ಬೆಂಗಳೂರು-ಮಂಗಳೂರು ರೈಲು ಇನ್ನೆರಡು ದಿನಗಳಲ್ಲಿ ಪುನರಾರಂಭ‌?

Team Udayavani, Aug 23, 2019, 9:08 AM IST

ಸುಬ್ರಹ್ಮಣ್ಯ: ಘಾಟಿ ಪ್ರದೇಶದಲ್ಲಿ ಸುರಿದ ಭಾರೀ ಮಳೆಗೆ ಮಂಗಳೂರು-ಬೆಂಗಳೂರು ನಡುವಿನ ರೈಲು ಮಾರ್ಗದ ಹಲವು ಕಡೆಗಳಲ್ಲಿ ಹಳಿ ಮೇಲೆ ಗುಡ್ಡ ಕುಸಿದು ಬಿದ್ದು ಹಳಿಗಳಿಗೆ ಉಂಟಾದ ಹಾನಿಯ ದುರಸ್ತಿ ಕಾರ್ಯ ಕೊನೆಯ ಹಂತಕ್ಕೆ ತಲುಪಿದ್ದು ಆ. 25ರಿಂದ ರೈಲು ಓಡಾಟ ಪುನರಾರಂಭವಾಗುವ ಸಾಧ್ಯತೆಯಿದೆ.

5 ಕಡೆ ದೊಡ್ಡ ಪ್ರಮಾಣದ ಹಾನಿಯಾಗಿತ್ತು. ನಾಲ್ಕು ಕಡೆ ದುರಸ್ತಿ ಮುಕ್ತಾಯವಾಗಿದೆ. ಆದರೆ ಎಡಕುಮೇರಿ ಸಮೀಪ 63/500 ಕಿ.ಮೀ. ವ್ಯಾಪ್ತಿಯಲ್ಲಿ ಗುಡ್ಡ ಜರಿದು ಹಳಿಯೇ ಕೊಚ್ಚಿ ಹೋದ ಕಡೆ ಮಾತ್ರ ಕೊನೆ ಹಂತದ ಕಾಮಗಾರಿ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಅದು ಮುಕ್ತಾಯವಾಗಲಿದ್ದು ಆ. 25ರಿಂದ ಮಾರ್ಗ ಸಂಚಾರಕ್ಕೆ ಮುಕ್ತವಾಗುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.

ರೈಲು ಸಂಚಾರ ರದ್ದು
ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆ. 24ರಂದು ರದ್ದಾಗಿದೆ. ಕಣ್ಣೂರು/ಕಾರವಾರ- ಕೆಎಸ್‌ಆರ್‌ ಬೆಂಗಳೂರಿಗೆ ತೆರಳುವ ಎಕ್ಸ್‌ಪ್ರೆಸ್‌ ರೈಲು ಆ. 23 ಮತ್ತು 24ರಂದು ಸಂಪೂರ್ಣ ರದ್ದಾಗಿದೆ. ಕೆಎಸ್‌ಆರ್‌ ಬೆಂಗಳೂರು-ಕಣ್ಣೂರು/ಕಾರವಾರ ತೆ‌ಳುವ ಎಕ್ಸ್‌ಪ್ರೆಸ್‌ ರೈಲು ಆ. 23 ಮತ್ತು 24ರಂದು ರದ್ದಾಗಿದೆ. ಯಶವಂತ ಪುರ-ಮಂಗಳೂರು ಜಂಕ್ಷನ್‌ ತೆರಳುವ ಎಕ್ಸ್‌ಪ್ರೆಸ್‌ ರೈಲು ಆ. 25ರಂದು ರದ್ದಾಗಿದೆ. ಯಶವಂತಪುರ- ಮಂಗಳೂರು ಎಕ್ಸ್‌ಪ್ರೆಸ್‌ ರೈಲು ಸಂಚಾರ ಆ. 25ರಂದು ರದ್ದಾಗಿದೆ. ಕಾರವಾರ-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಸಂಚಾರವು ಆ. 25ರಂದು ಭಾಗಶಃ ರದ್ದಾಗುವ ಸಾಧ್ಯತೆ ಇದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ