Udayavni Special

 ಜಡ್ಕಲ್‌ ಸನಿಹದ ಬೆಳ್ಕಲ್‌ ತೀರ್ಥ: ಪ್ರಯಾಸದ ಹಾದಿಗೆ ಕಾಯಕಲ್ಪ ಎಂದು?

Team Udayavani, Dec 20, 2020, 12:46 PM IST

 ಜಡ್ಕಲ್‌ ಸನಿಹದ ಬೆಳ್ಕಲ್‌ ತೀರ್ಥ: ಪ್ರಯಾಸದ ಹಾದಿಗೆ ಕಾಯಕಲ್ಪ ಎಂದು?

ಕೊಲ್ಲೂರು, ಡಿ.19: ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯ ಬೆಳ್ಕಲ್‌ ತೀರ್ಥಕ್ಕೆ ಸಾಗುವುದು ಬಲು ಕಠಿನವಾಗಿದ್ದು ಮೂಕಾಂಬಿಕಾ ಅಭಯಾರಣ್ಯದ ನಡುವಿನ  ಕಾಡುದಾರಿಯಲ್ಲಿ ಬಹಳಷ್ಟು ದೂರ ನಡೆದುಕೊಂಡು ಹೋಗಬೇಕಿದೆ. ಇದು ಪ್ರವಾಸಿಗರನ್ನು ಸಂಕಷ್ಟಕ್ಕೆ ನೂಕಿದೆ. ಇದಕ್ಕೊಂದು  ಪರ್ಯಾಯ ವ್ಯವಸ್ಥೆಯನ್ನು ಸಂಬಂಧ ಪಟ್ಟವರು ಅಗತ್ಯವಾಗಿ ಮಾಡಬೇಕಾಗಿದೆ.

ಪ್ರಕೃತಿಯ ರಮ್ಯ ಸೌಂದರ್ಯದ ನೆಲೆಬೀಡಾದ ಬೆಳ್ಕಲ್‌ ತೀರ್ಥ ಪ್ರದೇಶವು ಪ್ರವಾಸಿಗರನ್ನು  ಕೈಬೀಸಿ ಕರೆಯುವಂತಿದೆ. ಜಲಪಾತದ ಅಡಿಯಲ್ಲಿ ಮುಂದೆ ಸಾಗುವ ಮಂದಿಗೆ ಈ ಭಾಗದ ಧ್ಯಾನ ಕೇಂದ್ರವಾಗಿ ಪರಿಗಣಿಸಲ್ಪಟ್ಟಿದೆ.

ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು :

ಕರ್ನಾಟಕದ ವಿವಿಧ ಜಿಲ್ಲೆಗಳು ಸಹಿತ ಕೇರಳ ಹಾಗೂ ತಮಿಳುನಾಡಿನಿಂದ ಪ್ರತಿದಿನ ನೂರಾರು ಮಂದಿ ಬೆಳ್ಕಲ್‌ ತೀರ್ಥ ವೀಕ್ಷಿಸಲು ಆಗಮಿಸುತ್ತಾರೆ. ಜಡ್ಕಲ್‌ನಿಂದ 15 ಕಿ.ಮೀ. ದೂರದ ಬೀಸಿನಪಾರೆ, ಮುದೂರು ಮಾರ್ಗವಾಗಿ ಕೋರೆ ಮುಖದಿಂದ ಶೇಡಿಗುಂಡಿ ಹಾಗೂ ವಾಟೆಗುಂಡಿಯಿಂದ ಸಾಗಿದಾಗ ಪುರಾತನ ಕೋಟಿಲಿಂಗೇಶ್ವರ ಮಹಾಗಣಪತಿ ಹಾಗೂ ಗೋವಿಂದ ಕ್ಷೇತ್ರ ಕಂಡುಬರುತ್ತದೆ. ಈ ದೇಗುಲ ಸನಿಹದ ರಾಜ್ಯ ಸರಕಾರದ ಅಭಯಾರಣ್ಯದ ಮಾರ್ಗವಾಗಿ ಸುಮಾರು 4 ಕಿ.ಮೀ. ದೂರ ಸಾಗಿದರೆ ಕೋಟಿ ತೀರ್ಥ ಜಲಪಾತ ಕಂಡುಬರುವುದು.

ಅಭಿವೃದ್ಧಿಗೆ ಕಾನೂನು ಅಡ್ಡಿ  :

ಮೂಕಾಂಬಿಕಾ ಅಭಯಾರಣ್ಯದ ವ್ಯಾಪ್ತಿಗೆ ಬರುವ ಈ ಪ್ರದೇಶದ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆ ಕಲ್ಪಿಸಲು ಅರಣ್ಯ ಕಾನೂನು ಅಡ್ಡಿ ಬರುವುದರಿಂದ ಕಾಲುದಾರಿಯನ್ನು ವಿಸ್ತರಿ ಸುವ ಬಗ್ಗೆ ಪ್ರವಾಸಿಗರು ಸಲ್ಲಿಸಿದ ಮನವಿ ತಿರಸ್ಕಾರಗೊಂಡಿದೆ.ದಟ್ಟಾರಣ್ಯದ ನಡುವಿನ ಹಾದಿಯಲ್ಲಿಸಾಗಬೇಕಾದ ಬೆಳ್ಕಲ್‌ ತೀರ್ಥ ಪ್ರವಾಸಿಗರನ್ನು ದಿನೇ ದಿನೇ ಸೆಳೆಯುತ್ತಿದೆ.

25 ರೂ. ಶುಲ್ಕ ವಸೂಲಿ :   ಪ್ರತಿ ದಿನ ಆಗಮಿಸುವ ಪ್ರತಿಯೋರ್ವ ಪ್ರವಾಸಿಗ ತಲಾ 25 ರೂ. ಶುಲ್ಕವನ್ನುಅರಣ್ಯ ಇಲಾಖೆಗೆ ನೀಡಿ ಒಳ ಪ್ರವೇಶಿಸಬೇಕಾಗಿದೆ. ಅಲ್ಲದೆ ನಿಗದಿತ ಸಮಯದಲ್ಲಿ ಹಿಂದಿರುಗಬೇಕಾಗಿದೆ. ಮಧ್ಯ ಇನ್ನಿತರ ಅಗತ್ಯ ವಸ್ತುಗಳನ್ನು ಒಯ್ಯಲು ಅವಕಾಶವಿಲ್ಲ. ಪ್ರತಿದಿನ 150 ರಿಂದ 300 ಮಂದಿ ಬೆಳ್ಕಲ್‌ ತೀರ್ಥ ವೀಕ್ಷಿಸಲು ಆಗಮಿಸುತ್ತಿದ್ದಾರೆ.

ಮೂಕಾಂಬಿಕಾ ಅಭಯಾರಣ್ಯದ ವ್ಯಾಪ್ತಿಗೆ ಒಳಪಡುವ ಬೆಳ್ಕಲ್‌ ತೀರ್ಥ ಇರುವ ಸ್ಥಿತಿಯಲ್ಲೇ ಅಗತ್ಯ ವ್ಯವಸ್ಥೆಯನ್ನು ಹೊಂದಾಣಿಕೆ ಮಾಡಬಹುದು. ಸ್ಥಳೀಯವಾಗಿ ಸಮಿತಿ ರಚಿಸಿ ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರವಾಸಿಗರಿಂದ ಪಡೆಯುತ್ತಿರುವ ಶುಲ್ಕವನ್ನು ನೇರವಾಗಿ ಸರಕಾರಕ್ಕೆ ಠೇವಣಿ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಿದರೆ ಶುಲ್ಕವನ್ನು ಬಳಸಿ ಅಭಿವೃದ್ಧಿ  ಕಾರ್ಯಕ್ಕೆ ಹೆಚ್ಚಿನ ಪಾಮುಖ್ಯ ನೀಡಬಹುದು . -ಸಿದ್ದೇಶ್‌ , ಅರಣ್ಯಾಧಿಕಾರಿ, ಕೊಲ್ಲೂರು

ಬೆಳ್ಕಲ್‌ ತೀರ್ಥದ ಅಭಿವೃದ್ಧಿಗೆ ಪೂರಕ ವ್ಯವಸ್ಥೆ ಕಲ್ಪಿಸುವಲ್ಲಿ ಕಾನೂನಿನಲ್ಲಿ ಅವಕಾಶವಿದ್ದಲ್ಲಿ ಸಂಪೂರ್ಣ ಪ್ರಯತ್ನ ಮಾಡುತ್ತೇನೆ.  –ಬಿ.ಎಂ.ಸುಕುಮಾರ್‌ ಶೆಟ್ಟಿ, ಶಾಸಕರು, ಬೈಂದೂರು

ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಿರುವ ಪ್ರವಾಸೋದ್ಯಮ ಕೇಂದ್ರವಾಗಿರುವ ಬೆಳ್ಕಲ್‌ ತೀರ್ಥದ ಪ್ರಯಾಸದ ದಾರಿಯ ಅಭಿವೃದ್ಧಿಯಾಗಬೇಕು.-ವಾಸುದೇವ ಮುದೂರು, ಸಮಾಜ ಸೇವಕ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪುರಾತನ ನಗರ…ಸಿಗಿರಿಯಾ ಎಂಬ ವಿಶ್ವದ ಎಂಟನೇ ಅದ್ಭುತ

ಪುರಾತನ ನಗರ…ಸಿಗಿರಿಯಾ ಎಂಬ ವಿಶ್ವದ ಎಂಟನೇ ಅದ್ಭುತ

ಮಂಗಳೂರು ರಥಬೀಧಿಯಲ್ಲಿ ನೆಲಕ್ಕುರುಳಿದ ಬೃಹತ್ ಅಶ್ವಥ ಮರ: ವಾಹನಗಳಿಗೆ ಹಾನಿ

ಮಂಗಳೂರು ರಥಬೀಧಿಯಲ್ಲಿ ನೆಲಕ್ಕುರುಳಿದ ಬೃಹತ್ ಅಶ್ವಥ ಮರ: ವಾಹನಗಳಿಗೆ ಹಾನಿ

TMC MP Nusrat Jahan speaks on Jai Sri Ram sloganeering incident, defends Mamata Banerjee

‘ಜೈ ಶ್ರೀರಾಮ್’ ಘೋಷಣೆಗೆ ನುಸ್ರತ್ ಖಂಡನೆ

ಪಾದಾಚಾರಿಗೆ ಅಪರಿಚತ ವಾಹನ ಢಿಕ್ಕಿಯಾಗಿ ಪರಾರಿ: ವೃದ್ದ ಸ್ಥಳದಲ್ಲೇ ಸಾವು

ಪಾದಾಚಾರಿಗೆ ಅಪರಿಚತ ವಾಹನ ಢಿಕ್ಕಿಯಾಗಿ ಪರಾರಿ: ವೃದ್ದ ಸ್ಥಳದಲ್ಲೇ ಸಾವು

ನೂರು ಕಡೆಗಳಲ್ಲಿ ಇನ್ಸ್‌ಪೆಕ್ಟರ್‌ ವಿಕ್ರಂ ಕಟೌಟ್ಸ್

ನೂರು ಕಡೆಗಳಲ್ಲಿ ಇನ್ಸ್‌ಪೆಕ್ಟರ್‌ ವಿಕ್ರಂ ಕಟೌಟ್ಸ್

Sri Lanka to receive India’s ‘gift’ of COVID-19 vaccines on January 27

ಜ.27 ಕ್ಕೆ ಶ್ರೀಲಂಕಾ ತಲುಪಲಿದೆ ಭಾರತದ ಕೋವಿಡ್ ಲಸಿಕೆ

ಈ ಬಾರಿ ಸರಳ ಗಣರಾಜ್ಯೋತ್ಸವ ಆಚರಣೆ: ಮಾಣೆಕ್ ಶಾ ಮೈದಾನಕ್ಕೆ ಸಾರ್ವಜನಿಕ ಪ್ರವೇಶವಿಲ್ಲ

ಈ ಬಾರಿ ಸರಳ ಗಣರಾಜ್ಯೋತ್ಸವ ಆಚರಣೆ: ಮಾಣೆಕ್ ಶಾ ಮೈದಾನಕ್ಕೆ ಸಾರ್ವಜನಿಕ ಪ್ರವೇಶವಿಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಗರಸಭೆ ಕಟ್ಟಡದಲ್ಲಿ ಸ್ಥಳಾವಕಾಶದ ಕೊರತೆ

ನಗರಸಭೆ ಕಟ್ಟಡದಲ್ಲಿ ಸ್ಥಳಾವಕಾಶದ ಕೊರತೆ

ಪರಿಹಾರ ಕಾಣದ ಬಿಸಿಎಂ ಹಾಸ್ಟೆಲ್‌ ಅವ್ಯವಸ್ಥೆ!

ಪರಿಹಾರ ಕಾಣದ ಬಿಸಿಎಂ ಹಾಸ್ಟೆಲ್‌ ಅವ್ಯವಸ್ಥೆ!

ನೂರಾರು ಕುಶಲ ಕರ್ಮಿಗಳಿಗೆ ವರದಾನ

ನೂರಾರು ಕುಶಲ ಕರ್ಮಿಗಳಿಗೆ ವರದಾನ

Untitled-1

ಕಟ್ಟಡ ನಿರ್ಮಾಣವಾದರೂ ಮೂಲಸೌಕರ್ಯ ಕೊರತೆ

ಸಮ್ಮೇಳನ ಕನ್ನಡದ ಮನಸ್ಸುಗಳು ಒಂದಾಗುವ ಉತ್ಸವ

ಸಮ್ಮೇಳನ ಕನ್ನಡದ ಮನಸ್ಸುಗಳು ಒಂದಾಗುವ ಉತ್ಸವ

MUST WATCH

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

ಹೊಸ ಸೇರ್ಪಡೆ

ಪುರಾತನ ನಗರ…ಸಿಗಿರಿಯಾ ಎಂಬ ವಿಶ್ವದ ಎಂಟನೇ ಅದ್ಭುತ

ಪುರಾತನ ನಗರ…ಸಿಗಿರಿಯಾ ಎಂಬ ವಿಶ್ವದ ಎಂಟನೇ ಅದ್ಭುತ

ಮಂಗಳೂರು ರಥಬೀಧಿಯಲ್ಲಿ ನೆಲಕ್ಕುರುಳಿದ ಬೃಹತ್ ಅಶ್ವಥ ಮರ: ವಾಹನಗಳಿಗೆ ಹಾನಿ

ಮಂಗಳೂರು ರಥಬೀಧಿಯಲ್ಲಿ ನೆಲಕ್ಕುರುಳಿದ ಬೃಹತ್ ಅಶ್ವಥ ಮರ: ವಾಹನಗಳಿಗೆ ಹಾನಿ

TMC MP Nusrat Jahan speaks on Jai Sri Ram sloganeering incident, defends Mamata Banerjee

‘ಜೈ ಶ್ರೀರಾಮ್’ ಘೋಷಣೆಗೆ ನುಸ್ರತ್ ಖಂಡನೆ

ಪಾದಾಚಾರಿಗೆ ಅಪರಿಚತ ವಾಹನ ಢಿಕ್ಕಿಯಾಗಿ ಪರಾರಿ: ವೃದ್ದ ಸ್ಥಳದಲ್ಲೇ ಸಾವು

ಪಾದಾಚಾರಿಗೆ ಅಪರಿಚತ ವಾಹನ ಢಿಕ್ಕಿಯಾಗಿ ಪರಾರಿ: ವೃದ್ದ ಸ್ಥಳದಲ್ಲೇ ಸಾವು

ನೂರು ಕಡೆಗಳಲ್ಲಿ ಇನ್ಸ್‌ಪೆಕ್ಟರ್‌ ವಿಕ್ರಂ ಕಟೌಟ್ಸ್

ನೂರು ಕಡೆಗಳಲ್ಲಿ ಇನ್ಸ್‌ಪೆಕ್ಟರ್‌ ವಿಕ್ರಂ ಕಟೌಟ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.