ದಂಪತಿಗೆ ಹಲ್ಲೆ; ನಗ, ನಗದು ದರೋಡೆ

Team Udayavani, Feb 5, 2018, 2:00 PM IST

ಕಾರ್ಕಳ: ಮನೆಯವರು ಮಲಗಿದ್ದ ವೇಳೆ  ಹಿಂಬಾಗಿಲು ಒಡೆದು  ಒಳ ನುಗ್ಗಿದ ದರೋಡೆಕೋರರು ದಂಪತಿ ಮೇಲೆ ಮಾರಣಾಂತಿಕ ಹÇÉೆ ನಡೆಸಿ ಅಪಾರ ಪ್ರಮಾಣದ ನಗ-ನಗದು ದೋಚಿ ಪರಾರಿಯಾದ ಘಟನೆ ಕಾರ್ಕಳ ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಜಂಕ್ಷನ್‌ನಲ್ಲಿ  ಶನಿವಾರ ರಾತ್ರಿ ಸಂಭವಿಸಿದೆ.

ಸಂಜೀವ್‌ ನಾಯ್ಕ  ಅವರ ಮನೆ ಯಲ್ಲಿ  ಕೃತ್ಯ ನಡೆದಿದ್ದು, ಕಪಾಟಿನಲ್ಲಿದ್ದ 21 ಪವನ್‌ ಚಿನ್ನ  (4 ಚಿನ್ನದ ಬಳೆಗಳು, 4 ಉಂಗುರಗಳು, ಹವಳದ ಮಾಲೆ ಹಾಗೂ ಲಕ್ಷ್ಮೀ ಪೆಂಡೆಂಟ್‌ನ ಸರ), ದುಬಾರಿ ಮೊಬೈಲ್‌   ಹಾಗೂ 1 ಲ.ರೂ.ನಗದನ್ನು ದರೋಡೆ ಮಾಡಲಾ ಗಿದೆ. ಇಮಿಟೇಟ್‌ ಗೋಲ್ಡ್‌ನ ಸರವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಹಲ್ಲೆಗೊಳ ಗಾದ  ಸಂಜೀವ್‌ ನಾಯ್ಕ ಹಾಗೂ ಅವರ ಪತ್ನಿ ಯಶೋದಾ ಅವರನ್ನು  ಸ್ಥಳೀಯರ ನೆರವಿನಿಂದ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಮಾರಕಾಯುಧ ತೋರಿಸಿ ಬೆದರಿಕೆ
ದರೋಡೆಕೋರರು ದಂಪತಿಗೆ  ಮಾರಕಾಯುಧ  ತೋರಿಸಿ ಬೆದರಿಸಿ, ಹಲ್ಲೆ ನಡೆಸಿದ್ದಾರೆ.  ಬೊಬ್ಬೆ ಹಾಕದಂತೆ ಅವರ ಮುಖವನ್ನು ತಲೆದಿಂಬಿನಿಂದ ಮುಚ್ಚಿದ್ದಾರೆ. ಪರಿಣಾಮ ಸಂಜೀವ್‌ ನಾಯ್ಕ… ಸ್ಥಳದಲ್ಲೇ ವಾಂತಿ ಮಾಡಿ¨ªಾರೆ. ಕಿರುಚಾಡಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆಯೊಡ್ಡಿ ¨ªಾರೆ.  ದರೋಡೆಕೋರರು ಮನೆಯ ಕಪಾಟು ಸಹಿತ ಪ್ರತಿಯೊಂದು ಭಾಗದಲ್ಲೂ ಜಾಲಾಡಿ ಹಿಂಬದಿ ಬಾಗಿಲಿನಿಂದಲೇ ಹೊರ ಹೋಗಿ, ಮುಖ್ಯ ರಸ್ತೆಗೆ ಬಾರದೆ ಬೇರೆ ದಾರಿಯಿಂದ ತೆರಳಿದ್ದಾರೆ. 

ಸಂಜೀವ್‌ ನಾಯ್ಕ… ವಿಜಯ ಬ್ಯಾಂಕಿನ ನಿವೃತ್ತ ಉದ್ಯೋಗಿ ಯಾಗಿದ್ದು, ಯಶೋದಾ ಅವರು ಬಂಗ್ಲಗುಡ್ಡೆ ಸಮೀಪವಿರುವ ಬಿಎಸ್‌ಎನ್‌ಎಲ್‌ ಉದ್ಯೋಗಿಯಾಗಿದ್ದಾರೆ.  ಮನೆಯಲ್ಲಿ ಇವರಿಬ್ಬರೇ ಇದ್ದು,  ಮಗ ಮತ್ತು ಸೊಸೆ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. 

ಸ್ಥಳಕ್ಕೆ ಕಾರ್ಕಳ ಎಎಸ್ಪಿ ಋಷಿಕೇಶ್‌ ಸೋನಾವನೆ, ಕಾರ್ಕಳ ವೃತ್ತ ನಿರೀಕ್ಷಕ ಜಾಯ್‌ ಅಂತೋನಿ, ನಗರ ಪಿಎಸ್‌ಐ ನಂಜಾ ನಾಯ್ಕ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನದಳವನ್ನೂ ಕರೆಸಲಾಗಿದ್ದು,  ಶ್ವಾನವು ಕಳ್ಳರು ತೆರಳಿದ ದಾರಿಯಲ್ಲಿ 100 ಮೀ. ದೂರ ಸಂಚರಿಸಿದೆ. ಮುಂದೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,   ಶೋಧ ಕಾರ್ಯ ಮುಂದುವರಿದಿದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ