ಉಡುಪಿ ಅಭಿವೃದ್ಧಿಯ ಪುನಶ್ಚೇತನಕ್ಕೆ ಬಿಜೆಪಿ: ಹೆಗ್ಡೆ

Team Udayavani, Apr 29, 2018, 7:30 AM IST

ಉಡುಪಿ: ಕಳೆದ ಐದು ವರ್ಷಗಳಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಆಡಳಿತಾತ್ಮಕವಾಗಿ ಎಂದೆಂದೂ ಕಾಣದ ಶೋಚನೀಯ ಪರಿಸ್ಥಿತಿಯನ್ನು ಕಂಡಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಪಥವನ್ನು ಪುನಶ್ಚೇತನಗೊಳಿಸಲು ಬಿಜೆಪಿ ಅಭ್ಯರ್ಥಿ ಕೆ. ರಘುಪತಿ ಭಟ್‌ ಅವರನ್ನು ಬೆಂಬಲಿಸಿ ಗೆಲ್ಲಿಸಬೇಕಿದೆ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ಹೇಳಿದರು.

ಶುಕ್ರವಾರ ಮಣಿಪಾಲ, ಕರಂಬಳ್ಳಿ, ಗುಂಡಿಬೈಲು, ಮೂಡು ಸಗ್ರಿ, ಕಲ್ಮಾಡಿ ಮೊದಲಾದ ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿ ಕೆ. ರಘುಪತಿ ಭಟ್‌ ಪರ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಮೋದ್‌ ಮಧ್ವರಾಜ್‌ ಅಭಿವೃದ್ಧಿ
ಯಲ್ಲಿ ಸಂಪೂರ್ಣ ವೈಫ‌ಲ್ಯ ಕಂಡಿದ್ದಾರೆ. ಹಿಂದಿನ ಸರಕಾರ ವಿವಿಧ ಯೋಜನೆಗಳಿಗೆ ಮಂಜೂರು ಮಾಡಿದ ಅನುದಾನಗಳನ್ನು ಕೂಡ ಸಮರ್ಥವಾಗಿ ಬಳಸಿಕೊಳ್ಳಲು ವಿಫ‌ಲರಾಗಿದ್ದಾರೆ. ಆದರೆ ನಿರಂತರವಾಗಿ ಶಿಲಾನ್ಯಾಸಗಳನ್ನು ಮಾಡಿ ಫ್ಲೆಕ್ಸ್‌ಗಳನ್ನು ಹಾಕಿ, ಪತ್ರಿಕೆಗಳಲ್ಲಿ ಜಾಹಿರಾತು ನೀಡಿ ಪ್ರಚಾರವನ್ನಷ್ಟೇ ಮಾಡಿಕೊಂಡು ನಂಬರ್‌ ಒನ್‌ ಶಾಸಕ ಎಂದು ತಮ್ಮನ್ನು  ಬಿಂಬಿಸಿಕೊಂಡಿದ್ದಾರೆ. ಪ್ರಮೋದ್‌ ಅವರ‌ ದುರಾಡಳಿತದಿಂದ ಜನರು ಅಸಹನೀಯ ಪರಿಸ್ಥಿಯನ್ನು ಅನುಭವಿಸುತ್ತಿದ್ದು, ಬದಲಾವಣೆಗಾಗಿ ಅವಕಾಶವನ್ನು ಎದುರು ನೋಡುತ್ತಿದ್ದಾರೆ ಎಂದರು.

ಮೀನುಗಾರಿಕಾ ಫೆಡರೇಶನ್‌ ಅಧ್ಯಕ್ಷ ಯಶಪಾಲ್‌ ಎ. ಸುವರ್ಣ, ನಗರಸಭಾ ಸದಸ್ಯ ನರಸಿಂಹ ನಾಯಕ್‌, ಜಯಕರ ಪೂಜಾರಿ ಮಣಿಪಾಲ, ಅಲ್ವಿನ್‌ ಡಿ’ಸೋಜಾ, ನಗರ ಅಧ್ಯಕ್ಷ ಪ್ರಭಾಕರ್‌ ಪೂಜಾರಿ, ದಾವೂದ್‌ ಅಬೂಬಕ್ಕರ್‌, ವಾರ್ಡ್‌ ಪ್ರಮುಖರಾದ ಸುಧಾಮ ಮಣಿಪಾಲ, ಕಿಶೋರ್‌ ಕುಮಾರ್‌, ಸಂತೋಷ್‌ ಪಾಲನ್‌, ಈಶ್ವರ್‌ ಪೂಜಾರಿ, ಸಂತೋಷ್‌ ಆಚಾರ್ಯ, ವಿನಯಕುಮಾರ್‌, ಸುಂದರ್‌ ಕಲ್ಮಾಡಿ, ವಿವೇಕ್‌ ಕಲ್ಮಾಡಿ, ಕಿಶೋರ್‌ ನೇಕಾರರ ಕಾಲನಿ, ರಾಮದಾಸ್‌ ನಾಯಕ್‌, ರಾಧಾಕೃಷ್ಣ, ಸೂರಜ್‌, ಪ್ರಭಾಕರ್‌ ಬಂಗೇರ, ಅನಿತಾ, ಉಷಾ ಹೆಬ್ಟಾರ್‌, ಸುಮಾ ನಾಯಕ್‌, ಮಾಯಾ ಕಾಮತ್‌, ಗುಲಾಬಿ ಪೂಜಾರಿ, ಸತೀಶ್‌ ಸಾಲಿಯಾನ್‌ ಪಾಲ್ಗೊಂಡಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ