ಬಸ್ರೂರು: ನೆನಪಿನಾಳಕ್ಕೆ ಸರಿದ ಗುಲ್ವಾಡಿಯ ಸಣ್ಣಕ್ಕಿ

ನಶಿಸಿಹೋದ ಅಪೂರ್ವ ಭತ್ತದ ತಳಿ ; ರುಚಿ, ಪರಿಮಳಕ್ಕೆ ಪ್ರಸಿದ್ಧ

Team Udayavani, Jul 22, 2019, 5:09 AM IST

ಬಸ್ರೂರು : ಗುಲ್ವಾಡಿ ಎಂದ ತಕ್ಷಣ ನೆನಪಾಗುವುದು ಅಲ್ಲಿ ಬೆಳೆಯುವ ರುಚಿಗೆ ಹೆಸರು ಮಾಡಿದ್ದ ಸಣ್ಣಕ್ಕಿ! ದುರಂತವೆಂದರೆ ನಾವು ಹೀಗೆ ಹೇಳಿದ್ದನ್ನು ಕೇಳಬೇಕಷ್ಟೆ ಹೊರತು ಈಗ ಗುಲ್ವಾಡಿ ಸಣ್ಣಕ್ಕಿ ನೇಪಥ್ಯಕ್ಕೆ ಸರಿದಿದೆ.

ಸುಮಾರು 25 ವರ್ಷಗಳ ಹಿಂದೆ ಗುಲ್ವಾಡಿಯ ದಾಸರ ಬೆಟ್ಟಿನಲ್ಲಿ ಮಾತ್ರ ಸಣ್ಣಕ್ಕಿಯನ್ನು ಬೆಳೆಯುತ್ತಿದ್ದರು. ಅಲ್ಲಿ ಬೆಳೆದ ಸಣ್ಣಕ್ಕಿ ಮಾತ್ರ ವಿಶೇಷ ಪರಿಮಳ ಬೀರುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಿದ್ದಾರೆ ಗುಲ್ವಾಡಿಯ ಹಿರಿಯ ಕೃಷಿಕ ಬಚ್ಚು ನಾಯ್ಕರು. ಸದ್ಯ ಸಣ್ಣಕ್ಕಿ ಖರೀದಿಸಲೂ ಸಿಗುವುದಿಲ್ಲ. ಕಾರಣ ತಳಿಯೇ ಅಳವಿನಂಚಿಗೆ ಬಂದಿದೆ.

ಒಂದೇ ಕಡೆ ಬೆಳೆ
ಪ್ರಸ್ತುತ ಗುಲ್ವಾಡಿಯ ಪ್ರಭಾಕರ ಟೆ„ಲ್ಸ್‌ನ ಮಾಲಕ ಪ್ರಶಾಂತ್‌ ತೋಳಾರ್‌ ಅವರು ಮಾತ್ರ ಗುಲ್ವಾಡಿಯ ದಾಸರಬೆಟ್ಟು ಎಂಬಲ್ಲಿ 80 ಸೆಂಟ್ಸ್‌ ಜಾಗದಲ್ಲಿ ಪ್ರಸಿದ್ಧ ಸಣ್ಣಕ್ಕಿಯನ್ನು ಬೆಳೆಯುತ್ತಿದ್ದಾರೆ. ಆ ತಳಿ ಗುಲ್ವಾಡಿಯ ಇತರ ಯಾವುದೇ ರೈತರ ಬಳಿ ಇಲ್ಲ.

ಗುಲ್ವಾಡಿಯ ಸಣ್ಣಕ್ಕಿಯ ಹಾಗೆ ಕಂದಾವರ ಗೆಣಸು, ಹಳನಾಡು ಗುಳ್ಳವನ್ನೂ ಉಳಿಸಿಕೊಳ್ಳಲಾಗಿಲ್ಲ. ಹೀಗೆ ನಮ್ಮ ಹಿರಿಯರು ಉಪಯೋಗಿಸುತ್ತಿದ್ದ ಅನೇಕ ಪರಂಪರೆಯನ್ನು ನಾವಿಂದು ಉಳಿಸಿಕೊಳ್ಳದೇ ಆಧುನಿಕತೆಯ ಭರಾಟೆಯಲ್ಲಿ ಕೊಚ್ಚಿ ಹೋಗುತ್ತಿದ್ದೇವೆ. ಆದರೆ ಗುಲ್ವಾಡಿಯ ಸಣ್ಣಕ್ಕಿಯ ಪರಿಮಳ ಮಾತ್ರ ಎಂದೂ ಮಾಸದು.

ಉಳಿಸಿಕೊಳ್ಳುವುದು ಕಷ್ಟ
ನಾವು ಗುಲ್ವಾಡಿಯ ದಾಸರ ಬೆಟ್ಟಿನಲ್ಲಿ ಸಣ್ಣ ಗದ್ದೆಯಲ್ಲಿ ಇತಿಹಾಸದ ಪುಟ ಸೇರಿದ ಗುಲ್ವಾಡಿಯ ಸಣ್ಣಕ್ಕಿಯನ್ನು ಬೆಳೆಯುತ್ತಿದ್ದೇವೆ. ಈ ಸಣ್ಣಕ್ಕಿಯನ್ನು ಮತ್ತು ನಮ್ಮ ಕುಟುಂಬದ ಆಪ್ತರಿಗಷ್ಟೆ ಉಪಯೋಗಿಸಲಾಗುತ್ತಿದೆ. ಗುಲ್ವಾಡಿಯ ಕೆಲವು ಆಸಕ್ತ ರೈತರು ಬಂದು ಕೇಳಿದಾಗ ಸಣ್ಣಕ್ಕಿ ಬೀಜವನ್ನು ಕೊಟ್ಟಿದ್ದೇವೆ. ಮುಂದಿನ ಜನಾಂಗಕ್ಕೆ ಈ ತಳಿಯನ್ನು ಉಳಿಸಿಕೊಳ್ಳುವುದು ಕಷ್ಟ.
ಪ್ರಶಾಂತ್‌ ತೋಳಾರ್‌,
ಮಾಲಕರು ಪ್ರಭಾಕರ್‌ ಟೆ„ಲ್ಸ್‌ ಗುಲ್ವಾಡಿ.

ಉಳಿಸಿಕೊಳ್ಳಲಾಗಿಲ್ಲ
ನಾನು ಪ್ರಶಾಂತ್‌ ತೋಳಾರ್‌ ಅವರ ಬಳಿ ಸಣ್ಣಕ್ಕಿ ಬೀಜ ತಂದು ನಮ್ಮ ಗದ್ದೆಯಲ್ಲಿ ಬೆಳೆಸಿ ನೋಡಿದೆ.ಆದರೆ ಅದು ಅಂದಿನ ಸಣ್ಣಕ್ಕಿಯ ಪರಿಮಳ ಬೀರಲಿಲ್ಲ. ಆ ರುಚಿಯೂ ಇರಲಿಲ್ಲ. ಸಣ್ಣಕ್ಕಿಯನ್ನು ಉಳಿಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ.
-ನಾಗರಾಜ,
ಗುಲ್ವಾಡಿಯ ಕೃಷಿಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ