ಅನುಪಮ ಸಾಂಸ್ಕೃತಿಕ ಸಂಘಟಕ ವಿಜಯನಾಥ ಶೆಣೈ: ಪೇಜಾವರ ಶ್ರೀ

Team Udayavani, Mar 25, 2017, 3:51 PM IST

240317uke2.jpg

ಉಡುಪಿ: “”ವಿಜಯನಾಥ ಶೆಣೈ ಎಂಬ ಹೆಸರು ಕೇಳಿದ ಕೂಡಲೇ ಉಡುಪಿಯ ಹಲವು ದಶಕಗಳ ಸಾಂಸ್ಕೃತಿಕ ಇತಿಹಾಸದ ಘಟನೆಗಳು ಕಣ್ಣೆದುರು ಬರುತ್ತವೆ. ಅವರು ಕಲೆ, ಸಂಗೀತಾದಿ ಕ್ಷೇತ್ರಗಳ ಸಮರ್ಥ ಸಂಘಟಕರಾಗಿದ್ದುದನ್ನು ಗಮನಿಸಿ 1968ರ ನಮ್ಮ ದ್ವಿತೀಯ ಪರ್ಯಾಯ ಮಹೋತ್ಸವದ ಹೊಣೆಗಾರಿಕೆಯನ್ನು ಅವರಿಗೆ ವಹಿಸಿದ್ದೆವು” ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ನುಡಿದರು. 

ವಿಜಯನಾಥ ಶೆಣೈಯವರ ಪತ್ನಿ ಮಂಜುಳಾ ಶೆಣೈ, ಮಕ್ಕಳಾದ ಶ್ರೀನಿವಾಸ ಶೆಣೈ ಮತ್ತು ಅನುರೂಪಾ ಶೆಣೈ ಅವರನ್ನು ಶ್ರೀಮಠಕ್ಕೆ ಕರೆಸಿ ಅನುಗ್ರಹಿಸಿದ ಶ್ರೀಪಾದರು, “”ಪರ್ಯಾಯೋತ್ಸವದಂಥ ಧಾರ್ಮಿಕ ಸಂಭ್ರಮಕ್ಕೆ ಸಾಂಸ್ಕೃತಿಕ ಆಯಾಮ ನೀಡುವಲ್ಲಿ ವಿಜಯನಾಥ ಶೆಣೈ ಕೊಡುಗೆ ಮಹಣ್ತೀದ್ದು. ಹತ್ತು ಪರ್ಯಾಯ ಮಹೋತ್ಸವಗಳಲ್ಲಿ ಅವರು ಸಕ್ರಿಯರಾಗಿ ತೊಡಗಿಸಿ ಕೊಂಡರು. ಕಲಾತ್ಮಕವಾದ ಸ್ತಬ್ಧಚಿತ್ರ ಗಳನ್ನು ಸಂಯೋಜಿಸಿ ಪರ್ಯಾಯ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದರು. 

ವಾದಿರಾಜ ತೀರ್ಥರ 400ನೆಯ ವರ್ಷಾಚರಣೆ, ಶ್ರೀಕೃಷ್ಣ ಪ್ರತಿಷ್ಠಾ ಸಪ್ತಶತಮಾನೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ, ಶ್ರೀರಾಮನವಮಿ, ವಿಜಯದಶಮಿ ಮುಂತಾದ ಕಾರ್ಯಕ್ರಮಗಳನ್ನು ವಿಶಿಷ್ಟವಾಗಿ ಆಚರಿಸುವಲ್ಲಿ ಶೆಣೈಯವರ ಪರಿಶ್ರಮವನ್ನು ಮೆಚ್ಚುಗೆಯಿಂದ ಗಮನಿಸಿದ್ದೇನೆ” ಎಂದರು.
 
“”ಪ್ರತಿ ಕಾರ್ಯಕ್ರಮವನ್ನು ಸಂಪೂರ್ಣ ವಿನ್ಯಾಸಗೊಳಿಸಿ, ಬಳಿಕ ತಾವು ತೆರೆಯ ಮರೆಯಲ್ಲಿ ಇದ್ದು ಬಿಡುವ ನಿರ್ಮಮಕಾರದ ವ್ಯಕ್ತಿತ್ವ ಅವರದು. ವಿಶ್ವಖ್ಯಾತಿಯ ಕಲಾವಿದರನ್ನು ಉಡುಪಿಗೆ ಕರೆಸಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಸಂಘಟಿಸಿದ ವಿಜಯನಾಥ ಶೆಣೈ ಸಾಂಪ್ರದಾಯಿಕ ವಾಸ್ತುಸೌಂದರ್ಯದ ಹಸ್ತಶಿಲ್ಪ, ಹೆರಿಟೇಜ್‌ ವಿಲೇಜ್‌ಗಳನ್ನು ನಿರ್ಮಿಸಿ ಸಮಾಜಕ್ಕೆ ಮಾದರಿಯಾದರು” ಎಂದು ಶ್ರೀಪಾದರು ನುಡಿದರು.
 
ಶ್ರೀಮಠದ ವಿಷ್ಣುಮೂರ್ತಿ ಆಚಾರ್ಯ, ಎಸ್‌.ವಿ. ಭಟ್‌, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ  ಕಡೆಕಾರ್‌, ಆರ್ಟಿಸ್ಟ್‌ ಫೋರಮ್‌ ಅಧ್ಯಕ್ಷ ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.
 
ಟಾಪ್ ನ್ಯೂಸ್

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.