ವ್ಯಾಸರಾಜ ಮಠಾಧೀಶರಿಗೆ ಅಭಿನಂದನೆ

Team Udayavani, Jul 18, 2017, 3:35 AM IST

170717uk2.gif

ಉಡುಪಿ: ಶ್ರೀ ವ್ಯಾಸರಾಜ ಮಠದ ನೂತನ ಪೀಠಾಧೀಶರಾದ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದರನ್ನು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಅಭಿನಂದಿಸಿದರು. 

70 ವರ್ಷಗಳ ಹಿಂದಿನ ತಿರುವು
1957ರಲ್ಲಿ ತಾನು ಬಾಲಕನಾಗಿದ್ದಾಗ ಬಾರಕೂರು ಭಂಡಾರಕೇರಿ ಮಠಕ್ಕೆ ಶಾಸ್ತ್ರ, ಸಂಸ್ಕೃತ ಪರೀಕ್ಷೆಗೆ ಬಂದಿದ್ದೆ.
ಆಗಲೇ ಶ್ರೀವಿದ್ಯಾಮಾನ್ಯತೀರ್ಥರು, ಶ್ರೀವಿಶ್ವೇಶತೀರ್ಥರು ವಿದ್ಯಾಭ್ಯಾಸಕ್ಕೆ ಕರೆದಿದ್ದರು. ಒಂದು ವರ್ಷದ ಬಳಿಕ ಮೈಸೂರಿನಲ್ಲಿ ತಂದೆತಾಯಿ ಜತೆಗಿದ್ದಾಗ ಮನೆಗೆ ಪೇಜಾವರ ಶ್ರೀಗಳು ಬಂದು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಸೇರಲು ಹೇಳಿದರು. ಅದು ತನ್ನ ಜೀವನದ ದೊಡ್ಡ ತಿರುವು. ಆಗ ವಿದ್ಯಾಭ್ಯಾಸಕ್ಕೆ ಸೇರಿದ್ದರಿಂದಲೇ ಮಾನ ಸಮ್ಮಾನಗಳು ದೊರಕುತ್ತಿವೆ. ಈಗ ಅವರದೇ ಐದನೆಯ ಪರ್ಯಾಯದಲ್ಲಿ ವ್ಯಾಸರಾಜ ಮಠಾಧೀಶರಾಗಿ ಬರುವ ಅವಕಾಶ ದೊರಕಿದ್ದು ಸುಯೋಗ ಎಂದು ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದರು ತಿಳಿಸಿದರು. 

ಮಿಥಿಲೆಯಲ್ಲಿ ಅಂದು ದೊಡ್ಡ ಸುದ್ದಿ…
ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪ್ರಾಧ್ಯಾಪಕರಾಗಿದ್ದಾಗ ಮಿಥಿಲೆಯ ಸಂಸ್ಕೃತ ಶಾಸ್ತ್ರ ಪರೀಕ್ಷೆಗೆ ಪ್ರಹ್ಲಾದಾಚಾರ್ಯರ (ಈಗ ವಿದ್ಯಾಶ್ರೀಶತೀರ್ಥರು) ಜತೆ ನಾನು ಹೋಗಿದ್ದೆ. ಹೋಗುವಾಗ ಆಚಾರಕ್ಕೆ ಅನುಗುಣವಾಗಿ ಅಡುಗೆ ಮಾಡಲು ಪಾತ್ರೆಗಳನ್ನು ಕೊಂಡೊಯ್ದಿದ್ದೆವು. ಅದು ವಿಮಾನ ನಿಲ್ದಾಣದಲ್ಲಿ ಕೈತಪ್ಪಿ ಹೋಯಿತು. ಮಿಥಿಲೆಯಲ್ಲಿದ್ದ ವ್ಯವಸ್ಥೆ ಸರಿ ಇರಲಿಲ್ಲ. ಮತ್ತೆ ಮಾರುಕಟ್ಟೆಗೆ ಹೋಗಿ ಹೊಸ ಪಾತ್ರೆಗಳನ್ನು ಖರೀದಿಸಿ ಬಂದು ಮತ್ತೆ ಸ್ವತಃ ಅಡುಗೆ ಮಾಡಿ ನೈವೇದ್ಯ ಮಾಡಿ ಊಟ ಮಾಡಿದೆವು. ಪಂಚತಾರಾ ಹೊಟೇಲಿನಲ್ಲಿದ್ದರೂ ಇಂತಹ ಆಚಾರನಿಷ್ಠರಿದ್ದಾರೆಂದು ಪತ್ರಿಕೆಗಳು ವರದಿ ಮಾಡಿದ್ದವು ಎಂಬುದನ್ನು ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ಎ.ಹರಿದಾಸ ಭಟ್‌ ಹೇಳಿದರು. 

ತಮ್ಮ ಎರಡನೆಯ ಪರ್ಯಾಯದಲ್ಲಿ ಗುರು ಶ್ರೀ ವಿದ್ಯಾಮಾನ್ಯತೀರ್ಥರಿಗೆ ಶ್ರೀಕೃಷ್ಣಪೂಜೆ ಯೋಗ ಲಭಿಸಿದರೆ ಈಗ ನಮ್ಮಲ್ಲಿ ಓದಿದ ಪ್ರಹ್ಲಾದಾಚಾರ್ಯರಿಗೆ ವ್ಯಾಸರಾಜ ಮಠಾಧಿಪತಿತ್ವ ದೊರಕಿದೆ ಎಂದು ಪೇಜಾವರ ಶ್ರೀಗಳು ಹರ್ಷ ವ್ಯಕ್ತಪಡಿಸಿದರು. ಶ್ರೀ ವಿಶ್ವಪ್ರಸನ್ನತೀರ್ಥರು ಆಶೀರ್ವಚನ ನೀಡಿದರು. ಬ್ರಹ್ಮಣ್ಯತೀರ್ಥಾಚಾರ್ಯ ಶುಭಕೋರಿದರು. ಗುರುಮೂರ್ತಿ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. 

ಪೇಜಾವರ ಶ್ರೀಗಳ ಪೂರ್ಣಪ್ರಜ್ಞ ವಿದ್ಯಾಪೀಠದ ಮೊದಲ ತಂಡದ ಸುಧಾ ವಿದ್ಯಾರ್ಥಿಯಾದ ಪ್ರಹ್ಲಾದಾಚಾರ್ಯರು, ಬಳಿಕ ಅಲ್ಲಿಯೇ ಪ್ರಾಧ್ಯಾಪಕರಾಗಿ, ತಿರುಪತಿ ಸಂಸ್ಕೃತ ವಿ.ವಿ. ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು. ಈಗ ಪೇಜಾವರ ಶ್ರೀಗಳ ಪಂಚಮ ಪರ್ಯಾಯದಲ್ಲಿ ಮೊದಲ ಸಪೊ¤àತ್ಸವವನ್ನು ಪ್ರಹ್ಲಾದಾ ಚಾರ್ಯರು ನೀಡಿದರು. ಈಗ ವ್ಯಾಸರಾಜ ಮಠಾಧೀಶರಾಗಿ ಆಗಮಿಸಿದರು. 

ಟಾಪ್ ನ್ಯೂಸ್

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.