Padubidri ಹೆದ್ದಾರಿಯಲ್ಲೇ ಬಸ್‌ ನಿಲುಗಡೆ: ಹಿಂಬದಿಗೆ ಕಾರು ಢಿಕ್ಕಿ , ಮಹಿಳೆಗೆ ತೀವ್ರ ಗಾಯ

Team Udayavani, Jun 22, 2024, 12:12 AM IST

Padubidri ಹೆದ್ದಾರಿಯಲ್ಲೇ ಬಸ್‌ ನಿಲುಗಡೆ: ಹಿಂಬದಿಗೆ ಕಾರು ಢಿಕ್ಕಿ , ಮಹಿಳೆಗೆ ತೀವ್ರ ಗಾಯ

ಪಡುಬಿದ್ರಿ: ಸರ್ವಿಸ್‌ ರಸ್ತೆಗಿಳಿಯದೇ ಹೆದ್ದಾರಿಯನ್ನೇ ಬಳಸಿ ಸಾಗುವ ಚಾಳಿ ಬಸ್‌ಗಳಲ್ಲಿ ಪಡುಬಿದ್ರಿಯಲ್ಲಿ ಸತತವಾಗಿ ಮುಂದು ವರಿದಿದ್ದು, ಇದರಿಂದಾಗಿ ಶುಕ್ರವಾರ ಸಂಜೆಯ ವೇಳೆಗೆ ಸಂಭವಿಸಿದ ಅಪಘಾತದಲ್ಲಿ ಕಾರೊಂದು ಬಸ್‌ ಹಿಂಬದಿಗೆ ಢಿಕ್ಕಿಯಾಗಿ ಮಂಗಳೂರು ಮಂಗಳಾದೇವಿ ಪರಿಸರದ ಮಹಿಳೆ ಪುಷ್ಪಲತಾ ಆಚಾರ್ಯ (56) ತೀವ್ರ ವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಂಗಳೂರು ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದ ತಡೆರಹಿತ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಠಾತ್ತನೇ ಯಾವುದೇ ಮುನ್ಸೂಚನೆ ಇಲ್ಲದೇ ನಿಲ್ಲಿಸಿದ ಪರಿಣಾಮವಾಗಿ ಅದರ ಹಿಂದಿ ನಿಂದ ಹೆದ್ದಾರಿಯಲ್ಲೇ ಬಂದಿದ್ದ ಕಾರೊಂದು ಬಸ್‌ ಹಿಂಬದಿಗೆ ಢಿಕ್ಕಿಯಾಗಿದೆ.

ಇದೇ ಕಾರಲ್ಲಿ ಮಂಗಳೂರಿನಿಂದ ಉಡುಪಿಯತ್ತ ಹೋಗುತ್ತಿದ್ದ ತಾಯಿ, ಮಗಳು ಹಾಗೂ ಸಂಬಂಧಿಯೋರ್ವರ ಸಹಿತ ಮೂರು ಮಂದಿ ಇದ್ದು ಮುಂದಿನ ಸಾಲಿನಲ್ಲಿ ಚಾಲಕನ ಬದಿ ಯಲ್ಲೇ ಕುಳಿತಿದ್ದ ಪುಷ್ಪಲತಾ ಅವರ ಕಾಲುಗಳಿಗೆ, ಕೈಗೆ ಹಾಗೂ ಮೂಗಿಗೆ ಗಂಭೀರ ಗಾಯಗಳಾಗಿದ್ದು ಪಡು ಬಿದ್ರಿ ಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಪಡುಬಿದ್ರಿ ಪೊಲೀಸರು ಅಪಘಾತ ಸಂಭವಿಸಿದ ತಾಣಕ್ಕೆ ಭೇಟಿಯಿತ್ತಿದ್ದಾರೆ.

ಪಡುಬಿದ್ರಿಯ ಜನತೆಗೆ “ಹೆದ್ದಾರಿಯೇ ಗೋಳು’ ಎಂಬಂತೆ ಉದಯವಾಣಿ ವರದಿ ಪ್ರಕಟಿಸಿದ ಎರಡೇ ದಿನದಲ್ಲಿ ಮತ್ತೆ ಈ ಅಪಘಾತ ಸಂಭವಿಸಿದೆ. ಪಡುಬಿದ್ರಿಗೆ ಆಗಮಿಸುವ ಸುಮಾರು 200ಕ್ಕೂ ಹೆಚ್ಚಿನ ತಡೆರಹಿತ ಮತ್ತು ಸರ್ವೀಸ್‌ ಬಸ್ಸುಗಳಲ್ಲಿ ಹೆಚ್ಚಿನ ಬಸ್‌ಗಳು ಈಗಲೂ ತಮ್ಮ ಹೆದ್ದಾರಿ ನಿಲುಗಡೆಯನ್ನೇ ಮುಂದುವರಿಸಿವೆ. ಪಡುಬಿದ್ರಿಯು ಶಾಶ್ವತ ಅಪಘಾತ ವಲಯವಾಗಿ ಮಾರ್ಪಟ್ಟಿ ರುವುದಾಗಿ ಸಂಬಂಧಿತ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.

ಟಾಪ್ ನ್ಯೂಸ್

flights ಸಹಿತ ಹಲವು ಸೇವೆಗಳಲ್ಲಿ ವ್ಯತ್ಯಯ; ಕರಾವಳಿಯಲ್ಲೂ ಸಾಫ್ಟ್‌ವೇರ್‌ ದೋಷ ಪರಿಣಾಮ

flights ಸಹಿತ ಹಲವು ಸೇವೆಗಳಲ್ಲಿ ವ್ಯತ್ಯಯ; ಕರಾವಳಿಯಲ್ಲೂ ಸಾಫ್ಟ್‌ವೇರ್‌ ದೋಷ ಪರಿಣಾಮ

Dakshina Kannada ಜಿಲ್ಲಾದ್ಯಂತ ಜಡಿ ಮಳೆ; ಕೃತಕ ನೆರೆ, ಸಂಪರ್ಕ ಕಡಿತ

Dakshina Kannada ಜಿಲ್ಲಾದ್ಯಂತ ಜಡಿ ಮಳೆ; ಕೃತಕ ನೆರೆ, ಸಂಪರ್ಕ ಕಡಿತ

Udupi District: ಮನೆಗಳು ಜಲಾವೃತ: ಕಾಪು: ನೆರೆಗೆ ಸಿಲುಕಿದ 35 ಮಂದಿಯ ಸ್ಥಳಾಂತರ

Udupi District: ಮನೆಗಳು ಜಲಾವೃತ: ಕಾಪು: ನೆರೆಗೆ ಸಿಲುಕಿದ 35 ಮಂದಿಯ ಸ್ಥಳಾಂತರ

Kedarnath

Uttarakhand; ಚಾರ್‌ಧಾಮ್‌ಗಳ ಹೆಸರು ದುರ್ಬಳಕೆ ತಡೆಗೆ ಕಾಯ್ದೆ

Fraud Case ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪ: 1.50 ಕೋ.ರೂ. ವಂಚನೆ

Fraud Case ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪ: 1.50 ಕೋ.ರೂ. ವಂಚನೆ

vinay-khwatra

America; ಭಾರತದ ರಾಯಭಾರಿ ಸ್ಥಾನಕ್ಕೆ ವಿನಯ್‌ ಕ್ವಾತ್ರಾ ನೇಮಕ

Mangaluru ಕಳವು ಪ್ರಕರಣ: ಮೂವರ ಬಂಧನ; 4.64 ಲ.ರೂ. ಮೌಲ್ಯದ ಚಿನ್ನಾಭರಣ ವಶ

Mangaluru ಕಳವು ಪ್ರಕರಣ: ಮೂವರ ಬಂಧನ; 4.64 ಲ.ರೂ. ಮೌಲ್ಯದ ಚಿನ್ನಾಭರಣ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi District: ಮನೆಗಳು ಜಲಾವೃತ: ಕಾಪು: ನೆರೆಗೆ ಸಿಲುಕಿದ 35 ಮಂದಿಯ ಸ್ಥಳಾಂತರ

Udupi District: ಮನೆಗಳು ಜಲಾವೃತ: ಕಾಪು: ನೆರೆಗೆ ಸಿಲುಕಿದ 35 ಮಂದಿಯ ಸ್ಥಳಾಂತರ

Udupi ವಿದ್ಯುತ್‌ ಆಘಾತದಿಂದ ಗಾಯಗೊಂಡಿದ್ದ ಎಲೆಕ್ಟ್ರಿಷಿಯನ್ ಸಾವು

Udupi ವಿದ್ಯುತ್‌ ಆಘಾತದಿಂದ ಗಾಯಗೊಂಡಿದ್ದ ಎಲೆಕ್ಟ್ರಿಷಿಯನ್ ಸಾವು

Udupi ಪತ್ನಿಗೆ ಕಿರುಕುಳ, ಹಲ್ಲೆ : ದೂರು

Udupi ಪತ್ನಿಗೆ ಕಿರುಕುಳ, ಹಲ್ಲೆ : ದೂರು

Hebri ನಾಡ್ಪಾಲು: ನೀರುಪಾಲಾದ ವ್ಯಕ್ತಿಗಾಗಿ ಶೋಧ

Hebri ನಾಡ್ಪಾಲು: ನೀರುಪಾಲಾದ ವ್ಯಕ್ತಿಗಾಗಿ ಶೋಧ

7-kaup

Kaup: ತಾಲೂಕಿನಾದ್ಯಂತ ಭಾರೀ ಗಾಳಿ-ಮಳೆ; ಹೊಳೆ ತೀರದ ಜನರಲ್ಲಿ ನೆರೆ ಭೀತಿ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

flights ಸಹಿತ ಹಲವು ಸೇವೆಗಳಲ್ಲಿ ವ್ಯತ್ಯಯ; ಕರಾವಳಿಯಲ್ಲೂ ಸಾಫ್ಟ್‌ವೇರ್‌ ದೋಷ ಪರಿಣಾಮ

flights ಸಹಿತ ಹಲವು ಸೇವೆಗಳಲ್ಲಿ ವ್ಯತ್ಯಯ; ಕರಾವಳಿಯಲ್ಲೂ ಸಾಫ್ಟ್‌ವೇರ್‌ ದೋಷ ಪರಿಣಾಮ

Dakshina Kannada ಜಿಲ್ಲಾದ್ಯಂತ ಜಡಿ ಮಳೆ; ಕೃತಕ ನೆರೆ, ಸಂಪರ್ಕ ಕಡಿತ

Dakshina Kannada ಜಿಲ್ಲಾದ್ಯಂತ ಜಡಿ ಮಳೆ; ಕೃತಕ ನೆರೆ, ಸಂಪರ್ಕ ಕಡಿತ

Udupi District: ಮನೆಗಳು ಜಲಾವೃತ: ಕಾಪು: ನೆರೆಗೆ ಸಿಲುಕಿದ 35 ಮಂದಿಯ ಸ್ಥಳಾಂತರ

Udupi District: ಮನೆಗಳು ಜಲಾವೃತ: ಕಾಪು: ನೆರೆಗೆ ಸಿಲುಕಿದ 35 ಮಂದಿಯ ಸ್ಥಳಾಂತರ

Kedarnath

Uttarakhand; ಚಾರ್‌ಧಾಮ್‌ಗಳ ಹೆಸರು ದುರ್ಬಳಕೆ ತಡೆಗೆ ಕಾಯ್ದೆ

Wenlock Hospital ಕೇರಳದ ಕೊಲ್ಲಂ ಮೂಲದ ವ್ಯಕ್ತಿ ಸಾವು

Wenlock Hospital ಕೇರಳದ ಕೊಲ್ಲಂ ಮೂಲದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.