ಅಪಾಯದಲ್ಲಿದೆ ಬಿಜೂರು 4ನೇ ವಾರ್ಡ್‌ನ ಸೇತುವೆ

Team Udayavani, Jun 25, 2019, 5:59 AM IST

ಬೈಂದೂರು: ಬಿಜೂರಿನ 3 ಮತ್ತು 4ನೇ ವಾರ್ಡ್‌ನ ಜನತೆ ಬಳಸುವ ಕಿರುಸೇತುವೆ ಶಿಥಿಲಗೊಂಡಿದ್ದು ಅಪಾಯದ ಸ್ಥಿತಿಯಲ್ಲಿದೆ. ಈ ಎರಡು ವಾರ್ಡ್‌ಗಳ ಮಧ್ಯೆ ಹರಿಯುವ ಹೊಳೆಗೆ ಅಡ್ಡಲಾಗಿ ಈ ಸೇತುವೆ ಕಟ್ಟಲಾಗಿದೆ.

ಪ್ರತಿದಿನ ಘನ ವಾಹನಗಳು, ಶಾಲಾ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ.ಮಳೆಗಾಲದ ಸಮಯದಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಸೇತುವೆ ಕೊಚ್ಚಿ ಹೋಗುವ ಸಾಧ್ಯತೆಗಳಿವೆ. ಮಾತ್ರವಲ್ಲದೆ ಬೀದಿ ದೀಪಗಳು ಇಲ್ಲದ ಕಾರಣ ಸಂಜೆಯಾದೊಡನೆ ಈ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರು ಆತಂಕ ಪಡುವಂತಾಗಿದೆ.

ಸಂಬಂಧಪಟ್ಟ ಇಲಾಖೆ ಈ ಸೇತುವೆಯನ್ನು ದುರಸ್ತಿ ಮಾಡಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ