ಖಾಸಗಿ ಬಸ್ ಡಿಕ್ಕಿ: ಮಹಿಳೆ ಸಾವು
Team Udayavani, Feb 20, 2020, 10:44 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಉಡುಪಿ: ಖಾಸಗಿ ಬಸ್ ಡಿಕ್ಕಿ ಹೊಡೆದು ಸ್ಕೂಟಿ ಚಲಾಯಿಸುತ್ತಿದ್ದ ಮಹಿಳೆ ಸ್ಥಳದಲ್ಲೆ ಮೃತಪಟ್ಟ ಘಟನೆ ಕಿನ್ನಿಮೂಲ್ಕಿ ಬಳಿ ಗುರುವಾರ ರಾತ್ರಿ ನಡೆದಿದೆ.
ಮೃತ ಪಟ್ಟವರನ್ನು ಅಂಬಲಪಾಡಿ ನಿವಾಸಿ ಮಮತಾ (35) ಎಂದು ಗುರುತಿಸಲಾಗಿದೆ. ಕಿನ್ನಿಮೂಲ್ಕಿ ಪೆಟ್ರೊಲ್ ಪಂಪ್‌ನಿಂದ ತನ್ನ ಸ್ಕೂಟಿಗೆ ಇಂಧನ ತುಂಬಿಸಿ ಗೋವಿಂದ ಕಲ್ಯಾಣ ಮಂಟಪ ಕಡೆ ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ.
ಮಂಗಳೂರಿನಿಂದ ಉಡುಪಿ ಕಡೆ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ ಚಾಲಕ ಸ್ಕೂಟಿಯನ್ನು ಗಮನಿಸದೆ ಇದ್ದುದರಿಂದ ಸವಾರೆ ಬಸ್ಸಿನ ಎಡ ಬದಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎನ್ನಲಾಗಿದೆ. ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.