ಕೃಷಿಗೆ ಆಫ್ರಿಕನ್‌ ಬಸವನಹುಳು ಕಾಟ: ಬೆಳೆಗಾರರು ಕಂಗಾಲು

Team Udayavani, Jul 15, 2019, 5:41 AM IST

ಕುಂಬಳೆ: ಬರ,ನೆರೆ, ಹಂದಿ,ಮಂಗ,ನವಿಲು ,ಆನೆ ಧಾಳಿಯಿಂದ ಕಂಗೆಟ್ಟಿರುವ ಕೃಷಿಕರು ಒಂದಲ್ಲ ಒಂದು ಸಮಸ್ಯೆಯ ಸುಳಿಯ ಅಡಕತ್ತರಿಯಲ್ಲಿ ಸಿಲುಕುತ್ತಲೇ ಇರುವರು.ಬೆಳೆದ ಬೆಳೆಗಳಿಗೆ ಬೆಲೆ ಕುಸಿತ,ರೋಗ,ರುಜಿನಗಳಿಗೆ ತಾವು ಕಷ್ಟಪಟ್ಟು ಬೆಳೆದ ಕೃಷಿ ನಾಶವಾಗಿ ಕೃಷಿಕರು ಬ್ಯಾಂಕ್‌ ಸಾಲವನ್ನು ಮರುಪಾವತಿಸಲಾಗದೆ ಗಂಭೀರವಾಗಿ ಚಿಂತಿಸುವಂತಾಗಿದೆ.

ತೆಂಗಿಗೆ ಪ್ರಾಣಿಗಳ ಕಾಟ, ಕಂಗಿಗೆ ಕೊಳೆರೋಗ ,ಭತ್ತದ ಬೆಳೆಗೆ ನುಸಿಗಳ ಕಾಟ,ಇತ್ಯಾದಿ ಕಾಡುತ್ತಿರುವ ಸಂದರ್ಭದಲ್ಲಿ ಇದೀಗ ಹೊಸದೊಂದು ಸೇರ್ಪಡೆಯಾಗಿದೆ.ಆಫ್ರಿಕನ್‌ ಬಸವನ ಹುಳು ಎಂಬ ಹುಳು ಕೃಷಿಕರ ಕೃಷಿಗೆ ದಾಳಿ ನಡೆಸುತ್ತಿದೆ.ಹೊಳೆಯ ನರೆನೀರಿನಲ್ಲಿ ಬಂದು ದಡಸೇರಿ ಪಕ್ಕದ ಕೃಷಿ ತೋಟಗಳಲ್ಲಿ ಸೇರಿ ಸಂಸಾರ ಮಾಡುವ ಈ ಹುಳು ಶಂಖವನ್ನು ಹೋಲುತ್ತಿದೆ,

ಚಿಪ್ಪಿನೊಳಗಿರುವ ಈ ಹುಳು ತೆಂಗು, ಕಂಗಿನ ಹಿಂಗಾರ,ಬಾಳೆ,ಭತ್ತ , ತರಕಾರಿಗಳನ್ನು ತಿಂದು ನಾಶ ಮಾಡುತ್ತಿದೆ.ಇದರಿಂದ ರೈತರು ಕಂಗಾಲಾಗಿರುವರು.ಕಾಸರಗೋಡು ಜಿಲ್ಲೆಯ ಪೈವಳಿಕೆ ಮೀಂಜ ಸಹಿತ ಇತರ ಕಡೆಗಳಲ್ಲೂ ಈ ಹುಳುಗಳ ಕಾಟ ಜೋರಾಗಿದೆ.

ಇದನ್ನು ಸುಲಭದಲ್ಲಿ ಸಾಯಿಸಲು ಆಗುವುದಿಲ್ಲ. ಚಿಪ್ಪಿನೊಳಗೆ ಅವಿತಿರುವ ಈ ಜೀವಿಯನ್ನು ಬಡಿದು ಸಾಯಿಸಬೇಕಾಗಿದೆ

ಮಲೆಯಾಳದಲ್ಲಿ ಒಚ್ಚ್ ಎನ್ನುವ ಈ ಜಂತುವಿನ ಅಧ್ಯಯನ ನಡೆಸಲಾಗುತ್ತಿದೆ.ಉಪ್ಪು ನೀರನ್ನು ಸುರಿದಲ್ಲಿ ,ಪಪ್ಪಾಯಿ ಸೊಪ್ಪಿನ ನೀರು,ಹೊಗೆಸೊಪ್ಪಿನ ನೀರು ಹಾಯಿಸಿದಲ್ಲಿ ಹುಳುಗಳು ಸಾಯಲು ಸಾಧ್ಯ.ಕೋಪರ್‌ ಸಲ್ಫೇಟ್ ಸಿಂಪಡಿಸಿದಲ್ಲೂ ಇದನ್ನು ಸಾಯಿಸ ಬಹುದು.ಕೃಷಿಕರಿಗೆ ಮಾರಕವಾಗಿರುವ ಈ ಹುಳುಗಳ‌ ಕುರಿತು ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಪೈವಳಿಕೆ ಪಂಚಾಯತ್‌ ಕೃಷಿ ಭವನದ ಅಧಿಕಾರಿ ತಿಳಿಸಿದ್ದಾರೆ.

– ಅಚ್ಯುತ ಚೇವಾರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ