ಚೆಕ್ ಬೌನ್ಸ್: 6.80 ಲ.ರೂ. ಪಾವತಿಗೆ ಆದೇಶ
Team Udayavani, Mar 31, 2018, 9:55 AM IST
ಉಡುಪಿ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ನಿಟ್ಟೂರು ಕೊಡಂಕೂರಿನ ಶ್ರೀನಿವಾಸ ಪೂಜಾರಿ ಅವರು 6.80 ಲ.ರೂ. ಹಣವನ್ನು ದೂರುದಾರೆ ಅಂಬಲಪಾಡಿ ಗ್ರಾಮದ ಸುಮತಿ ಎಸ್. ಅಮೀನ್ ಅವರಿಗೆ ಪಾವತಿಸುವಂತೆ ಉಡುಪಿಯ ನ್ಯಾಯಾಲಯವು ಆದೇಶಿಸಿದೆ.
ಸುಮತಿಗೆ ಸೇರಿದ್ದ ಸೋನಿ ಎಂಟರ್ಪ್ರೈಸಸ್ನಿಂದ ಶ್ರೀನಿವಾಸ ಪೂಜಾರಿ 3,35,000 ರೂ. ಮೊತ್ತದ ಕಟ್ಟಡ ಸಾಮಗ್ರಿಗಳನ್ನು ಖರೀದಿಸಿ 2 ಚೆಕ್ ನೀಡಿದ್ದರು. ಅವು ಬ್ಯಾಂಕಿನಲ್ಲಿ ಅಮಾನ್ಯವಾಗಿತ್ತು. ಈ ಬಗ್ಗೆ ಉಡುಪಿಯ 3ನೇ ಅಡಿಶನಲ್ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ 2 ಪ್ರತ್ಯೇಕ ದಾವೆ ಹೂಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮ್ಪ್ರಶಾಂತ್ ಎಂ.ಎನ್. ಅವರು 2 ಪ್ರಕರಣದಲ್ಲಿ ಒಟ್ಟು 6,80,000 ರೂ. ಪಾವತಿಸುವಂತೆ, ತಪ್ಪಿದಲ್ಲಿ ತಲಾ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಸಿದ್ದಾರೆ. ದೂರುದಾರರ ಪರ ಟಿ. ವಿಜಯ ಕುಮಾರ್ ಶೆಟ್ಟಿ ವಾದಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ