ಅಕ್ಷರ ಕಲಿಕೆಯೊಂದಿಗೆ ವಿದ್ಯಾರ್ಥಿಗಳಿಗೆ ಕೃಷಿ ಪಾಠ

Team Udayavani, Jul 14, 2019, 5:40 AM IST

akshara-kalike

ಕಾರ್ಕಳ: ಕೃಷಿ ಕಾರ್ಯವನ್ನು ಖುಷಿಯಿಂದಲೇ ಅನುಭವಿಸಿ ಕೃಷಿ ಪ್ರೀತಿ ಮೆರೆದ ಶಾಲಾ ಮಕ್ಕಳು. ಇದು ಕಂಡುಬಂದದ್ದು ಸಾಣೂರು ಬಳಿಯ ಮುರತ್ತಂಗಡಿ ಗದ್ದೆಯಲ್ಲಿ.

ಮಕ್ಕಳಿಗೆ ಕೃಷಿ ಒಲವು ಮೂಡಿಸುವ ನಿಟ್ಟಿನಲ್ಲಿ ಸಾಣೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಮಕ್ಕಳಿಂದ ನಾಟಿ ಕಾರ್ಯ ನಡೆಯಿತು. ಶಾಲೆಯ ಇಕೋ ಕ್ಲಬ್‌ನ ಸುಮಾರು 80 ವಿದ್ಯಾರ್ಥಿಗಳು ಜು. 13ರಂದು ಮುರತ್ತಂಗಡಿ ಸಾಧು ಭಂಡಾರಿಯವರ ಗದ್ದೆಯಲ್ಲಿ ನಾಟಿ ಮಾಡಿದರು. ಇಕೋ ಕ್ಲಬ್‌ ಉಪಾಧ್ಯಕ್ಷ ಅಫ‌Åನ್‌ ನೇತೃತ್ವದಲ್ಲಿ ಒಂದೂವರೆ ಎಕರೆ ಗದ್ದೆಯಲ್ಲಿ ನಾಟಿ ನಡೆಯಿತು.

ಹಡೀಲು ಬಿದ್ದ ಗದ್ದೆ
ಮುರತ್ತಂಗಡಿ ಸಾಧು ಭಂಡಾರಿಯವರು ಕಳೆದ ಹಲವಾರು ವರ್ಷಗಳಿಂದ ಕೆಲಸಗಾರರು ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಬೇಸಾಯ ಮಾಡದೆ ಒಂದೂವರೆ ಎಕರೆ ಗದ್ದೆಯನ್ನು ಹಡೀಲು ಬಿಟ್ಟಿದ್ದರು. ಇದೀಗ ಅಬೂಬಕ್ಕರ್‌ ಸಾಣೂರು ಅವರ ಮನವಿ ಮೇರೆಗೆ ತನ್ನ ಗದ್ದೆಯನ್ನು ನೇಜಿ ನಾಟಿಗೆ ನೀಡಿದ್ದಾರೆ. ಅಬೂಬಕ್ಕರ್‌ ಅವರು ಈ ಗದ್ದೆಯನ್ನು ಹದಮಾಡಿ ಬೇಸಾಯಕ್ಕೆ ಸಿದ್ಧಗೊಳಿಸಿದ್ದಾರೆ. ಹಡೀಲು ಬಿದ್ದ ಭೂಮಿಯಲ್ಲಿ ಕೃಷಿ ಮಾಡುವ ಹವ್ಯಾಸವನ್ನು ಇವರು ಹೊಂದಿದ್ದಾರೆ.

ಸಾಣೂರು ಗ್ರಾ.ಪಂ. ಅಧ್ಯಕ್ಷೆ ರಾಜೇಶ್ವರಿ ತಾವೂ ಮಕ್ಕಳೊಂದಿಗೆ ಗದ್ದೆಗಿಳಿದು ಮಕ್ಕಳಿಗೆ ನೇಜಿ ನಾಟಿ ಕುರಿತು ಮಾಹಿತಿ ನೀಡಿದರು. ಪ್ರಗತಿ ಪರ ಕೃಷಿಕ ನವೀನ್‌ ಚಂದ್ರ ಜೈನ್‌, ಅಬ್ದುಲ್‌ ಲತೀಫ್ ಅವರು ಕೂಡ ಮಾರ್ಗದರ್ಶನ ಮಾಡಿದರು. ಶಿಕ್ಷಕಿ ಲವೀನಾ ಮೆಲ್ವಿಟಾ ನೊರೋನ್ಹಾ, ಸಹಶಿಕ್ಷಕರಾದ ಗಿರೀಶ್‌ ಕುಮಾರ್‌, ಜಾನ್‌ ವಾಲ್ಟರ್‌, ವೃಂದಾ ಪಿ.ಎಸ್‌. ಸಹಕರಿಸಿದರು.

ಅಕ್ಕಿ ಶಾಲೆಗೆ
ಸಾಧು ಭಂಡಾರಿಯವರು ತಮ್ಮ ಗದ್ದೆಯನ್ನು ಬೇಸಾಯಕ್ಕೆ ನೀಡಿದ್ದಾರೆ. ವಕೀಲ ಅನಿಲ್‌ ಹೆಗ್ಡೆ ಎಂ4 ಸಸಿಯನ್ನು ನಾಟಿಗಾಗಿ ಉಚಿತವಾಗಿ ನೀಡಿದ್ದಾರೆ. ಸಂಪೂರ್ಣ ಸಾವಯವ ಮಾದರಿಯಲ್ಲೇ ಭತ್ತ ಬೇಸಾಯ ಮಾಡಲಾಗುವುದು. ಬೆಳೆದ ಭತ್ತವನ್ನು ಅಕ್ಕಿ ಮಾಡಿ ಶಾಲೆಗೆ ನೀಡಲಾಗುವುದು.
-ಅಬೂಬಕ್ಕರ್‌ ಸಾಣೂರು, ಕೃಷಿಕರು

ಹೆಚ್ಚು ಪ್ರಸ್ತುತ
ಬೇಸಾಯದ ಕುರಿತು ಮಕ್ಕಳು ಅಭಿರುಚಿ ಹೊಂದಬೇಕೆನ್ನುವ ನಿಟ್ಟಿನಲ್ಲಿ ನೇಜಿ ನಾಟಿಯಂತಹ ಕಾರ್ಯ ಮಾಡುವುದು ಹೆಚ್ಚು ಪ್ರಸ್ತುತ ಹಾಗೂ ಉಪಯುಕ್ತ. ಇದರಿಂದ ವಿದ್ಯಾರ್ಥಿಗಳಿಗೆ ಅನ್ನದ ಅರಿವು ಮೂಡುವುದರೊಂದಿಗೆ ರೈತನ ಶ್ರಮದ ಕುರಿತು ತಿಳಿಯುತ್ತದೆ.
-ಬಾಬು ಪೂಜಾರಿ, ಮುಖ್ಯ ಶಿಕ್ಷಕರು

ಟಾಪ್ ನ್ಯೂಸ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.