- Monday 16 Dec 2019
ಮನುಕುಲದ ಕಲ್ಯಾಣಕ್ಕಾಗಿ ಕ್ರಿಸ್ತನ ಬದುಕು ಅರ್ಪಣೆ
Team Udayavani, Dec 20, 2018, 2:55 AM IST
ಉಡುಪಿ: ನಿಜವಾದ ಪ್ರೀತಿ ತ್ಯಾಗದಲ್ಲಿದೆ. ಮನುಕುಲದ ಕಲ್ಯಾಣಕ್ಕಾಗಿ ತನ್ನನ್ನೇ ಅರ್ಪಿಸಿದ ಏಸುಕ್ರಿಸ್ತ ಪ್ರೀತಿಯ ಅರ್ಥ ತ್ಯಾಗವೆಂಬ ಸಂದೇಶ ಸಾರಿದ್ದಾರೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ಹೇಳಿದರು. ಡಿ. 19ರಂದು ಉಡುಪಿಯಲ್ಲಿ ಮಾಧ್ಯಮದವರಿಗಾಗಿ ಆಯೋಜಿಸಲಾಗಿದ್ದ ಕ್ರಿಸ್ಮಸ್ ಸ್ನೇಹಕೂಟದಲ್ಲಿ ಅವರು ಸಂದೇಶ ನೀಡಿದರು. ಶಾಂತಿ ಮತ್ತು ಪ್ರೀತಿ ಏಸು ನೀಡಿದ ಎರಡು ಪ್ರಮುಖ ಸಂದೇಶ. ಪ್ರೀತಿ ಹಂಚುವುದು ಕ್ರಿಸ್ಮಸ್‌ನ ಪ್ರಮುಖ ಧ್ಯೇಯ. ನಾವೆಲ್ಲರೂ ಪ್ರೀತಿ-ಶಾಂತಿಯ ಸಾಧನಗಳಾಗಬೇಕಾಗಿದೆ ಎಂದು ಅವರು ಹೇಳಿದರು.
ಎಸ್‌ಪಿ ಲಕ್ಷ್ಮಣ ಬ.ನಿಂಬರಗಿ ಅವರು ಮಾತನಾಡಿ, ಎಲ್ಲಾ ಧರ್ಮಗಳು ಕೂಡ ಶಾಂತಿಯ ಸಂದೇಶವನ್ನೇ ನೀಡಿವೆ. ಇಂತಹ ಕಾರ್ಯಕ್ರಮಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರು ಮಾತನಾಡಿ, ಏಸುಕ್ರಿಸ್ತ ಸಾರಿದ ದಯೆ, ಮಾನವೀಯತೆ ಮತ್ತು ಕರುಣೆಯ ಸಂದೇಶಗಳು ಇಂದಿಗೂ ಅಗತ್ಯವಾಗಿವೆ ಎಂದು ಹೇಳಿದರು.
ನೀರಿನ ಸಂರಕ್ಷಣೆ, ಜಾಗೃತಿ ನಡೆಸುತ್ತಿರುವ ಜೋಸೆಫ್ರೆ ಬೆಲ್ಲೋ, ಮಣ್ಣಿನ ಕಲಾಕೃತಿಗಳ ರಚನೆಯಲ್ಲಿ ಅಂತಾರಾಷ್ಟ್ರೀಯ ಸಾಧನೆ ಮಾಡಿರುವ ಲಾರೆನ್ಸ್ ಪಿಂಟೋ ಪಲಿಮಾರು ಅವರನ್ನು ಸಮ್ಮಾನಿಸಲಾಯಿತು. ಸಾರ್ವಜನಿಕ ಸಂಪರ್ಕಾಧಿಕಾರಿ ಫಾ| ರಾಯ್ಸನ್ ಫೆರ್ನಾಂಡಿಸ್ ಸ್ವಾಗತಿಸಿದರು. ಫಾ| ಚೇತನ್ ಲೋಬೋ ಕಾರ್ಯಕ್ರಮ ನಿರ್ವಹಿಸಿದರು. ಮೈಕಲ್ ರೋಡ್ರಿಗಸ್ ವಂದಿಸಿದರು.
ಸಾಮಾಜಿಕ ಕಾರ್ಯ
ಉಡುಪಿ ಧಮಪ್ರಾಂತ್ಯದ ವತಿಯಿಂದ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ 50,000ಕ್ಕಿಂತಲೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸುವ ‘ಹಸಿರು ಕರ್ನಾಟಕ’ವನ್ನು ನಡೆಸಲಾಗಿದೆ. ನೀರು ಇಂಗಿಸುವ, ಸರಕಾರಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಕೆಲಸಗಳು ನಡೆದಿವೆ. ಲಯನ್ಸ್ ಕ್ಲಬ್ ಜತೆ ಸೇರಿ 7,000 ಮಂದಿ ಪ್ರಾಥಮಿಕ ಶಾಲಾ ಮಕ್ಕಳ ನೇತ್ರತಪಾಸಣೆ ನಡೆಸಲಾಗಿದೆ. ಪ್ರತಿಯೊಂದು ಧರ್ಮಗಳ ಜತೆ ಉತ್ತಮ ಬಾಂಧವ್ಯ ಬೆಸೆಯುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಸೌಹಾರ್ದ ದೀಪಾವಳಿ, ಈದ್ ಮತ್ತು ಕ್ರಿಸ್ಮಸ್ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಬಿಷಪ್ ಹೇಳಿದರು.
ಈ ವಿಭಾಗದಿಂದ ಇನ್ನಷ್ಟು
-
ತೆಕ್ಕಟ್ಟೆ: ಸಾಂಪ್ರದಾಯಿಕ ಹೊಸಮಠ ಕಂಬಳೋತ್ಸವವು ರವಿವಾರ ಜರಗಿತು. ಕೋಣಗಳಿಗೆ ಹಲಗೆ ಮತ್ತು ಹಗ್ಗ ವಿಭಾಗದ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ಕೆಸರುಗದ್ದೆ ಓಟದ...
-
ಬಜಗೋಳಿ: ಬಜಗೋಳಿ, ಮಾಳ, ನಲ್ಲೂರು, ಮುಡಾರು ಹಾಗೂ ಬಜಗೋಳಿ ಪೇಟೆ ಸುತ್ತಮುತ್ತ ಇಂದು ಸಂಜೆ 3.30ರಿಂದ 6ರವರೆಗೆ ಭಾರೀ ಗಾಳಿ ಮಳೆಯಾದ ವರದಿಯಾಗಿದೆ. ಭಾರೀ ಮೋಡ ಆವರಿಸಿರುವುದರಿಂದ...
-
ಮಣಿಪಾಲ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ಕಂಬಳದ ಕಹಳೆಯದ್ದೇ ಸದ್ದು. ಪ್ರತಿ ಶನಿವಾರ ಒಂದಲ್ಲ ಒಂದು ಕಡೆ ಕಂಬಳ ನಡೆಯುತ್ತಿದೆ. ಅಂತೆಯೇ ಡಿಸೆಂಬರ್ 14 ಮತ್ತು...
-
ಹೆಬ್ರಿ: ಈ ಬಾರಿ ಕಾರ್ಕಳ ಕ್ಷೇತ್ರದ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಮಿಷನ್ -100 ಕಾರ್ಯಕ್ರಮದ ಅಂಗವಾಗಿ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ...
-
ಕುಂದಾಪುರ: ಬೆಳೆಗಳಿಗೆ ವೈಜ್ಞಾನಿಕ ರೀತಿಯಲ್ಲಿ ಲಾಭದಾಯಕ ಬೆಲೆ ನಿಗದಿಪಡಿಸಿ, ಕಟಾವಿಗೆ ಮೊದಲೇ ಬೆಂಬಲ ಬೆಲೆ ಘೋಷಿಸಬೇಕು. ಖರೀದಿ ಕೇಂದ್ರಗಳನ್ನು ತೆರೆಯಬೇಕು...
ಹೊಸ ಸೇರ್ಪಡೆ
-
ಬೆಂಗಳೂರು: ಸರ್ಕಾರಿ ಸೇವೆಗಳು ಜನ ಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ಆರಂಭಿಸಿದ್ದ ಸೇವಾಸಿಂಧು ಯೋಜನೆಯಡಿ ಲಕ್ಷಾಂತರ ಅರ್ಜಿಗಳು ವಿಲೇವಾರಿಯಾಗದೇ...
-
ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ವಿಧಾನಸಭೆ ಹಾಗೂ ಲೋಕಸಭೆ ಚುನಾ ವಣೆ ಫಲಿತಾಂಶ ಬಂದ ನಂತರ ಇವಿಎಂ ದುರ್ಬಳಕೆ ಆರೋಪ ಕೇಳಿ ಬಂದಿತ್ತು. ರಾಜ್ಯದಲ್ಲಿ ಇತ್ತೀಚೆಗೆ...
-
ಬೆಳಗಾವಿ/ಮಂಗಳೂರು/ದಾವಣಗೆರೆ/ದೇವನಹಳ್ಳಿ: ಕೇಂದ್ರ ಸರ್ಕಾರದ ನಿರ್ದೇಶನದಂತೆ ಭಾನುವಾರದಿಂದ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಟೋಲ್ನಲ್ಲಿ 10 ಲೇನ್ಗಳ ಪೈಕಿ...
-
ಹುಬ್ಬಳ್ಳಿ: ವಿಶ್ವಕ್ಕೆ ಅತ್ಯುತ್ತಮ ಯೋಗ ತರಬೇತುದಾರರನ್ನು ರೂಪಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಆರಂಭವಾಗಿರುವ ಅಮೆರಿಕದ ಫ್ಲೋರಿಡಾದ ಯೋಗ ವಿಶ್ವವಿದ್ಯಾಲಯ...
-
ಬೆಂಗಳೂರು: ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದವರು ಎದೆಗುಂದುವ ಅಗತ್ಯವಿಲ್ಲ. ಅವರ ಬದುಕನ್ನು ಪುನಃ ಕಟ್ಟಿಕೊಡಲು ಸರ್ಕಾರ ಅವರೊಂದಿಗಿದೆ ಎಂದು ಮುಖ್ಯಮಂತ್ರಿ...