ಶ್ರೀವಿಶ್ವಪ್ರಿಯ, ಶ್ರೀ ಈಶಪ್ರಿಯತೀರ್ಥರ ಅಂಚೆ ಲಕೋಟೆ ಬಿಡುಗಡೆ

Team Udayavani, Jan 17, 2020, 5:53 AM IST

ಉಡುಪಿ: ಅದಮಾರು ಮಠದ ಪರ್ಯಾಯದ ಪ್ರಯುಕ್ತ ಅಂಚೆ ಇಲಾಖೆ ಹೊರತಂದ ವಿಶೇಷ ಅಂಚೆ ಲಕೋಟೆ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪುರಪ್ರವೇಶ ಮಾಡಿದ ದಿನ ಬಿಡುಗಡೆಯಾಯಿತು.

ಲಕೋಟೆಯಲ್ಲಿ ಅದಮಾರು ಮಠದ ಹಿರಿಯ ವಿಶ್ವಪ್ರಿಯತೀರ್ಥ ಶ್ರೀಗಳು, ಭಾವಿ ಪರ್ಯಾಯ ಪೀಠಾಧಿಪತಿ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀಕೃಷ್ಣಮಠ ಪರಿಸರದ ಚಿತ್ರ ಇದೆ. ಐದು ರೂ. ಅಂಚೆ ಚೀಟಿ ಮತ್ತು ಲಕೋಟೆಯ ಮುದ್ರಣ ವೆಚ್ಚ ಸಹಿತ ಒಟ್ಟು 20 ರೂ. ಇದರೊಂದಿಗೆ ಪರ್ಯಾಯ ನಿರ್ಗಮನ ಯತಿ ವಿದ್ಯಾಧೀಶತೀರ್ಥ ಶ್ರೀಪಾದರ, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಭಾವಚಿತ್ರವನ್ನೊಳಗೊಂಡ ವಿಶೇಷ ಅಂಚೆ ಚೀಟಿ ಅಂದರೆ ಮೈ ಸ್ಟಾಂಪ್‌ ಕೂಡಾ ಲಭ್ಯವಿದೆ.

ನನ್ನ ಅಂಚೆ ಚೀಟಿ
ಸಾರ್ವಜನಿಕರಿಗೆ “ನನ್ನ ಅಂಚೆ ಚೀಟಿ’ಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. 12 ಅಂಚೆ ಚೀಟಿಗಳ ಒಂದು ಹಾಳೆ 300 ರೂ. ಗೆ ದೊರೆಯಲಿದೆ. ವಿಶೇಷ ದಿನಗಳಲ್ಲಿ ಉಡುಗೊರೆ ನೀಡಲು ಇಲ್ಲವೇ ಸಂಘ ಸಂಸ್ಥೆಗಳ ವಾರ್ಷಿಕೋತ್ಸವ, ನೆನಪಿನ ಕಾಣಿಕೆಯನ್ನಾಗಿ ಕೂಡ ನೀಡಬಹುದಾಗಿದೆ. ಪ್ರಸ್ತುತ ಉಡುಪಿ ರಥಬೀದಿಯಲ್ಲಿರುವ ಅಂಚೆ ಇಲಾಖೆಯ ವಿಶೇಷ ಕೌಂಟರ್‌ ಹಾಗೂ ಉಡುಪಿ ಪ್ರಧಾನ ಅಂಚೆ ಇಲಾಖೆ ತೆರೆದ ಕೌಂಟರ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ