಾಗ್ದಾಳಿ  

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಉಳ್ಳಾಲ: ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ

ಉಳ್ಳಾಲ: ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ

vhfghftght

ಕೋವಿಡ್: ರಾಜ್ಯದಲ್ಲಿಂದು 310 ಹೊಸ ಪ್ರಕರಣ ಪತ್ತೆ | 347 ಸೋಂಕಿತರು ಗುಣಮುಖ 

ಆರು ಮಂದಿ ಸಾಧಕರಿಗೆ 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಆರು ಮಂದಿ ಸಾಧಕರಿಗೆ 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿಯ ಬೆಳವಣಿಗೆಯಲ್ಲಿ “ಹರ್ಷ’ ಪಾತ್ರ ಅಪಾರ: ಸೊರಕೆ

ಉಡುಪಿಯ ಬೆಳವಣಿಗೆಯಲ್ಲಿ “ಹರ್ಷ’ ಪಾತ್ರ ಅಪಾರ: ಸೊರಕೆ

 ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ: ಒಂದು ತಿಂಗಳ ರಾಜಸ್ವ 13.7 ಕೋ.ರೂ.

 ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ: ಒಂದು ತಿಂಗಳ ರಾಜಸ್ವ 13.7 ಕೋ.ರೂ.

ಫ್ರೂಟ್ಸ್‌ ತಂತ್ರಾಂಶ: ಜಿಲ್ಲೆಯಲ್ಲಿ ಶೇ. 48.55ರಷ್ಟು ಮಾತ್ರ ಪ್ರಗತಿ

ಫ್ರೂಟ್ಸ್‌ ತಂತ್ರಾಂಶ: ಜಿಲ್ಲೆಯಲ್ಲಿ ಶೇ. 48.55ರಷ್ಟು ಮಾತ್ರ ಪ್ರಗತಿ

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 1,800 ರೂ. ಬಾಡಿಗೆ ನಿಗದಿ

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 1,800 ರೂ. ಬಾಡಿಗೆ ನಿಗದಿ

ಇನ್ನಂಜೆ – ಶಂಕರಪುರ ರಸ್ತೆ: ಬಾವಿ ದಂಡೆ ಕುಸಿತ

ಇನ್ನಂಜೆ – ಶಂಕರಪುರ ರಸ್ತೆ: ಬಾವಿ ದಂಡೆ ಕುಸಿತ

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

Dr. Death of Geeta no more

ಖ್ಯಾತ ಪ್ರಸೂತಿ ತಜ್ಞೆ ಡಾ. ಗೀತಾ ಮುರಳೀಧರ ನಿಧನ

bhatkala news

ಕಾಲ್ನಡಿಗೆಯಲ್ಲಿ ಪ್ರಪಂಚ ಸುತ್ತಲು ಹೊರಟ ರೋಹನ್ ಅಗರ್‍ವಾಲ್

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

gujgutyuyt

ಮೂವರು ಅಂತಾರಾಜ್ಯ ಸುಲಿಗೆಕೋರರ ಬಂಧನ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.