ಶಬರಿಮಲೈಯಲ್ಲಿ ಅಣ್ಣಾಮಲೈ; ಅಲ್ಲೂ ಸೆಲ್ಫಿ ಅಭಿಮಾನಿಗಳು!

Team Udayavani, Jun 18, 2019, 9:49 AM IST

ANNAMALAI

ಕಾಪು: ಕುಟುಂಬದೊಂದಿಗೆ ಕಾಲಕಳೆಯುವ ಇಚ್ಛೆಯೊಂದಿಗೆ ಪೊಲೀಸ್‌ ಹುದ್ದೆಗೆ ರಾಜೀನಾಮೆ ನೀಡಿರುವ ಕರುನಾಡ ಸಿಂಗಂ ಖ್ಯಾತಿಯ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ರವಿವಾರ ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಿದ್ದಾರೆ.

ಅದೇ ಸಂದರ್ಭ ಅಲ್ಲಿದ್ದ ಉಡುಪಿ, ದಕ್ಷಿಣ ಕನ್ನಡ ಮೂಲದ ಅಯ್ಯಪ್ಪ ಭಕ್ತರು ಅಣ್ಣಾಮಲೈ ಅವರನ್ನು ಗುರುತುಹಿಡಿದು ಅವರೊಂದಿಗೆ ಸೆಲ್ಫಿ ತೆಗೆದು ಸಂಭ್ರಮಿಸಿದರು. ತಮಿಳುನಾಡಿನಿಂದ ಬಂದ ಭಕ್ತರೂ ಅಣ್ಣಾಮಲೈ ಹೆಸರು ಕೇಳಿದಾಗ ಅವರೂ ಸೆಲ್ಫಿ ತೆಗೆಸಿಕೊಂಡರು.

ಅಣ್ಣಾಮಲೈ ಅವರು ಟೀ ಶರ್ಟ್‌, ಕಪ್ಪು ಲುಂಗಿ ಧರಿಸಿ ಹೆಗಲಿಗೊಂದು ಕಪ್ಪು ಶಾಲು ಹಾಕಿಕೊಂಡು ಸಂಕ್ರಾಂತಿಯ ದಿನ ಮಣಿಕಂಠನ ದರ್ಶನ ಮಾಡಲು ಶಬರಿಮಲೆಗೆ ಬಂದಿದ್ದರು. ಶಬರಿಮಲೆಯ ಸಂಪ್ರದಾಯದಂತೆ ಹದಿನೆಂಟು ಮೆಟ್ಟಿಲನ್ನೇರಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ ಅವರು ಬೆಟ್ಟ ಹತ್ತಿ, ಇಳಿಯುವ ಸಂದರ್ಭದಲ್ಲೂ ಕರಾವಳಿಯ ಭಕ್ತರ ಜತೆಗೆ ಮುಕ್ತವಾಗಿ ಮಾತುಕತೆ ನಡೆಸಿದರು.

ಸಿಂಗಂ ಜತೆ ಕೈ ಕುಲುಕಿ ಮಾತನಾಡಿದಾಗ ಪೊಲೀಸ್‌ ವೃತ್ತಿಗೆ ಗುಡ್‌ ಬೈ ಹೇಳಿರುವುದು ಸರಿಯಲ್ಲ ಎಂಬ ಮಾತನ್ನೂ ಕೆಲವರು ಹೇಳಿದರೆಂದು ತಿಳಿದು ಬಂದಿದೆ. ಅಣ್ಣಾಮಲೈ ಅವರು ಶಬರಿಮಲೆಗೆ ಭೇಟಿ ನೀಡಿರುವ ವಿಚಾರ ತಿಳಿದು ಸ್ಥಳೀಯ ಪೊಲೀಸ್‌ ವರಿಷ್ಠಾಧಿಕಾರಿಗಳು ಶಬರಿಮಲೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

ಹಲವು ವರ್ಷಗಳ ಕನಸು ನನಸು
ಹಲವು ಸಮಯಗಳ ಹಿಂದೆಯೇ ಶಬರಿಮಲೆಗೆ ತೆರಳುವ ಸಂಕಲ್ಪ ಮಾಡಿದ್ದೆ. ಆದರೆ ಕೆಲಸದ ಒತ್ತಡದಿಂದ ಇದು ಸಾಧ್ಯವಾಗಿರಲಿಲ್ಲ. ಈಗ ಹುದ್ದೆಗೆ ರಾಜೀನಾಮೆ ನೀಡಿರುವುದರಿಂದ ಅದು ಸ್ವೀಕೃತವಾಗಲು ಒಂದೆರಡು ವಾರ ಬೇಕು. ಈಗ ದೇವರ ದರ್ಶನ ಪಡೆಯಲು ಅವಕಾಶ ಸಿಕ್ಕಿದೆ. ಈ ಮೂಲಕ ಹಲವು ವರ್ಷಗಳ ಕನಸು ನನಸಾಗಿದೆ. ಅಯ್ಯಪ್ಪನ ದರ್ಶನದಿಂದ ಹೊಸ ಚೈತನ್ಯ ಸಿಕ್ಕಿದಂತಾಗಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ಮುಂದೇನು ? ಮತ್ತೆ ತಿಳಿಸುವೆ
“ಶಬರಿಮಲೆಯಲ್ಲಿ ಉಡುಪಿಯ ಸ್ನೇಹಿತರು ಸಿಕ್ಕಿರುವುದು ಖುಷಿ ಕೊಟ್ಟಿದೆ. ಸಾಮಾನ್ಯ ವ್ಯಕ್ತಿಯಾಗಿ ಉಡುಪಿಗೆ ಬರಬೇಕೆಂದಿದ್ದೇನೆ. ಈಗ ನಿವೃತ್ತಿಯನ್ನು ಎಂಜಾಯ್‌ ಮಾಡುತ್ತಿದ್ದೇನೆ. ಮುಂದೇನು ಎನ್ನುವ ಬಗ್ಗೆ ಈವರೆಗೆ ಯೋಚನೆ ಮಾಡಿಲ್ಲ. ಮುಂದೆ ಈ ಬಗ್ಗೆ ತಿಳಿಸುತ್ತೇನೆ’ ಅಣ್ಣಾಮಲೈ ಮಾಧ್ಯಮ ಮಿತ್ರರ ಬಳಿ ಹೇಳಿದರು.

ಟಾಪ್ ನ್ಯೂಸ್

ರೈಲಿನಡಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿ ರಕ್ಷಿಸಿದ ವಿದ್ಯಾರ್ಥಿ!

ರೈಲಿನಡಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿ ರಕ್ಷಿಸಿದ ವಿದ್ಯಾರ್ಥಿ!

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

ಸಿದ್ದು v/s ದೊಡ್ಡ ಗೌಡರು; ಪ್ರಧಾನಿ ಜತೆಗಿನ ಭೇಟಿ ವಿಚಾರ ವಾಗ್ವಾದ

ಸಿದ್ದು v/s ದೊಡ್ಡ ಗೌಡರು; ಪ್ರಧಾನಿ ಜತೆಗಿನ ಭೇಟಿ ವಿಚಾರ ವಾಗ್ವಾದ

ನಾಳೆಯಿಂದ ಜವಾರ್‌ ಚಂಡಮಾರುತ ಕಾಟ

ನಾಳೆಯಿಂದ ಜವಾರ್‌ ಚಂಡಮಾರುತ ಕಾಟ

ಕೊಹ್ಲಿ ಆಗಮನ; ಎದುರಾಗಿದೆ ಪ್ರತಿಕೂಲ ಹವಾಮಾನ

ಕೊಹ್ಲಿ ಆಗಮನ; ಎದುರಾಗಿದೆ ಪ್ರತಿಕೂಲ ಹವಾಮಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

ಮಣಿಪಾಲದಲ್ಲಿ ಮತ್ತೆ ಚಿರತೆ ಸದ್ದು!

ಮಣಿಪಾಲದಲ್ಲಿ ಮತ್ತೆ ಚಿರತೆ ಸದ್ದು!

ಉಡುಪಿ: ಮೊದಲ ಡೋಸ್‌ ಶೇ. 94, 2ನೇ ಡೋಸ್‌ ಶೇ. 72 ಸಾಧನೆ

ಉಡುಪಿ: ಮೊದಲ ಡೋಸ್‌ ಶೇ. 94, 2ನೇ ಡೋಸ್‌ ಶೇ. 72 ಸಾಧನೆ

ಖರೀದಿ ಅಕ್ರಮ ಎಸಿಬಿ ಮೂಲಕ ತನಿಖೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ಖರೀದಿ ಅಕ್ರಮ ಎಸಿಬಿ ಮೂಲಕ ತನಿಖೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ

1-sfsdda-etdf

ಮಾಹೆ ಗಾಂಧಿಯನ್ ಸೆಂಟರ್ : ನೊಬೆಲ್ ಪುರಸ್ಕೃತರ ಕೊಡುಗೆಯ ವಿಚಾರಗೋಷ್ಠಿ

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ರೈಲಿನಡಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿ ರಕ್ಷಿಸಿದ ವಿದ್ಯಾರ್ಥಿ!

ರೈಲಿನಡಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿ ರಕ್ಷಿಸಿದ ವಿದ್ಯಾರ್ಥಿ!

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

ಸಿದ್ದು v/s ದೊಡ್ಡ ಗೌಡರು; ಪ್ರಧಾನಿ ಜತೆಗಿನ ಭೇಟಿ ವಿಚಾರ ವಾಗ್ವಾದ

ಸಿದ್ದು v/s ದೊಡ್ಡ ಗೌಡರು; ಪ್ರಧಾನಿ ಜತೆಗಿನ ಭೇಟಿ ವಿಚಾರ ವಾಗ್ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.