Udupi: ಬಾಡಿಗೆ ವಿಚಾರಕ್ಕೆ ರಿಕ್ಷಾ ಚಾಲಕನ ಮೇಲೆ ಹಲ್ಲೆ
Team Udayavani, Aug 3, 2024, 9:44 PM IST
ಉಡುಪಿ: ರಿಕ್ಷಾ ಬಾಡಿಗೆ ವಿಚಾರಕ್ಕೆ ಸಂಬಂಧಿಸಿ ಆಟೋ ಚಾಲಕರ ತಂಡವೊಂದು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರ ನಗರದಲ್ಲಿ ನಡೆದಿದೆ.
ಪ್ರತಾಪ್ ಚಂದ್ರ(38), ಹಲ್ಲೆಗೊಳಗಾದ ರಿಕ್ಷಾ ಚಾಲಕ. ಶನಿವಾರ ಗಾಂಧಿ ಆಸ್ಪತ್ರೆ ಬಳಿ ಆಟೋ ನಿಲ್ಲಿಸಿದ್ದ ಪ್ರತಾಪ್ಚಂದ್ರ ಅವರಿಗೆ ಪರಿಚಯದ ರಿಕ್ಷಾ ಚಾಲಕರಾದ ಮಿಥುನ್ , ಗುರುಪ್ರಸಾದ್, ಪ್ರಸಾದ್ ಅವರು ಆಟೋ ರಿಕ್ಷಾದಲ್ಲಿ ಬಂದು ನೀನು ಇಲ್ಲಿ ರಿಕ್ಷಾವನ್ನು ನಿಲ್ಲಿಸಬಾರದು ಎಂದು ತಿಳಿಸಿದ್ದಾರೆ. ಅನಂತರ ಊಟಕ್ಕೆ ಮನೆಗೆ ತೆರಳಿದ ಪ್ರತಾಪ್ ಚಂದ್ರ ಅವರು ಬನ್ನಂಜೆ ಗರಡಿ ರಸ್ತೆ ಕಡೆಗೆ ತೆರಳುತ್ತಿರುವಾಗ ಮಿಥುನ್,ಗುರುಪ್ರಸಾದ್ ಮತ್ತು ಪ್ರಸಾದ್ ಅವರು ಮಿಥುನ್ ಅವರ ರಿಕ್ಷಾದಲ್ಲಿ ಅಡ್ಡಗಟ್ಟಿ ಮೂವರು ಸೇರಿ ಅವಾಚ್ಯವಾಗಿ ನಿಂದಿಸಿದ್ದಾರೆ. ಕೋಲಿನಿಂದ ಹೊಡೆದು, ಸೂðಡ್ರೈವರ್ನಿಂದ ಹೊಟ್ಟೆ, ಎದೆಗೆ ಚುಚ್ಚಿ, ಕಾಲಿನಿಂದ ತುಳಿದಿದ್ದಾರೆ. ಮನೆಗೂ ತೆರಳಿ ಪ್ರತಾಪ್ಚಂದ್ರ ಅವರ ಹೆಂಡತಿಗೆ ನಿನ್ನ ಗಂಡನನ್ನು ಈ ದಿನ ಪುಡಿ ಮಾಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡಿರುವ ಚಾಲಕ ಪ್ರತಾಪ್ ಚಂದ್ರ ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Brahmavar; ಹಾವಂಜೆ ಕೋಳಿ ಅಂಕಕ್ಕೆ ಪೊಲೀಸರ ದಾಳಿ
ಬಿಡುಗಡೆಯಾಗದ ಗೌರವ ಧನ… ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಸಹಾಯಕಿ
Heavy Rain: ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ… ಬಡಾವಣೆಗಳಿಗೆ ನುಗ್ಗಿದ ನೀರು
BJP vs AAP: ಸಿಎಂ ಅಧಿಕೃತ ನಿವಾಸ ಅಕ್ರಮ ಬಳಕೆ ಆರೋಪ; ಮನೆ ಖಾಲಿ ಮಾಡಿದ ಅತಿಶಿ?
Kundapura: ನಕಲಿ ಚಿನ್ನ ಕೊಟ್ಟು ಅಸಲಿ ಚಿನ್ನ ಪಡೆದು ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.