ಗುಣಮಟ್ಟದ ಶಿಕ್ಷಣಕ್ಕೆ ರಾಜ್ಯದಲ್ಲೇ ಮಾದರಿ ಶಿಕ್ಷಣ ಸಂಸ್ಥೆ

ಕಾರ್ಕಳ ಭುವನೇಂದ್ರ ಕಾಲೇಜು

Team Udayavani, May 4, 2019, 6:00 AM IST

0305HBRM5A

ಕಾರ್ಕಳ :ಪ್ರಶಾಂತ ವಾತಾವರಣದಲ್ಲಿ ಒಂದೇ ಸೂರಿನಡಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ರಾಜ್ಯದಲ್ಲೇ ಮಾದರಿ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಈಗಾಗಲೇ ಪ್ರವೇಶಾತಿ ಆರಂಭಗೊಂಡಿದೆ.

ಕಳೆದ 58 ವರ್ಷಗಳಿಂದ ಗುಣಮಟ್ಟದ ಶಿಕ್ಷಣ ಗುರಿಮುಟ್ಟಿಸುತ್ತದೆ ಎಂಬ ಧ್ಯೇಯ ವಾಕ್ಯದೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈಯುವುದರೊಂದಿಗೆ ಅಕಾಡೆಮಿ ಆಫ್‌ ಜನರಲ್‌ ಎಜ್ಯುಕೇಶನ್‌, ಮಣಿಪಾಲ ಆಡಳಿತಕ್ಕೊಳಪಟ್ಟ ಸಂಸ್ಥೆ ಕಾರ್ಕಳ ಭುವನೇಂದ್ರ ಕಾಲೇಜು ದೆಹಲಿಯ ಯುಜಿಸಿಯಿಂದ ಶ್ರೇಷ್ಠತಾ ಸಾಮರ್ಥ್ಯವಿರುವ ಕಾಲೇಜು ಎಂಬ ಮಾನ್ಯತೆ ಪಡೆದಿದೆ. ಈಗಾಗಲೇ ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ಉತ್ತಮ ಪರಿಸರ, ಶಿಸ್ತು, ಅನುಭವಸ್ಥ ಪ್ರಾಧ್ಯಾಪಕ ವೃಂದ, ಪಾರದರ್ಶಕ ಆಡಳಿತ ವ್ಯವಸ್ಥೆ , ಸುಸಜ್ಜಿತ ಪೀಠೊಪಕರಣಗಳು, ಅತ್ಯಾಧುನಿಕ ಪ್ರಯೋಗಾಲಯಗಳು ಸಂಸ್ಥೆಯ ಹೆಗ್ಗಳಿಕೆಯಾಗಿದೆ.

ಪದವಿ ಪೂರ್ವ ವಿಭಾಗ: ಭುವನೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಪಿಸಿಎಂಬಿ, ಪಿಸಿಎಂಸಿಎಸ್‌, ಪಿಸಿಎಂಎಸ್‌, ವಾಣಿಜ್ಯ ವಿಭಾಗದಲ್ಲಿ ಎಚ್‌ಇಬಿಎ, ಇಬಿಎಸಿ, ಇಬಿಎಎಸ್‌, ಕಲಾ ವಿಭಾಗದಲ್ಲಿ ಎಚ್‌ಇಪಿಎಸ್‌ ಕೋರ್ಸುಗಳಿವೆ.

ಪದವಿ ವಿಭಾಗ: ಭುವನೇಂದ್ರ ಪದವಿ ಕಾಲೇಜಿನ ವಿಜ್ಞಾನ ವಿಭಾಗ (B.Sc.) ವಾಣಿಜ್ಯ ವಿಭಾಗ  ಕಲಾ ವಿಭಾಗ (B.A) (Journalism) ಕಂಪ್ಯೂಟರ್‌ ವಿಭಾಗ (B.C.A) ಗಳ ಕೋರ್ಸುಗಳಿವೆ. ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದವರಿಗೆ ಮಣಿಪಾಲ ಯುನಿವರ್ಸಿಟಿಯಲ್ಲಿ ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ತಾಂತ್ರಿಕ , ಕಲಾ ಶಿಕ್ಷಣದ ಸೌಲಭ್ಯ ಕಲ್ಪಿಸಲಾಗಿದೆ ಹಾಗೂ ಬಯೋಟೆಕ್ನಾಲಜಿ ಹಾಗೂ ಜರ್ನಲಿಸಂಗೆ ವಿನೂತನ ಪ್ರಯೋಗಾಲಯಗಳಿವೆ.

ಪದವಿಯೊಂದಿಗೆ ಔದ್ಯೋಗಿಕ ಮಹತ್ವದ ಡಿಪ್ಲೋಮಾ ಕೋರ್ಸ್‌ಗಳುಪದವಿ ತರಗತಿಗಳಿಗೆ ಸೇರಿಕೊಂಡ ವಿದ್ಯಾರ್ಥಿಗಳು ಆಯ್ದುಕೊಳ್ಳಲಿರುವ ಕೋರ್ಸ್‌ಗೆ ಪೂರಕವಾದ ಡಿಪ್ಲೊಮಾ ಪದವಿಯನ್ನು ಜೊತೆಜೊತೆಯಾಗಿ ಪೂರೈಸುವ ಅವಕಾಶವನ್ನು ಕಾಲೇಜು ಒದಗಿಸುತ್ತದೆ. ಈ ಡಿಪ್ಲೊಮಾ ಕೋರ್ಸ್‌ಗಳ ಪಟ್ಟಿಯನ್ನು ಕಾಲೇಜಿನ ಪ್ರಾಸ್ಪೆಕ್ಟಸ್‌ನಲ್ಲಿ ನೀಡಲಾಗಿದೆ.

ಸ್ನಾತಕೋತ್ತರ ವಿಭಾಗ: ಮಂಜುನಾಥ ಪೈ ಸ್ಮಾರಕ ಸ್ನಾತಕೋತ್ತರ ಅಧ್ಯಯನ ಕೇಂದ್ರ (ಪಿ.ಜಿ) ದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ವಿಸ್ತರಿತ ಕ್ಯಾಂಪಸ್‌ನಲ್ಲಿ ಆಧುನಿಕ ಪಿ.ಜಿ ಕೇಂದ್ರದ ಕಟ್ಟಡವಿದ್ದು ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಎಂಕಾಂ ಕೋರ್ಸು ಲಭ್ಯವಿದೆ.

ವಿಶೇಷ ಸೌಲಭ್ಯಗಳು : ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಫ್‌ ವ್ಯವಸ್ಥೆ, ಸಿಇಟಿ ಮತ್ತು ಜೆಇಇ ಕೋಚಿಂಗ್‌ ವ್ಯವಸ್ಥೆ, ಸಿಎ, ಸಿಎಟಿ ಮತ್ತು ಎಂಎಟಿ ಕೋಚಿಂಗ್‌ ವ್ಯವಸ್ಥೆ, ಕಲಿಕೆಯಲ್ಲಿ ಹಿಂದುಳಿದವರಿಗೆ ಉಚಿತ ವಿಶೇಷ ತರಗತಿಗಳು, ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಹಾಸ್ಟೆಲ್‌ವ್ಯವಸ್ಥೆ, ಅತ್ಯಾಧುನಿಕ ಸೌಲಭ್ಯವಿರುವ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣ ಮತ್ತು ಜಿಮ್ನಾ ಸಿಯಂ (ಹುಡುಗಿಯರಿಗೆ ಪ್ರತ್ಯೇಕ), ಉಚಿತ ಮಧ್ಯಾಹ್ನ ಭೋಜನ ಕೇಂದ್ರ ಹಾಗೂ ನೂತನ ಕ್ಯಾಂಟೀನ್‌ ವ್ಯವಸ್ಥೆ, ಕ್ಯಾಂಪಸ್‌ ಸೆಲೆಕ್ಷನ್‌ ವ್ಯವಸ್ಥೆ ಹಾಗೂ ಕೌನ್ಸೆಲಿಂಗ್‌ ವ್ಯವಸ್ಥೆ, ಆಧುನಿಕ ಸೌಲಭ್ಯದೊಂದಿಗೆ ವಿಶಾಲ ಓದಿನ ಅಂಗಣವಿರುವ ಬಹುದೊಡ್ಡ ಗ್ರಂಥ ಭಂಡಾರ, ಸುಸಜ್ಜಿತ ತರಗತಿ ಕೋಣೆಗಳು ಮತ್ತು ಪ್ರಯೋಗಾಲಯಗಳು, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಹಾಗೂ ಇತಿಹಾಸ ಸಂಬಂಧಿ ವಸ್ತು ಸಂಗ್ರಹಾಲಯಗಳು, ಬೊಟಾನಿಕಲ್‌ ಗಾರ್ಡನ್‌, ಇಂದ್ರಪ್ರಸ್ಥ ಯಕ್ಷಗಾನ ಸಂಗ್ರಹಾಲಯ, ಕ್ಯಾಂಪಸ್‌ ಒಳಗಡೆ ಬ್ಯಾಂಕಿಂಗ್‌ ವ್ಯವಸ್ಥೆ, ವಿದ್ಯಾರ್ಥಿ ಆರೋಗ್ಯ ಕೇಂದ್ರ, ಸಿಸಿ ಕ್ಯಾಮರಾ ಅಳವಡಿಸಿದ ಕ್ಯಾಂಪಸ್‌ನೊಂದಿಗೆ ಶಿಸ್ತುಬದ್ಧ ಶಿಕ್ಷಣ ಇಲ್ಲಿಯ ವಿಶೇಷತೆ.

ಕಾಲೇಜು ವೈಶಿಷ್ಟ್ಯಗಳು: ಪ್ರತಿ ವರುಷ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ರ್‍ಯಾಂಕುಗಳು, ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹ, ನೈತಿಕ ಹಾಗೂ ಆಧ್ಯಾತ್ಮಿಕ ಶಿಬಿರ, ಯಕ್ಷಗಾನ ತರಬೇತಿ ಕೇಂದ್ರ, ಎನ್‌ಎಸ್‌ಎಸ್‌, ರೋವರ್ ಆಂಡ್‌, ರೇಂಜರ್, ಯುತ್‌ ರೆಡ್‌ ಕ್ರಾಸ್‌ ಕ್ರಿಯಾಶೀಲ ಘಟಕಗಳು, ಸಾಹಿತ್ಯ, ಲಲಿತಕಲೆ, ಯಕ್ಷಗಾನ, ಫೋಟೋಗ್ರಫಿ ಮುಂತಾದ ಸಂಘಗಳು, ಸಾಹಿತ್ಯ ಮತ್ತು ಸಾಹಿತ್ಯೇತರ ವಿಷಯಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ವಿಚಾರಸಂಕಿರಣಗಳ ಆಯೋಜನೆ ಕಾಲೇಜಿನ ವೈಶಿಷ್ಟ್ಯಗಳಾಗಿವೆ.

ಈಗಾಗಲೇ ಎಲ್ಲಾ ವಿಭಾಗದ ಪ್ರವೇಶಾತಿಗಳು ಆರಂಭಗೊಂಡಿದ್ದು ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಪದವಿ ಪೂರ್ವ ,ಪದವಿ ಹಾಗೂ ಸ್ನಾತಕೋತ್ತರ ವಿಭಾಗವನ್ನು ಸಂಪರ್ಕಿಸುವಂತೆ ಕಾಲೇಜಿನ ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.