ಮಣೂರು-ಪಡುಕರೆಯಲ್ಲಿ ಮತ್ತದೇ ಕಡಲ್ಕೊರೆತದ ಭೀತಿ


Team Udayavani, Jun 9, 2018, 6:35 AM IST

0706kota1e.jpg

ಕೋಟ:  ಮಣೂರು- ಪಡುಕರೆ, ಕೋಡಿಕನ್ಯಾಣ, ಕೋಡಿಬೆಂಗ್ರೆ  ಮುಂತಾದ ಕಡೆ ಪ್ರತಿ ವರ್ಷ ಕಡಲ್ಕೊರೆತ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ದೊರೆತಿಲ್ಲ. ಈ ಬಾರಿಯೂ ಸಮಸ್ಯೆ ಮರುಕಳಿಸುವ ಸಾಧ್ಯತೆ ಇದೆ.

ಹಲವು ವರ್ಷಗಳಿಂದ ಮನವಿ  
ಮಣೂರು  ಪಡುಕರೆಯ ಬಿ.ಬಿ. ಕಾಂಚನ್‌ ರಸ್ತೆಯಿಂದ ಬೈನಾಯ್ಕರ ಮನೆ ತನಕ  200 ಮೀಟರ್‌ ಹಾಗೂ ಮಣೂರು ಜಟ್ಟಿಗೇಶ್ವರ  ದೇವಸ್ಥಾನದ ಹಿಂಬದಿಯಿಂದ ತೆಕ್ಕಟ್ಟೆ ಕೊಮೆಯ ಗಡಿಭಾಗದ ವರೆಗೆ 300 ಮೀಟರ್‌ ತಡೆಗೋಡೆ ನಿರ್ಮಿಸಲು ಬಾಕಿ ಇದೆ. ಇಲ್ಲಿನ  10ಕ್ಕೂ  ಹೆಚ್ಚು ಮನೆಗಳು, ರಸ್ತೆ, ವಿಶಾಲ ತೆಂಗಿನ ತೋಟ   ಪ್ರತಿ ವರ್ಷ ಅಪಾಯಕ್ಕೆ ಸಿಲುಕುತ್ತವೆ.  ಸಮಸ್ಯೆ ಬಗೆಹರಿಸುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಶಾಶ್ವತ ಪರಿಹಾರ ಮರೀಚಿಕೆಯಾಗಿದೆ. 

ಅದೇ ರೀತಿ ಕೋಡಿ ಕನ್ಯಾಣ ದಲ್ಲೂ  500 ಮೀ.ನಷ್ಟು  ತಡೆಗೋಡೆ ಅಗತ್ಯವಿದೆ ಹಾಗೂ ಕೋಡಿಬೆಂಗ್ರೆಯಲ್ಲೂ ಸಮಸ್ಯೆ ಇದೆ.

ತಡೆಗೋಡೆ ಕಲ್ಲು ಸಮುದ್ರಕ್ಕೆ
ಹಲವು ಕಡೆಗಳಲ್ಲಿ  ಸ್ವಲ್ಪ-ಸ್ವಲ್ಪವೇ ಕಾಮಗಾರಿ ಮತ್ತು ತಾತ್ಕಾಲಿಕ ಕಾಮಗಾರಿ ನಡೆಸಿರುವುದರಿಂದ   ಕಡಲ 
ಅಲೆಗಳ ರಭಸಕ್ಕೆ  ತಾತ್ಕಾಲಿಕ ತಡೆಗೋಡೆಯ ಕಲ್ಲುಗಳು  ಸಮುದ್ರ ಸೇರುತ್ತಿದೆ. ಹೀಗಾಗಿ ಶಾಶ್ವತ ಪರಿಹಾರ ಶೀಘ್ರ ಅಗತ್ಯವಿದೆ.

500 ಮೀ. ತಡೆಗೋಡೆ ಬಾಕಿ 
ಮಣೂರು ಪಡುಕರೆಯಲ್ಲಿ  ಕೇವಲ  500 ಮೀ.ನಷ್ಟು ತಡೆಗೋಡೆ ಬಾಕಿ ಇದ್ದು  ಪ್ರತಿ ವರ್ಷ ಅದೇ ಕಡೆ  ಕಡಲ್ಕೊರೆತ ಹೆಚ್ಚುತ್ತಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಕಳೆದ ಬಾರಿ ಕಾಮ ಗಾರಿ ಆರಂಭಿಸುವ ಭರವಸೆ ಕೂಡ ದೊರೆತಿತ್ತು. ಆದರೆ ಕೆಲಸ ಮಾತ್ರ ನಡೆಯಲಿಲ್ಲ. ಈ ವರ್ಷವಾದರು  ಸಮಸ್ಯೆಯನ್ನು ಗಂಭೀರವಾಗಿ ಸ್ವೀಕರಿಸಿ ಕಾರ್ಯಪ್ರವೃತ್ತರಾಗಬೇಕು.
– ಭುಜಂಗ ಗುರಿಕಾರ, ಕೋಟ ಗ್ರಾ.ಪಂ. ಸದಸ್ಯರು.

ಕಡಲ್ಕೊರೆತ ಸಮಸ್ಯೆ 
ಕೋಡಿಕನ್ಯಾಣದಲ್ಲಿ ಸುಮಾರು 500ಮೀಟರ್‌ ಕಡಲ್ಕೊರೆತದ ಸಮಸ್ಯೆ ಇದ್ದು ತಡೆಗೋಡೆ ನಿರ್ಮಿಸುವ ಸಲುವಾಗಿ ದಡದಲ್ಲಿ ಕಲ್ಲು ತಂದು ರಾಶಿ ಹಾಕಲಾಗಿದೆ. ಆದರೆ ಕಾಮಗಾರಿ ಆರಂಭಿಸಿಲ್ಲ. ಇದೀಗ ಮಳೆಗಾಲ ಆರಂಭವಾಗಿರುವುದರಿಂದ ಇನ್ನು ಕಾಮಗಾರಿ ನಡೆಸುವುದು ಕಷ್ಟ.. ಹೀಗಾಗಿ ಇಲ್ಲಿನ ರಸ್ತೆ, ತೆಂಗಿನ ತೋಟಕ್ಕೆ ಈ ಬಾರಿ ಹಾನಿಯಾಗುವ ಸಂಭವವಿದೆ. ಜೋಡಿಸದಿರುವುದರಿಂದ ಕಲ್ಲುಗಳು  ಸಮುದ್ರ ಸೇರಲಿವೆ. ಈ ಕುರಿತು ಸಂಬಂಧಪಟ್ಟವರು ಗಮನಹರಿಸಬೇಕು.
– ಜಯಂತ್‌ ಅಮೀನ್‌ ಕೋಡಿಕನ್ಯಾಣ, ಸ್ಥಳೀಯ ನಿವಾಸಿ

ಟಾಪ್ ನ್ಯೂಸ್

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!

Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.