ಚಕ್ರಾಸನ ರೇಸ್‌: ಉಡುಪಿಯ ತನುಶ್ರೀ ವಿಶ್ವದಾಖಲೆ

1.14 ನಿಮಿಷದಲ್ಲಿ 100 ಮೀ. ಕ್ರಮಿಸಿದ ಸಾಧನೆ

Team Udayavani, Feb 23, 2020, 6:00 AM IST

ಉಡುಪಿ: ಉಡುಪಿಯ ಬಾಲ ಯೋಗ ಪ್ರತಿಭೆ ತನುಶ್ರೀ ಪಿತ್ರೋಡಿ (11) ಶನಿವಾರ ಮತ್ತೆ ವಿಶ್ವದಾಖಲೆ ನಿರ್ಮಿಸಿದ ಸಾಧನೆ ಮಾಡಿ ಮೆರೆದಿದ್ದಾರೆ. ಚಕ್ರಾಸನ ರೇಸ್‌ನಲ್ಲಿ 100 ಮೀ. ದೂರವನ್ನು ಕೇವಲ 1 ನಿಮಿಷ 14 ಸೆಕೆಂಡ್‌ನ‌ಲ್ಲಿ ಕ್ರಮಿಸುವ ಮೂಲಕ ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ ಪುಸ್ತಕದಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ.

ವೆಂಕಟರಮಣ ನ್ಪೋರ್ಟ್ಸ್ ಆ್ಯಂಡ್‌ ಕಲ್ಚರಲ್‌ ಕ್ಲಬ್‌ ಸಹಯೋಗದಲ್ಲಿ ಉದ್ಯಾವರ ಗ್ರಾ.ಪಂ. ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ನೂರಾರು ಮಂದಿಯ ಸಮ್ಮುಖದಲ್ಲಿ ತನುಶ್ರೀ ಅವರಿಂದ ಈ ಸಾಧನೆ ದಾಖಲಾಯಿತು.

ಇದು ತನುಶ್ರೀ ಅವರ 5ನೇ ವರ್ಲ್ಡ್ ರೆಕಾರ್ಡ್‌. ಚಕ್ರಾಸನ ರೇಸ್‌ ಪ್ರದರ್ಶನ ನೀಡುವ ವೇಳೆ ತನುಶ್ರೀ ಅವರ ತಂದೆ ಉದಯ ಕುಮಾರ್‌, ತಾಯಿ ಸಂಧ್ಯಾ ಜತೆಗಿದ್ದು ಹುರಿದುಂಬಿಸಿದರು.

ಮಾಜಿ ಸಚಿವ ಪ್ರಮೋದ್‌ ಮಧ್ವರಾಜ…, ಕಾಂಗ್ರೆಸ್‌ ಮುಖಂಡರಾದ ಉದಯ್‌ ಶೆಟ್ಟಿ ಮುನಿಯಾಲ್‌, ನಾಗೇಶ್‌ ಉದ್ಯಾವರ, ಉದ್ಯಾವರ ಗ್ರಾ.ಪಂ. ಅಧ್ಯಕ್ಷೆ ಸುಗಂಧಿ ಶೇಖರ್‌, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ನೃತ್ಯ ಗುರು ರಾಮಕೃಷ್ಣ ಕೊಡಂಚ, ಜಯಕರ ಶೆಟ್ಟಿ ಇಂದ್ರಾಳಿ, ಸಂತ ಸಿಸಿಲಿ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ ರಚನ, ಪ್ರೀತಿ, ಪ್ರವೀಣ್‌ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಇರೋಲ್‌ ಕಾರ್ಯಕ್ರಮವನ್ನು ನಿರೂಪಿಸಿದರು.

ಹಿಂದಿನ ದಾಖಲೆಗಳು
ತನುಶ್ರೀ ಈ ಹಿಂದೆ 4 ವಿಶ್ವದಾಖಲೆ ನಿರ್ಮಿಸಿದ್ದಾರೆ. 2017ರಲ್ಲಿ ನಿರಾಲಂಬ ಪೂರ್ಣ ಚಕ್ರಾಸನವನ್ನು 1 ನಿಮಿಷದಲ್ಲಿ 19 ಬಾರಿ ಮಾಡಿದರೆ, 2018ರಲ್ಲಿ ಎದೆಯ ಭಾಗ ಮತ್ತು ತಲೆಯನ್ನು ಸ್ಥಿರವಾಗಿರಿಸಿ ಉಳಿದ ಭಾಗವನ್ನು 1.42 ನಿಮಿಷದಲ್ಲಿ 42 ಬಾರಿ ತಿರುಗಿಸಿ ದಾಖಲೆ ಮಾಡಿದ್ದರು. 2019ರಲ್ಲಿ ಇದೇ ಭಂಗಿಯಲ್ಲಿ ತನ್ನ ಹಿಂದಿನ ದಾಖಲೆ ಮುರಿದು ಹೊಸದಾಖಲೆ ನಿರ್ಮಿಸಿದ್ದರೆ 2019ರಲ್ಲಿ ಧನುರಾಸನ ಭಂಗಿಯನ್ನು 1.40 ನಿಮಿಷದಲ್ಲಿ 96 ಬಾರಿ ಮಾಡಿ ದಾಖಲೆ ನಿರ್ಮಿಸಿದ್ದರು.

ಚಕ್ರಾಸನ ಮಾಡು ವುದೇ ಕಷ್ಟ, ಮಾಡಿದರೂ ಅಬ್ಬಬ್ಟಾ ಎಂದರೆ 10 ಮೀಟರ್‌ ಕ್ರಮಿಸಬಹುದು. ಆದರೆ ತನುಶ್ರೀ ಕೇವಲ 1.14 ನಿಮಿಷದಲ್ಲಿ 100 ಮೀಟರ್‌ ಕ್ರಮಿಸಿ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
– ಡಾ| ಮನೀಷ್‌ ವಿಷ್ಣೋಯಿ, ಮುಖ್ಯಸ್ಥ (ತೀರ್ಪುಗಾರ), ಏಶ್ಯಾವಿಭಾಗ, ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ