ಬ್ರಹ್ಮಾವರ-ಜನ್ನಾಡಿ ರಸ್ತೆ: ವಾಹನ ದಟ್ಟಣೆ ಹೆಚ್ಚಳ

Team Udayavani, May 16, 2019, 6:24 AM IST

ಕೋಟ: ಆಗುಂಬೆ ರಸ್ತೆಗೆ ಪರ್ಯಾಯವಾಗಿ ಬ್ರಹ್ಮಾವರ-ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಯನ್ನೇ ಹಲವು ವಾಹನ ಸವಾರರು ಬಳಸುತ್ತಿದ್ದು, ಇದನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆಗೆ ಮತ್ತೆ ಬಲ ಬಂದಿದೆ.

ಈ ರಸ್ತೆಯ ಮೂಲಕ ಹುಲಿಕಲ್‌ ಘಾಟಿ ಮಾರ್ಗವಾಗಿ ಸಾಗರ- ಶಿವಮೊಗ್ಗ- ಬೆಂಗಳೂರು ತಲುಪಬಹುದು. ಘನ ವಾಹನಗಳು ಕೂಡ ವರ್ಷವಿಡೀ ಈ ಮಾರ್ಗದ ಮೂಲಕ ಸಂಚರಿಸುತ್ತವೆ. ಉಡುಪಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರೂ ಈ ರಸ್ತೆಯನ್ನು ಅವಲಂಬಿಸುವುದು ಹೆಚ್ಚು. ಕೋಟ-ಗೋಳಿಯಂಗಡಿ, ಬಾಕೂìರು-ಮಂದಾರ್ತಿ ಮುಂತಾದ ಪ್ರಮುಖ ರಸ್ತೆಗಳು ಇದರೊಂದಿಗೆ ಸಂಪರ್ಕ ಹೊಂದಿವೆ.

ರಾಜ್ಯ ಹೆದ್ದಾರಿ ಬೇಡಿಕೆ ಯಾಕೆ?
ಈ ರಸ್ತೆಯಲ್ಲಿ ವರ್ಷವಿಡೀ ವಾಹನಗಳ ಓಡಾಟ ಅಧಿಕವಾಗಿದ್ದು, ವಿಸ್ತರಣೆ ಅನಿವಾರ್ಯ. ಅಧಿಕ ಭಾರದ ವಾಹನಗಳ ಓಡಾಟವಿದ್ದರೂ ಸೇತುವೆಗಳು ಸ್ವಾತಂತ್ರÂಪೂರ್ವದವು. ಅಸಮರ್ಪಕ ಚರಂಡಿಯಿಂದಾಗಿ ರಸ್ತೆಯ ಮೇಲೆ ನೀರು ಹರಿದು ಡಾಮರು ಕೊಚ್ಚಿ ಹೋಗುತ್ತಿದೆ. ಹಲವೆಡೆ ಅಪಾಯಕಾರಿ ತಿರುವುಗಳಿವೆ. ದಾರಿ ಮಧ್ಯೆ ಸಿಗುವ ಪಟ್ಟಣ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ರಸ್ತೆಗೆ ತಾಗಿದಂತಿವೆ, ಸಮರ್ಪಕ ನಿಲ್ದಾಣಗಳಿಲ್ಲ. ಸಂಚಾರ ಸಮಸ್ಯೆ ಇಲ್ಲಿ ಪ್ರತಿದಿನದ ವಿದ್ಯಮಾನ.

ಹೀಗಾಗಿ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸಿ ಅಗಲ ಗೊಳಿಸಬೇಕು, ಸೇತುವೆಗಳ ದುರಸ್ತಿ, ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆ.

ಶೀಘ್ರ ಪ್ರಸ್ತಾವನೆ ಸಲ್ಲಿಕೆ
ಬ್ರಹ್ಮಾವರ-ಜನ್ನಾಡಿ ರಸ್ತೆಯಲ್ಲಿ ವಾಹನ ದಟ್ಟಣೆ ಇದ್ದು, ಮೇಲ್ದರ್ಜೆಗೇರುವ ಅರ್ಹತೆಯಿದೆ. ಸರಕಾರ ಈ ಕುರಿತು ವರದಿ ಕೇಳಿದ್ದು, ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸಲಿದ್ದೇವೆ.
– ಜಗದೀಶ್‌ ಭಟ್‌, ಸಹಾಯಕ ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಉಡುಪಿ

ರಾಜ್ಯ ಹೆದ್ದಾರಿಯಾಗಲಿ
ಬ್ರಹ್ಮಾವರ-ಜನ್ನಾಡಿ ರಸ್ತೆ ಹಾಗೂ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತಿದ್ದು, ಸಾಕಷ್ಟು ವಾಹನ ಸಂಚಾರ ಹೊಂದಿದೆ. ಇದನ್ನು ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸಬೇಕಿದೆ. ಈ ಕುರಿತು ಸ್ಥಳೀಯರು ಹಲವು ಬಾರಿ ಮನವಿ ಮಾಡಿದ್ದೇವೆ. ಜನಪ್ರತಿನಿಧಿಗಳು ಈ ಕುರಿತು ಕಾಳಜಿ ವಹಿಸಬೇಕು.
-ಸತೀಶ್‌ ಶೆಟ್ಟಿ ಯಡ್ತಾಡಿ, ಸ್ಥಳೀಯರು

– ರಾಜೇಶ ಗಾಣಿಗ ಅಚ್ಲ್ಯಾಡಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ