ತೆಳ್ಳಾರು: ಕಲ್ಲೊಟ್ಟು ದೇಗುಲ ಬ್ರಹ್ಮಕಲಶ, ಧಾರ್ಮಿಕ ಸಭೆ ಸಂಪನ್ನ

Team Udayavani, May 15, 2019, 6:06 AM IST

ಅಜೆಕಾರು: ತೆಳ್ಳಾರು ಕಲ್ಲೊಟ್ಟು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ, ಅಬ್ಬಗ ದಾರಗ, ಆಲಡೆ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಬ್ರಹ್ಮಕಲಶ ಸಂಪನ್ನಗೊಂಡು ಧಾರ್ಮಿಕ ಸಭೆ ಮೇ 13ರಂದು ನಡೆಯಿತು.

ಧಾರ್ಮಿಕ ಸಭೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ದೇವಸ್ಥಾನ ಗಳು ಜೀರ್ಣೋದ್ಧಾರ ಗೊಂಡು ಸುಸ್ಥಿತಿ ಯಲ್ಲಿದ್ದರೆ ಗ್ರಾಮವು ಸುಭಿಕ್ಷವಾಗಿ ರುತ್ತದೆ ಎಂದರು. ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವದಿಸಿ, ಮಕ್ಕಳಿಗೆ ಹೆತ್ತವರು ಎಳವೆಯಲ್ಲಿಯೇ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು. ಆಗ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆ ಯಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಶಾಸಕ ವಿ. ಸುನಿಲ್ ಕುಮಾರ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ, ಉದ್ಯಮಿ ಕರಿಯಣ್ಣ ಶೆಟ್ಟಿ, ಮುಂಬಯಿ ಉದ್ಯಮಿ ಶಿವರಾಮ ಶೆಟ್ಟಿ ಅಜೆಕಾರು, ವೆಂಕಟೇಶ್‌ ಭಂಡಾರಿ, ಐಕಳ ಹರೀಶ್‌ ಶೆಟ್ಟಿ, ಹುರ್ಲಾಡಿ ರಘುವೀರ್‌ ಎ. ಶೆಟ್ಟಿ, ಪ್ರಕಾಶ್‌ ಶೆಟ್ಟಿ, ವೆಂಕಟೇಶ್‌ ಭಂಡಾರಿ ಮುಂಬಯಿ, ಉದಯ ಪೂಜಾರಿ, ಬಾಲಕೃಷ್ಣ ಶೆಟ್ಟಿ ಮುಂಡ್ಕೂರು, ಧ.ಗ್ರಾ.ಯೋ. ಕಾರ್ಕಳ ಯೋಜನಾಧಿಕಾರಿ ಟಿ. ಕೃಷ್ಣ, ನಿವೃತ್ತ ಕಸ್ಟಂಸ್‌ ಅಧಿಕಾರಿ ರೋಹಿತ್‌ ಶೆಟ್ಟಿ, ನ್ಯಾಯ ವಾದಿ ಮಣಿರಾಜ್‌ ಶೆಟ್ಟಿ, ಸುಧೀರ್‌ ಹೆಗ್ಡೆ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಹೇಶ್‌ ಶೆಟ್ಟಿ ವಹಿಸಿದ್ದರು.

ಈ ಸಂದರ್ಭ ಸ್ಥಳ ದಾನಿಗಳಾದ ಮನೋರಮಾ ಗಣೇಶ್‌ ರಾವ್‌, ದಿನೇಶ್‌ ರಾವ್‌, ರಾಜೇಶ್‌ ರಾವ್‌ ಹಾಗೂ ದೇವಸ್ಥಾನದ ಗುಡಿರಚನೆಯ ಶಿಲ್ಪಿ ಪ್ರದೀಪ್‌ ಪಾಟಕ್‌, ಮರದ ಶಿಲ್ಪಿ ವಿಶ್ವನಾಥ ಆಚಾರ್ಯ, ಮೇಸ್ತ್ರಿ ಶೇಖರ್‌ ಬಲಾಜೆ ಅವರನ್ನು ಸಮ್ಮಾನಿಸಲಾಯಿತು.

ಸಂಜೀವ ಪ್ರಾರ್ಥಿಸಿದರು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು. ಸಂಜೀವ ದೇವಾಡಿಗ ಸ್ವಾಗತಿಸಿ ವಂದಿಸಿದರು. ವಿವಿಧ ಸಮಿತಿ ಪದಾಧಿಕಾರಿಗಳು ಸಹಕರಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ