ರಸ್ತೆಯಲ್ಲಿ ಸಿಕ್ಕಿದ ಬ್ಯಾಗನ್ನು ವಾರಿಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾಚಾಲಕ
Team Udayavani, Feb 23, 2021, 4:10 PM IST
ಕಟಪಾಡಿ: ರಿಕ್ಷಾ ಚಾಲಕನೋರ್ವ ತನಗೆ ಸಿಕ್ಕಿದ ನಗದು, ಮೊಬೈಲ್ ಸಹಿತ ಇತರೇ ಅಮೂಲ್ಯ ವಸ್ತುಗಳನ್ನು ಹೊಂದಿದ್ದ ಬ್ಯಾಗ್‍ನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆಯ ಉಡುಪಿಯ ಕಟಪಾಡಿಯಲ್ಲಿ ನಡೆದಿದೆ.
ಪಲಿಮಾರು ಮೂಲದ ರಾಘವೇಂದ್ರ ರಾವ್ ಎಂಬವರು ಪತ್ನಿ ಸಹಿತರಾಗಿ ಉಡುಪಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭ ಸ್ಕೂಟಿಯ ಮುಂಭಾಗದಲ್ಲಿ ಇರಿಸಲಾಗಿದ್ದ ಲೇಡಿಸ್ ಬ್ಯಾಗ್‍ನ್ನು ಕಳೆದುಕೊಂಡಿದ್ದರು. ಬ್ಯಾಗ್‍ನಲ್ಲಿ ಸುಮಾರು 25 ಸಾವಿರ ರೂ.ಗೂ ಅಧಿಕ ನಗದು, 3 ಪರ್ಸ್, 2 ಮೊಬೈಲ್, 2 ಎಟಿಎಂ ಕಾರ್ಡ್ ಸಹಿತ ಇತರೇ ಮೌಲ್ಯಯುತ ವಸ್ತುಗಳಿದ್ದವು.
ಇದನ್ನೂ ಓದಿ:ದೈನಂದಿನ ವೆಚ್ಚ ಭರಿಸಲು ಪರದಾಟ! ಎಪಿಎಂಸಿ ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣ
ಕಟಪಾಡಿಯ ರಿಕ್ಷಾ ಚಾಲಕ ಕುಶ ಶ್ರೀಯಾನ್ ಅವರಿಗೆ ಈ ಬ್ಯಾಗ್ ಸಿಕ್ಕದ್ದು, ಸಹೋದ್ಯೋಗಿ ಭಾಸ್ಕರ ಪೂಜಾರಿ ಎಂಬವರ ಮುಖಾಂತರ ಕಟಪಾಡಿ ಪೊಲೀಸ್ ಹೊರಠಾಣೆಗೆ ತಲುಪಿಸಿದ್ದರು.
ಬ್ಯಾಗ್ ಕಳೆದುಕೊಂಡವರು ಮತ್ತೆ ಹುಡುಕಾಡುತ್ತಿರುವಾಗ ಮಾಹಿತಿ ಅರಿತು ಠಾಣೆಗೆ ಬಂದು ವಿವರಗಳನ್ನು ತಿಳಿಸಿ ಬ್ಯಾಗ್ ಪಡೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿತರಣೆಗೆ 50 ಸಾವಿರ ಗಿಡ ಸಿದ್ಧ
ಹುಬ್ಬಳ್ಳಿ ರೇವಡಿಹಾಳ ಅಪಘಾತ: ಬಸ್ ಚಾಲಕ ಟ್ರಾಕ್ಟರ್ ಹಿಂದಿಕ್ಕಲು ಹೋಗಿ ನಡೆಯಿತು ದುರ್ಘಟನೆ
ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಕುಮಾರ್ ಸಕ್ಸೇನಾ ನೇಮಕ
ಬಸ್-ಲಾರಿ ನಡುವೆ ಭೀಕರ ಅಪಘಾತ: ಎಂಟು ಜನರ ದುರ್ಮರಣ; 27 ಮಂದಿಗೆ ಗಂಭೀರ ಗಾಯ
ಇನ್ಫಿನಿಕ್ಸ್ ಹಾಟ್ 12 ಪ್ಲೇ ಬಿಡುಗಡೆ : 8,499 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯ