ಅರ್ಧ ವರ್ಷ ಕಳೆದರೂ ಕನ್ನಡ ಪಠ್ಯ ಪುಸ್ತಕ ಸಿಕ್ಕಿಲ್ಲ !

ಸರಕಾರಿ ಆಂ.ಮಾ. ವಿದ್ಯಾರ್ಥಿಗಳ ಕೈ ಸೇರದ "ಸವಿಕನ್ನಡ' ಪಠ್ಯ

Team Udayavani, Oct 17, 2019, 5:45 AM IST

ಕುಂದಾಪುರ: ಶಿಕ್ಷಣದ ಗುಣಮಟ್ಟ ಸುಧಾರಣೆ, ಬಡ ಮಕ್ಕಳು ಕೂಡ ಆಂಗ್ಲ ಮಾಧ್ಯಮ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಆಶಯದೊಂದಿಗೆ ಆಯ್ದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಲಾಗಿದೆ. ಆದರೆ ಅರ್ಧ ವಾರ್ಷಿಕ ರಜೆ ಮುಗಿದು ಶಾಲಾರಂಭವಾಗುತ್ತಿದ್ದರೂ ಇನ್ನೂ ಈ ಮಕ್ಕಳಿಗೆ ಕನ್ನಡ ಪಠ್ಯಪುಸ್ತಕವೇ ಸಿಕ್ಕಿಲ್ಲ.

ದ.ಕ. ಜಿಲ್ಲೆಯ 42, ಉಡುಪಿ ಜಿಲ್ಲೆಯ 22 ಸರಕಾರಿ
ಪ್ರಾಥಮಿಕ ಶಾಲೆಗಳ ಸಹಿತ ರಾಜ್ಯಾದ್ಯಂತ 1 ಸಾವಿರ ಶಾಲೆಗಳಲ್ಲಿ ಪ್ರಸಕ್ತ ವರ್ಷದಿಂದ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಲಾಗಿದ್ದು ಒಟ್ಟಾರೆ ಒಂದನೇ ತರಗತಿಯಲ್ಲಿ 25,156 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬೇರೆ ಎಲ್ಲ ಪಠ್ಯ ಪುಸ್ತಕಗಳನ್ನು ನೀಡಲಾಗಿದ್ದರೂ ಮಾತೃಭಾಷೆ ಕನ್ನಡ ಬೋಧನೆಯ “ಸವಿಕನ್ನಡ’ ಪಠ್ಯಪುಸ್ತಕ ಮಾತ್ರ ಪೂರೈಸಿಲ್ಲ.

ಬೇರೆ – ಬೇರೆ
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಬೋಧಿಸುವ “ನಲಿ- ಕಲಿ’ ಪಠ್ಯ ಪುಸ್ತಕ ಹಾಗೂ ಆಂಗ್ಲ ಮಾಧ್ಯಮದ 1ನೇ ತರಗತಿ ಮಕ್ಕಳಿಗೆ ಕಲಿಸುವ “ಸವಿಕನ್ನಡ’ ಪಠ್ಯ ಪುಸ್ತಕದಲ್ಲಿರುವ ಪಠ್ಯ ಕ್ರಮಗಳು ಬೇರೆ ಬೇರೆಯಾಗಿವೆ. ಆದ್ದರಿಂದ ಆಂಗ್ಲ ಮಾಧ್ಯಮ ಶಾಲೆಗಳ ಶಿಕ್ಷಕರು ತರಬೇತಿ ವೇಳೆ ನೀಡಿದ ಪ್ರತಿಗಳನ್ನು ತಂದು ಪಾಠ ಮಾಡುತ್ತಿರುವುದಾಗಿ ಶಿಕ್ಷಕರೊಬ್ಬರು ತಿಳಿಸಿದ್ದಾರೆ.

ಕನ್ನಡದ ನಿರ್ಲಕ್ಷ್ಯವೇ?
ಸರಕಾರಿ ಶಾಲೆಗಳಲ್ಲೂ ಆಂಗ್ಲ ಕಲಿಕೆಗೆ ಒತ್ತು ನೀಡುವ ತರಾತುರಿಯಲ್ಲಿ ಮಾತೃಭಾಷೆ ಕನ್ನಡದ ಬಗ್ಗೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ತೋರಿದೆಯೇ ಎನ್ನುವ ಮಾತುಗಳು ವ್ಯಕ್ತವಾಗಿವೆ. ಯಾಕೆಂದರೆ ಈ ಆಂಗ್ಲ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಪ್ರಥಮ ಭಾಷೆಯಾದರೆ, ಕನ್ನಡ ದ್ವಿತೀಯ ಭಾಷೆ. ಆದರೆ ಈ ಕನ್ನಡ ಪುಸ್ತಕವನ್ನು ಅರ್ಧ ವರ್ಷ ಕಳೆದರೂ ಇನ್ನೂ ವಿದ್ಯಾರ್ಥಿಗಳಿಗೆ ನೀಡಿಲ್ಲ.

ಆಂಗ್ಲ ಮಾಧ್ಯಮ ಶಾಲೆಗಳಿಗೆ ಕನ್ನಡ ಭಾಷಾ ಪಠ್ಯಪುಸ್ತಕ ಇನ್ನೂ ಬಂದಿಲ್ಲ. ಉಡುಪಿ ಜಿಲ್ಲೆಯಿಂದ 500 ಪುಸ್ತಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಬಂದಿದ್ದರಿಂದ ಅಲ್ಲಿಗೆ ಎರಡೆರಡು ಬಾರಿ ಪುಸ್ತಕ ಮುದ್ರಣವಾಗಬೇಕಿದ್ದರಿಂದ ಈ ಪುಸ್ತಕ ಮುದ್ರಣದಲ್ಲಿ ವಿಳಂಬವಾಗಿರಬಹುದು. ಕೂಡಲೇ ತರಿಸಿ ಕೊಡಲಾಗುವುದು.
– ಶೇಷಶಯನ ಕಾರಿಂಜ, ಉಪ ನಿರ್ದೇಶಕರು, ಶಿಕ್ಷಣ ಇಲಾಖೆ ಉಡುಪಿ

13,510 ಸವಿಕನ್ನಡ ಪಠ್ಯಪುಸ್ತಕಗಳ ಮುದ್ರಣ ಕಾರ್ಯ ಪೂರ್ಣಗೊಂಡಿದೆ. ದಸರಾ ರಜೆಯಿಂದಾಗಿ ಪೂರೈಕೆ ಸ್ವಲ್ಪ ವಿಳಂಬವಾಗಿದೆ. ಕೂಡಲೇ ಎಲ್ಲ ಶಾಲೆಗಳಿಗೂ ಪಠ್ಯಪುಸ್ತಕ ಪೂರೈಸಲಾಗುವುದು.
– ರಂಗಯ್ಯ ಕೆ.ಜಿ., ಉಪ ನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು

– ಪ್ರಶಾಂತ್‌ ಪಾದೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಅರಂತೋಡ: ಬದುಕು ನಾವು ಅಂದುಕೊಂಡಂತೆ ಇರುವುದಿಲ್ಲ. ಅದೆಷ್ಟೋ ಆಕಸ್ಮಿಕ ತಿರುವುಗಳು ಘಟಿಸುತ್ತವೆ. ಆದರೂ ಎದೆಗುಂದದೆ ಸಾಧನೆ ಮಾಡುವವರಿದ್ದಾರೆ. ಒಂದು ಕಾಲು ಹಾಗೂ...

  • ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾಜನತೆ ಅಭೂತಪೂರ್ವ ಆಶೀರ್ವಾದ ಮಾಡಿದ್ದಾರೆ. ಪಕ್ಷದ ಮೇಲೆ ಇನ್ನಷ್ಟು ಜವಾಬ್ದಾರಿಯನ್ನು ಹೊರಿಸಿದ್ದಾರೆ. ಜನತೆಯ...

  • ನಿಶ್ಮಿತಾ, ನಿನ್ನನ್ನು ತುಂಬಾ ಎಣಿಸ್ತಾ ಇದ್ದೇನೆ. ಯಾವಾಗ ಬರ್ತೀಯಾ?'' ""ಯಾವ ಪುರುಷಾರ್ಥಕ್ಕೆ ಬರ್ಬೇಕು ನಾನು?'' ""ಹಾಗಂದ್ರೆ ಹೇಗೆ ಮಗಾ? ನಂಗೆ ನಿನ್ನನ್ನು ಮತ್ತು...

  • ಪುತ್ತೂರು: ಪ್ರತಿಯೊಬ್ಬನ ಜೀವನದಲ್ಲಿ ಆತ ಅರಿತಿರುವ ಸಾಮಾನ್ಯ ಜ್ಞಾನ ಮುಖ್ಯವೆನಿಸುತ್ತದೆ. ಏಕೆಂದರೆ ಬದುಕಿಗೆ ಅನ್ನ ನೀಡುವುದು ಸಾಮಾನ್ಯ ಜ್ಞಾನ ಎಂದು ಮಾಜಿ...

  • ಪಣಜಿ: ಗೋವಾದ ಪೊಲೀಸ್‌ ಮಹಾ ನಿರ್ದೇಶಕ(ಡಿಜಿಪಿ) ಪ್ರಣಬ್‌ ನಂದಾ(57) ಅವರು ಕರ್ತವ್ಯಕ್ಕೆಂದು ದಿಲ್ಲಿಗೆ ತೆರಳಿದ್ದಾಗ ಹೃದಯಾಘಾತದಿಂದ ಅಸುನೀಗಿದ್ದಾರೆ. ಶುಕ್ರವಾರ...