ಬೆಳ್ಮಣ್‌: ನಂದಳಿಕೆ ಸಿರಿಜಾತ್ರೆಗೆ ಭರದ ಸಿದ್ಧತೆ


Team Udayavani, Mar 30, 2018, 6:45 AM IST

Siri.jpg

ಬೆಳ್ಮಣ್‌: ನಾಲ್ಕುಸ್ಥಾನ ನಂದಳಿಕೆಯ  ಶ್ರೀ ಮಹಾಲಿಂಗೇಶ್ವರ ದೇಗುಲದ ಶ್ರೀ ಉರಿಬ್ರಹ್ಮ,  ಗಣಪತಿ, ವೀರಭದ್ರ, ನಂದಿಗೋಣ, ಸಿರಿಕುಮಾರ, ಅಬ್ಬಗ-ದಾರಗ, ಖಡೆಶ್ವರೀ, ರಕ್ತೇಶ್ವರೀ, ಚಾಮುಂಡೀ, ಅಣ್ಣಪ್ಪ, ಕ್ಷೇತ್ರಪಾಲ, ಭೂತರಾಜ, ಗಜಮಲ್ಲ, ಮಹಾ ನಾಗರಾಜಸ್ವಾಮಿ ಸಾನ್ನಿಧ್ಯದಲ್ಲಿ   ಪ್ರಸಿದ್ಧ ಸಿರಿಜಾತ್ರೆ ಮಾ. 31ರಂದು ನಡೆಯಲಿದೆ.

700 ಯುವಕರ ತಂಡ
ಶಿಸ್ತಿನ ವ್ಯವಸ್ಥೆಗೆ ಹೆಸರಾದ ನಂದಳಿಕೆ ಸಿರಿಜಾತ್ರೆ ಈ ಬಾರಿಯೂ ಬರುವ ಭಕ್ತರಿಗೆ ಸಕಲ ವ್ಯವಸ್ಥೆಯನ್ನು ಕಲ್ಪಿಸಲು ಇಡೀ ನಂದಳಿಕೆ ಸಜ್ಜಾಗಿದ್ದು, ನಂದಳಿಕೆ ಸಿರಿಜಾತ್ರೆಗೆ  ವಿಶೇಷವಾಗಿ ಮೆರುಗು ನೀಡುವ ಸುಮಾರು 700ಕ್ಕೂ ಅ ಧಿಕ ಸ್ವಯಂ ಸೇವಕರ ತಂಡ ಯಶಸ್ಸಿಗೆ ದುಡಿಯಲು ಸಜ್ಜಾಗಿದೆ.

ಮಾ. 30ರಂದು ಅಂಬೋಡಿ ಜಾತ್ರೆ, ಅಂಬೋಡಿ ಉತ್ಸವ ಬಲಿ ನಡೆಯಲಿದೆ.  ಮಾ. 31ರಂದು ನಂದಳಿಕೆ ಅಯನೋತ್ಸವ ಸಿರಿ ಜಾತ್ರೆ ಮಹೋತ್ಸವ ನೆರವೇರಲಿದ್ದು,  ಬೆಳಗ್ಗೆ 8ಕ್ಕೆ  ಶ್ರೀ ಉರಿ ಬ್ರಹ್ಮರ ರಜತ ಪಾದುಕೆ, ಶ್ರೀ ಅಬ್ಬಗ ದಾರಗರ ಚೆನ್ನೆಮಣೆಗಳ ಸಾಲಂಕೃತ ಮೆರವಣಿಗೆ ಪ್ರಾಕ್ತಾನ ಪದ್ದತಿಯಂತೆ ಪರ್ಯಟಿಸಿ ಮಧ್ಯಾಹ್ನ  ಶ್ರೀ ಆಲಡೆಯಲ್ಲಿ  ಶ್ರೀ ಅಣ್ಣಪ್ಪ ದರ್ಶನ, ಹಸಿಮಡಲು ಚಪ್ಪರ ಕಟ್ಟೆಪೂಜೆ ಸೇವೆ, ಶ್ರೀ ದೇವರ ಮಹೋತ್ಸವ ಬಲಿ ಮಹಾಪೂಜೆ, ಪ್ರಸಾದ  ವಿತರಣೆ, ಮಧ್ಯಾಹ್ನ 1ರಿಂದ ರಾತ್ರಿ 8.00ರ ವರೆಗೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. 

ರಾತ್ರಿ 9.30.ರಿಂದ ನಂದಳಿಕೆ ಚಾವಡಿ ಅರಮನೆಯಿಂದ ಶ್ರೀ ಹೆಗ್ಗಡೆ ಅವರ ಆಗಮನ ಪರಂಪರಗತ ಅದ್ದೂರಿ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳು ಹಾಗೂ ಕೇರಳ ರಾಜ್ಯದ ಕಲಾತಂಡಗಳು ಭಾಗವಹಿಸಲಿವೆ.  ರಾತ್ರಿ 10.30.ಕ್ಕೆ  ಅಯನೋತ್ಸವ ಬಲಿ ವೈಭವೋಪೇತ ಕೆರೆದೀಪೋತ್ಸವ, ಕೆರೆದೀಪ ಕಟ್ಟೆ ಪೂಜೆ ಮಹೋತ್ಸವ ರಾತ್ರಿ 11ರಿಂದ ಸತ್ಯದ ಸಿರಿಗಳ ಮೂಲಕ್ಷೇತ್ರ ಶ್ರೀ ಆಲಡೆ ಸನ್ನಿ ಯಲ್ಲಿ  ಶ್ರೀ ಸಿರಿ ಕುಮಾರ, ಅಬ್ಬಗ ದಾರಗ, ದರ್ಶನಾವೇಶ ಪೂರ್ವಕ ಸೂರ್ಯೋದಯದ ಪರ್ಯಂತ ಸಪ್ತ ಸತ್ಯದ ಸಿರಿಗಳ ನಂದಳಿಕೆ ಸಿರಿಜಾತ್ರೆ ಪ್ರಾಚೀನ  ವೈಭವಗಳು ನಡೆಯಲಿವೆ.

ಎ. 1ರಂದು ಊರ ಅಯನೋತ್ಸವ, 2ರಂದು ಬಾಕಿಮಾರು ದೀಪೋತ್ಸವ,  3ರಂದು ಮೂಡು ಸವಾರಿ ಉತ್ಸವ, 4ರಂದು ಶ್ರೀ ಮನ್ಮಹಾರಥೋತ್ಸವ, 5ರಂದು ಕವಾಟೋದ್ಘಾಟನೆ, ಪಡು ಸವಾರಿ ಅವಭೃತ, ಧ್ವಜಾವರೋಹಣ, 6ರಂದು ಮಹಾಸಂಪ್ರೋಕ್ಷಣೆ, ಮಂಗಲ ಮಂತ್ರಾಕ್ಷತೆ  ಹಾಗೂ 14ರಂದು ಸಾಮೂ ಹಿಕ ಶ್ರೀ ಶನಿಪೂಜಾ ಮಹೋತ್ಸವ ನಡೆಯಲಿದೆ ಎಂದು ಸುಹಾಸ್‌ ಹೆಗ್ಡೆ ತಿಳಿಸಿದ್ದಾರೆ.

ಸಿರಿಜಾತ್ರೆಯ ಆಕರ್ಷಣೆ
ಡೊಳ್ಳು ಕುಣಿತ, ವೀರಗಾಸೆ,ಬೆಳುYದುರೆ ಪ್ರದಕ್ಷಿಣೆ, ಶೃಂಗಾರ ಶೋಭಿತ ಚಾವಡಿ ಅರಮನೆ, ರಾಜ ಚಾವಡಿಯ ಪರಂಪರಾಗತ ಮೆರವಣಿಗೆ, ತಾಲೀಮು ರಂಗ, ಕೀಲು ಕುದುರೆ ಕರಗ ನೃತ್ಯ, ಸುಡುಮದ್ದು ಸಡಗರ, ಅಬ್ಬರದ ಚೆಂಡೆ ವಾದನ, ಢಕ್ಕೆ ಕನ್ನಿಕಾ ನರ್ತನ ಸೇವೆ, ಹಾಲು ಬೆಳದಿಂಗಳ ಪರಮ ಪ್ರಶಾಂತತೆಯಲ್ಲಿ ನಂದಳಿಕೆ ಸಿರಿಜಾತ್ರಾ ಪವೊìàತ್ಸವ ನಡೆಯಲಿದೆ.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.