ಅರಿಷಡ್ವರ್ಗ ತ್ಯಜಿಸಿದಲ್ಲಿ ಭಗವಂತನ ಸಾಕ್ಷಾತ್ಕಾರ: ಸೋದೆ ಶ್ರೀ

Team Udayavani, May 16, 2019, 6:10 AM IST

ಶಿರ್ವ: ದೇವಸ್ಥಾನಗಳಲ್ಲಿ ಕಾಣುವ ವಿಗ್ರಹವು ದೇವರ ಅಸ್ತಿತ್ವದ ಪ್ರತೀಕವಾಗಿದ್ದು, ನಾವು ದೇವರನ್ನು ಯಾವ ರೀತಿ ನೋಡುತ್ತೇವೆಯೋ ಆ ರೀತಿ ಫಲ ನೀಡುತ್ತಾನೆ.

ಅರಿಷಡ್ವರ್ಗಗಳನ್ನು ತ್ಯಜಿಸಿ ಅಂತರಂಗ ಶುದ್ಧಿಯಿಂದ ಪೂಜಿಸಿದಲ್ಲಿ ಭಗವಂತನ ಸಾಕ್ಷಾತ್ಕಾರವಾಗುವುದರೊಂದಿಗೆ ಪೂರ್ಣಾನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಉಡುಪಿ ಶ್ರೀ ಸೋದೆ ವಾದಿರಾಜ ಮಠದ ಯತಿ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.

ಅವರು ಸೋಮವಾರ ಬಂಟಕಲ್ಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿ ಸಮರ್ಪಣೆ, ಶ್ರೀ ದುರ್ಗಾ ಪರಮೇಶ್ವರೀ ಸಹಿತ ಸಪರಿವಾರ ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ ದೇವರ ಅಷ್ಟಬಂಧ ಪುನಃಪ್ರತಿಷ್ಠೆ, ಸಹಸ್ರಕುಂಭಾಭಿಷೇಕ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಶ್ರೀ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್‌ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.

ಸಮ್ಮಾನ
ದೇಗುಲದ ವಾಸ್ತುತಜ್ಞ ಗುಂಡಿಬೈಲು ವಿದ್ವಾನ್‌ ಸುಬ್ರಹ್ಮಣ್ಯ ಭಟ್‌, ತಾಮ್ರ ಶಿಲ್ಪಿ ಮಂಗಳೂರಿನ ರವಿ ಶೆಟ್ಟಿ, ಶಿಲಾ ಶಿಲ್ಪಿ ಕುಪ್ಪು ಸ್ವಾಮಿ ಕಾರ್ಕಳ ಮತ್ತು ದಾರು ಶಿಲ್ಪಿ ಮಂಚಿ ನಾರಾಯಣ ಆಚಾರ್ಯ ಅವರನ್ನು ಗೌರವಿಸಲಾಯಿತು. ಸಮ್ಮಾನಿತರ ಪರವಾಗಿ ವಾಸ್ತುತಜ್ಞ ಗುಂಡಿಬೈಲು ವಿದ್ವಾನ್‌ ಸುಬ್ರಹ್ಮಣ್ಯ ಭಟ್‌ ಮಾತನಾಡಿದರು.

ಉಡುಪಿ ಶಾಸಕ ರಘುಪತಿ ಭಟ್‌, ಬಂಟಕಲ್ಲು ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷ ಗೋಕುಲ್‌ದಾಸ್‌ ನಾಯಕ್‌, ಪಾಂಗಾಳ ನಾಯಕ್‌ ಕುಟುಂಬದ ಪ್ರತಿನಿಧಿ ಪಿ. ವಿಲಾಸ್‌ ನಾಯಕ್‌, ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಸದಾಶಿವ ಪ್ರಭು ಎಳ್ಳಾರೆ ಮಾತನಾಡಿದರು.

ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ್‌ ವೈ. ನಾಯಕ್‌ ಕುಕ್ಕಿಕಟ್ಟೆ ಉಭಯ ಶ್ರೀಗಳನ್ನು ಗೌರವಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಉಮೇಶ್‌ ಪ್ರಭು ಪಾಲಮೆ ವೇದಿಕೆಯಲ್ಲಿದ್ದರು.

ಆಡಳಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್‌ ಪ್ರಸ್ತಾವನೆಗೈದು ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಬಿ. ಪುಂಡಲೀಕ ಮರಾಠೆ ನಿರೂಪಿಸಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿಧರ ವಾಗೆÛ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ, ಸಂತವಾಣಿ ಕಾರ್ಯಕ್ರಮ ನಡೆಯಿತು.

ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ
ಮಾನವನ ಜನ್ಮ ಪಾವನವಾಗಿದ್ದು ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಧರ್ಮಶ್ರದ್ಧೆಯೊಂದಿಗೆ ಭಗವಂತನ ಚಿಂತನೆ, ಸ್ಮರಣೆ ಮಾಡಬೇಕಾಗಿದೆ. ಸಕಾಲದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಲು ದೇವಸ್ಥಾನದ ಜೀರ್ಣೋದ್ಧಾರದೊಂದಿಗೆ ಪರಿಸರದ ಸಂರಕ್ಷಣೆಯೂ ನಮ್ಮ ಕರ್ತವ್ಯವಾಗಿದೆ.
-ಶ್ರೀ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್‌, ಕೈವಲ್ಯ ಮಠಾಧೀಶ

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ