ದುರಸ್ತಿಗೆ ಇನ್ನೂ ಕೂಡಿ ಬರದ ಕಾಲ


Team Udayavani, Mar 17, 2020, 5:39 AM IST

ದುರಸ್ತಿಗೆ ಇನ್ನೂ ಕೂಡಿ ಬರದ ಕಾಲ

ಗೋಳಿಯಂಗಡಿ: ಹೆಂಗವಳ್ಳಿಯ ಗ್ರಾಮಕರಣಿಕರ ಕಚೇರಿ ಕಟ್ಟಡ ಸಂಪೂರ್ಣ ಶಿಥಿಲ ಗೊಂಡಿದ್ದು, ಇನ್ನೂ ದುರಸ್ತಿಗೆ ಮಾತ್ರ ಕಾಲವೇ ಕೂಡಿ ಬಂದಿಲ್ಲ. ಕಟ್ಟಡ ಬಿದ್ದು ಹೋಗುವ ಹಂತದಲ್ಲಿದ್ದು, ಆದರೂ ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಈ ಬಗ್ಗೆ ಗಮನವೇ ಹರಿಸುತ್ತಿಲ್ಲ.

ಹೆಂಗವಳ್ಳಿ ಪಂಚಾಯತ್‌ ವ್ಯಾಪ್ತಿಯ ತೊಂಭತ್ತು ಶಾಲಿಗುಡ್ಡೆ ಬಳಿ ಕಾರ್ಯಾ ಚರಿಸುತ್ತಿರುವ ಗ್ರಾಮಕರಣಿಕರ ಕಚೇರಿ ಕಂದಾಯ ಇಲಾಖೆಗೆ ಸೇರಿದ್ದು, ಈ ಕಟ್ಟಡದಲ್ಲಿ ಗ್ರಾಮಕರಣಿಕರ ಕಚೇರಿ ಹಾಗೂ ವಸತಿ ಗೃಹ ಇದೆ. ಈ ಕಟ್ಟಡವು 5 ವರ್ಷಗಳ ಹಿಂದೆಯೇ ಶಿಥಿಲಗೊಂಡು ದುರಸ್ತಿಯಾಗದೇ ಬೀಳುವ ಹಂತಕ್ಕೆ ತಲುಪಿತ್ತು. ಆ ಸಂದರ್ಭದಲ್ಲಿ ವಸತಿಗೃಹದ ಭಾಗ ಮಾತ್ರ ದುರಸ್ತಿ ಮಾಡಲಾಗಿತ್ತು.

ಪ್ರಸ್ತುತ ಈ ಕಚೇರಿಯು ವಸತಿ ಗೃಹದಲ್ಲಿಯೇ ಇದೆ. ಪ್ರಸ್ತುತ ಇಲ್ಲಿರುವ ಗ್ರಾಮಕರಣಿಕರು ಇದರ ಪಕ್ಕದಲ್ಲೇ ಇರುವ ಸಣ್ಣ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಚೇರಿಯ ಒಳಭಾಗದಲ್ಲಿ ಕುಳಿತುಕೊಳ್ಳಲು ಹಾಗೂ ಫೈಲ್‌ಗ‌ಳನ್ನು ಸಂಗ್ರಹಿಸಿ ಇಡಲು ಸೂಕ್ತವಾದ ವ್ಯವಸ್ಥೆಯೂ ಇಲ್ಲದಂತಾಗಿದೆ.
ಕಟ್ಟಡದ ಒಂದು ಭಾಗವು ಶಿಥಿಲಗೊಂಡು ಕೆಲವೆಡೆ ಮೇಲಿನ ಮಾಡು ಹೋಗಿದೆ. ಕಟ್ಟಡದ ಒಳ ಭಾಗದಲ್ಲೇ ಮುರಿದು ಬಿದ್ದ ಪಕ್ಕಾಸು, ಹೆಂಚಿನ ರಾಶಿಗಳು ಇನ್ನೂ ಕೂಡ ಹಾಗೆಯೇ ಇವೆ. ಕಿಟಿಕಿ, ಬಾಗಿಲುಗಳು ಮುರಿದು ಹೋಗಿದ್ದು ಪ್ರಾಣಿಗಳ ವಾಸಸ್ಥಳವಾಗಿದೆ.

ಸುದಿನ ವರದಿ
ಹೆಂಗವಳ್ಳಿಯ ಈ ಗ್ರಾಮ ಕರಣಿಕರ ಕಚೇರಿಯು ಕಳೆದ 3 ವರ್ಷಗಳಿಂದ ದುರಸ್ತಿಯಾಗದ ಬಗ್ಗೆ, ಬೀಳುವ ಸ್ಥಿತಿಯ ಕುರಿತಂತೆ “ಉದಯವಾಣಿ ಸುದಿನ’ವು ಜ. 24ರಂದು ವಿಸ್ತೃತ ವರದಿಯನ್ನು ಪ್ರಕಟಿಸಿತ್ತು.

ದುರಸ್ತಿಗೆ ಆಗ್ರಹ
ಮಳೆಗಾಲದಲ್ಲಿ ಮಳೆ ನೀರು ಕಟ್ಟಡದ ಒಳಭಾಗದಲ್ಲಿ ಶೇಖರಣೆಯಾಗುತ್ತಿತ್ತು. ಪಕ್ಕದ ಕಚೇರಿಯ ಗೋಡೆಗಳು ತೇವಾಂಶದಿಂದ ಕೂಡಿರುತ್ತಿದ್ದವು. ಮಳೆ ನೀರು ನಿಂತ ಪರಿಣಾಮ ಈಗ ಹಳೆಯ ಗೋಡೆಯು ಕೂಡ ಕುಸಿದು ಬೀಳುವ ಹಂತ ತಲುಪಿದೆ. ಈ ಬಾರಿಯಾದರೂ ಮಳೆಗಾಲಕ್ಕೆ ಮುನ್ನ ಈ ಕಟ್ಟಡವನ್ನು ದುರಸ್ತಿ ಮಾಡಲಿ ಎನ್ನುವುದಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಾಕೃತಿಕ ವಿಕೋಪ ನಿಧಿ ಬಳಕೆ
ಈ ಬಗ್ಗೆ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಆದರೆ ಸದ್ಯಕ್ಕೆ ದುರಸ್ತಿಗೆ ಅನುದಾನ ಲಭ್ಯವಿರದ ಕಾರಣ, ಪ್ರಾಕೃತಿಕ ವಿಕೋಪ ನಿಧಿಯಡಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು. ಹೆಂಗವಳ್ಳಿ ಪಂಚಾಯತ್‌ ಕಚೇರಿಯಲ್ಲಿಯೂ ಗ್ರಾಮ ಕರಣಿಕರ ಕಚೇರಿಗೆ ಗ್ರಾ.ಪಂ. ವ್ಯವಸ್ಥೆ ಮಾಡಿಕೊಡಬಹುದು.
– ತಿಪ್ಪೇಸ್ವಾಮಿ, ತಹಶೀಲ್ದಾರ್‌,ಕುಂದಾಪುರ

ಟಾಪ್ ನ್ಯೂಸ್

ಸೈದಾಪುರ: ಯಾದಗಿರಿ ಜಿಲ್ಲೆಗೆ ದ್ವಿತೀಯ  ಸ್ಥಾನ ಪಡೆದ ವಿಮರ್ಶಳಿಗೆ ಜಿಲ್ಲಾಧಿಕಾರಿಯಾಗುವ ಆಸೆ

ಸೈದಾಪುರ: ಯಾದಗಿರಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ವಿಮರ್ಶಳಿಗೆ ಜಿಲ್ಲಾಧಿಕಾರಿಯಾಗುವ ಆಸೆ

1-asdad

ಪಿಎಫ್ ಐ ಸೇರಿ ಎಲ್ಲಾ ಕೋಮು ಸಂಘಟನೆ ಬ್ಯಾನ್ ಮಾಡಿ: ಎಂ.ಬಿ.ಪಾಟೀಲ್

ದೋಟಿಹಾಳ:  ಮಳೆ ನೀರಿಯಿಂದ ಜಲಾವೃತಗೊಂಡ ಮುದೇನೂರ ಶಾಲಾ ಆವರಣ

ದೋಟಿಹಾಳ:  ಮಳೆ ನೀರಿಯಿಂದ ಜಲಾವೃತಗೊಂಡ ಮುದೇನೂರ ಶಾಲಾ ಆವರಣ

ಜ್ಞಾನವಾಪಿ ಮಸೀದಿ ವಿವಾದ: ಕೋರ್ಟ್ ಗೆ ಸಲ್ಲಿಸಿದ ಸಮೀಕ್ಷೆಯ ವರದಿಯಲ್ಲೇನಿದೆ?

ಜ್ಞಾನವಾಪಿ ಮಸೀದಿ ವಿವಾದ: ಕೋರ್ಟ್ ಗೆ ಸಲ್ಲಿಸಿದ ಸಮೀಕ್ಷೆಯ ವರದಿಯಲ್ಲೇನಿದೆ?

1-sf-s-d-fsf

ಸಾಧನೆಗೆ ಬಡತನವೇ ಪ್ರೇರಣೆ :ಗೋವಾಕ್ಕೆ ಗುಳೆ ಹೋಗಿರುವ ಕಾರ್ಮಿಕನ‌ ಮಗ ಟಾಪರ್

ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಕಾರು

ಚಿಕ್ಕಮಗಳೂರು : ಸೇತುವೆಗೆ ಢಿಕ್ಕಿ ಹೊಡೆದು ಗದ್ದೆಗೆ ಉರುಳಿ ಬಿದ್ದ ಕಾರು, ಪ್ರಯಾಣಿಕರು ಪಾರು

1-fdsfsd

ಎಸ್‌ಎಸ್ಎಲ್‌ಸಿ ಫಲಿತಾಂಶ : ಗ್ರೇಡಿಂಗ್ ವ್ಯವಸ್ಥೆಯಲ್ಲಿ ಜಿಲ್ಲಾವಾರು ಸ್ಥಾನವಿಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ: ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋದ ವಿದ್ಯಾರ್ಥಿಗೆ 625 ಅಂಕ

ಉಡುಪಿ: ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗೆ 625 ಅಂಕ

ಕಾಪು: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಮೂರು ಕಾರುಗಳು ಜಖಂ

ಕಾಪು: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಮೂರು ಕಾರುಗಳು ಜಖಂ

dengue-fever

ಡೆಂಗ್ಯೂ ಕಟ್ಟೆಚ್ಚರ ವಹಿಸಲು ತಾ.ಪಂ. ಆಡಳಿತಾಧಿಕಾರಿ ಸೂಚನೆ

agriculture-activity

ಗರಿಗೆದರಿದ ಕೃಷಿ ಚಟುವಟಿಕೆ

jaladi

ನದಿದಂಡೆ ಕಾಮಗಾರಿಗೆ ಇಂದು ಶಾಸಕರಿಂದ ಶಿಲಾನ್ಯಾಸ

MUST WATCH

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಬಸ್ಸು ಚಲಾಯಿಸಿ ಚಾಲನೆ ನೀಡಿದ ಶಾಸಕ ಯು.ಟಿ. ಖಾದರ್

udayavani youtube

ಕಾರ್ಖಾನೆಯ ಗೋಡೆ ಕುಸಿದು 12 ಮಂದಿ ಕಾರ್ಮಿಕರ ಸಾವು

udayavani youtube

ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರ ಮಾರಾಮಾರಿ ! ವಿಡಿಯೋ ವೈರಲ್ ..

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

ಹೊಸ ಸೇರ್ಪಡೆ

ದಶಕದ ಪ್ರಯತ್ನದ ಫಲ ಆರ್‌ಡಿಎ ಕಚೇರಿ

ದಶಕದ ಪ್ರಯತ್ನದ ಫಲ ಆರ್‌ಡಿಎ ಕಚೇರಿ

ಸೈದಾಪುರ: ಯಾದಗಿರಿ ಜಿಲ್ಲೆಗೆ ದ್ವಿತೀಯ  ಸ್ಥಾನ ಪಡೆದ ವಿಮರ್ಶಳಿಗೆ ಜಿಲ್ಲಾಧಿಕಾರಿಯಾಗುವ ಆಸೆ

ಸೈದಾಪುರ: ಯಾದಗಿರಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ವಿಮರ್ಶಳಿಗೆ ಜಿಲ್ಲಾಧಿಕಾರಿಯಾಗುವ ಆಸೆ

1-asdad

ಪಿಎಫ್ ಐ ಸೇರಿ ಎಲ್ಲಾ ಕೋಮು ಸಂಘಟನೆ ಬ್ಯಾನ್ ಮಾಡಿ: ಎಂ.ಬಿ.ಪಾಟೀಲ್

ದೋಟಿಹಾಳ:  ಮಳೆ ನೀರಿಯಿಂದ ಜಲಾವೃತಗೊಂಡ ಮುದೇನೂರ ಶಾಲಾ ಆವರಣ

ದೋಟಿಹಾಳ:  ಮಳೆ ನೀರಿಯಿಂದ ಜಲಾವೃತಗೊಂಡ ಮುದೇನೂರ ಶಾಲಾ ಆವರಣ

ತಂಬಾಕು ಉತ್ಪನ್ನ ಮಾರಾಟಕ್ಕೆ ನಿರ್ಬಂಧ

ತಂಬಾಕು ಉತ್ಪನ್ನ ಮಾರಾಟಕ್ಕೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.