ಮೃತ್ಯುಕೂಪ ನೀರಿನ ಹೊಂಡಗಳ ಬಗ್ಗೆ ಎಚ್ಚರ 

Team Udayavani, May 24, 2018, 6:00 AM IST

ಕೋಟ: ಪ್ರತಿ ವರ್ಷ ಮಳೆಗಾಲದಲ್ಲಿ ಕಲ್ಲುಕೋರೆ, ಆವಿಮಣ್ಣಿನ ಹೊಂಡ, ಕೆರೆ, ಮದಗಳಲ್ಲಿ ಸಂಭವಿಸುವ ದುರಂತಗಳಲ್ಲಿ ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ.  ತಡೆಬೇಲಿ, ಎಚ್ಚರಿಕೆ ಫಲಕ ಮುಂತಾದ ಮುಂಜಾಗೃತೆ ಕ್ರಮಗಳಿದ್ದರೂ ಜೀವ ಹಾನಿ ನಿಲ್ಲುತ್ತಿಲ್ಲ. ಹೀಗಾಗಿ ಈ ಬಾರಿಯಾದರೂ ದುರಂತ ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ. 
 
ಕೋಟದಲ್ಲಿ ಅತಿ ಹೆಚ್ಚು 
ಕೋಟ ಹೋಬಳಿಯಲ್ಲಿ  ಕಲ್ಲುಕೋರೆ, ಆವೆಮಣ್ಣಿನ ಹೊಂಡ ವ್ಯಾಪಕ ಪ್ರಮಾಣದಲ್ಲಿದೆ. 2015ನೇ ಸಾಲಿನಲ್ಲಿ  ಇಲ್ಲಿನ ಹೆಗ್ಗುಂಜೆ, ಯಡ್ತಾಡಿ, ಹಳ್ಳಾಡಿಯಲ್ಲಿ  ಮೂರು ದುರಂತಗಳು ನಡೆದಿದ್ದು, ಮೂವರು ಸಾವನ್ನಪಿದ್ದಾರೆ. 2016ರಲ್ಲಿ ಅಲ್ತಾರಿನಲ್ಲಿ ತಾಯಿ ಹಾಗೂ ಮಗು ಬಲಿಯಾಗಿದ್ದಾರೆ. ಅದೇ ವರ್ಷ ಬೇಳೂರಿನಲ್ಲಿ  ಒಂದು ಸಾವು ಸಂಭವಿಸಿದೆ. 2017ರಲ್ಲಿ ಬೇಳೂರು ದೇಲಟ್ಟಿನಲ್ಲಿ ಕೃಷಿ ಹೊಂಡಕ್ಕೆ ತಾಯಿ, ಇಬ್ಬರು ಹೆಣ್ಣು ಮಕ್ಕಳು ಸೇರಿ ಮೂರು ಜೀವಗಳು ಬಲಿಯಾಗಿವೆ. ಅದೇ ವರ್ಷ ಕೋಟ ಹಾಗೂ ಯಡ್ತಾಡಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 2018 ಮೇ 17ರಂದು ಆವರ್ಸೆಯ ಆನೆಗುಂಡಿ ಎನ್ನುವಲ್ಲಿ ಇಬ್ಬರು ಯುವಕರು ಮೃತ ಪಟ್ಟಿದ್ದಾರೆ. ಹೀಗೆ 2015ರಿಂದ 2018 ಮೇ ತನಕ ಕೋಟ ಹೋಬಳಿಯಲ್ಲಿ  10 ದುರಂತಗಳು ನಡೆದಿದ್ದು 14ಮಂದಿ ಮೃತಪಟ್ಟಿದ್ದು, ಜಿಲ್ಲೆಯಲ್ಲೇ  ದಾಖಲಾದ ಅತೀ ದೊಡ್ಡ ಸಾವಿನ ಸಂಖ್ಯೆಯಾಗಿದೆ.

ಎಚ್ಚರ ವಹಿಸಿ
ಮಳೆಗಾಲದಲ್ಲಿ  ಮಕ್ಕಳು ನೀರಾಟಕ್ಕೆ ತೆರಳುವ ಕುರಿತು ಹೆತ್ತವರು ನಿಗಾವಹಿಸ ಬೇಕು ಹಾಗೂ ಅಗತ್ಯ ಸಂದರ್ಭದಲ್ಲಿ ಈಜು ಗೊತ್ತಿರುವ ಹಿರಿಯರ ಜತೆಗೆ ನೀರಿಗಿಳಿಯುವಂತೆ ತಿಳಿಸಬೇಕು.  ನೀರಿನ ಹೊಂಡಗಳಲ್ಲಿ  ಬಟ್ಟೆ ಒಗೆಯಲು ತೆರಳುವಾಗ ಮಕ್ಕಳನ್ನು ಜತೆಯಲ್ಲಿ ಕರೆದೊಯ್ಯ ದಿರುವುದು, ಶಿಕ್ಷಕರು ದುರಂತಗಳ ಬಗ್ಗೆ ಮಕ್ಕಳಿಗೆ ತಿಳಿಹೇಳುವುದು, ಅಪಾಯಕಾರಿ ಹೊಂಡಗಳನ್ನು ಮುಚ್ಚುವುದು ಮತ್ತು ತಡೆಬೇಲಿ ಅಳವಡಿಸುವುದನ್ನು ಸಂಘಟನೆಗಳ ನೆರವಿನೊಂದಿಗೆ ಮಾಡಬೇಕು.   

ಮಾಲಕರೇ ಹೊಣೆಗಾರರು
ಗಣಿಗಾರಿಕೆಗೆ ಪರವಾನಿಗೆ ಹೊಂದಿದ ವರು, ಪಟ್ಟಸ್ಥಳದ ಮಾಲೀಕರು ಮುಂಜಾಗ್ರತೆ ಕೈಗೊಳ್ಳಬೇಕು. ಇಲ್ಲವಾದರೆ ಅವರೇ ಹೊಣೆಗಾರರಾಗಿರುತ್ತಾರೆ. ಮಾಲಕರಿಲ್ಲದ ಹೊಂಡಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕೆ.ಆರ್‌.ಐ.ಡಿ.ಎಲ್‌. ಮೂಲಕ ಬೇಲಿ ಅಳವಡಿಸುವ ಯೋಜನೆ ಇದೆ. ಕಳೆದ ಬಾರಿ ಜಿಲ್ಲೆಯಲ್ಲಿ 13 ಅಪಾಯಕಾರಿ ಹೊಂಡ ಗುರುತಿಸಿ ಬೇಲಿ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಆದರೆ ಅನುದಾನ ಕೊರತೆ ಇದೆ. ಅಪಾಯಕಾರಿ ಹೊಂಡಗಳ ಬಗ್ಗೆ ಸಾರ್ವಜನಿಕರಲ್ಲೂ ಜಾಗೃತಿ ಅಗತ್ಯ.  
 - ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಜಿಲ್ಲಾಧಿಕಾರಿಗಳು, ಉಡುಪಿ

– ವಿಶೇಷ ವರದಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ