“ಶಿಕ್ಷಕರ, ಪದವೀಧರರ ಸಮಸ್ಯೆಗಳಿಗೆ ಕಾಂಗ್ರೆಸ್‌ ಸ್ಪಂದನೆ’; ಸಲೀಂ ಅಹಮದ್‌

Team Udayavani, May 28, 2024, 12:23 AM IST

“ಶಿಕ್ಷಕರ, ಪದವೀಧರರ ಸಮಸ್ಯೆಗಳಿಗೆ ಕಾಂಗ್ರೆಸ್‌ ಸ್ಪಂದನೆ’; ಸಲೀಂ ಅಹಮದ್‌

ಉಡುಪಿ: ನೈಋತ್ಯ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವು ಖಚಿತ. ಜನತೆ ವಿಧಾನಸಭೆಯಲ್ಲಿ ಬದಲಾ ವಣೆ ಬಯಸಿದಂತೆ ಪದವೀಧರ, ಶಿಕ್ಷಕರ ಕ್ಷೇತ್ರ ಗಳಲ್ಲಿಯೂ ಬದಲಾ ವಣೆ ಬಯಸಿದ್ದಾರೆ. ಅಭಿವೃದ್ಧಿ ಮೂಲಕ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸಲಾಗುವುದು ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಸಲೀಂ ಅಹಮದ್‌ ಹೇಳಿದರು.

ಕಾಂಗ್ರೆಸ್‌ ಭವನದಲ್ಲಿ ನಡೆದ ವಿಧಾನ ಪರಿಷತ್‌ ನೈಋತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣ ಪೂರ್ವ ತಯಾರಿ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್‌ ಸೊರಕೆಮಾತನಾಡಿ, ನೈಋತ್ಯ ಶಿಕ್ಷಣ ಹಾಗೂ ಪದವೀಧರ ಕ್ಷೇತ್ರವು ಬಹಳಷ್ಟು ಶಿಕ್ಷಣದಲ್ಲಿ ಮುಂದು ವರಿದ ಕ್ಷೇತ್ರವಾಗಿದೆ. ಹಾಗೆಯೇ ಅಭಿವೃದ್ಧಿಯಲ್ಲಿಯೂ ಮುಂಚೂ ಣಿಯಲ್ಲಿದೆ. ಕಾಂಗ್ರೆಸ್‌ ಪಕ್ಷ ಎಲ್ಲರ ಹಿತ ಕಾಪಾಡುವಲ್ಲಿ ಕಂಕಣ ಬದ್ಧ ವಾಗಿದೆ. ನಮ್ಮ ಸರಕಾರ ಒಂದು ವರ್ಷ ಪೂರೈಸಿದ್ದು, ಈ ಅವಧಿಯ ಜನಪರ ಕೆಲಸಗಳನ್ನು ಮುಂದಿಟ್ಟು ಗೆಲುವು ಸಾಧಿಸಬಹುದು. ಜನರು ಕೋಮು ಭಾವನೆಯನ್ನು ಸ್ವೀಕರಿಸುವುದಿಲ್ಲ ಎನ್ನುವುದು ಕಳೆದ ವಿಧಾನಸಭಾ ಚುನಾವಣೆ ಫ‌ಲಿತಾಂಶದಿಂದ ಅರಿವಿಗೆ ಬರುತ್ತದೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಪ್ರಸ್ತಾವನೆ ಗೈದರು. ಕೆಪಿಸಿಸಿ ಮುಖಂಡ ಎಂ.ಎ. ಗಫ‌ೂರ್‌, ಜಿಲ್ಲಾ ಕಾರ್ಯಾಧ್ಯಕ್ಷರಾದ ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಪ್ರಸಾದ್‌ ರಾಜ್‌ ಕಾಂಚನ್‌, ಶಹೀದ್‌, ದಿನೇಶ್‌ ಹೆಗ್ಡೆ ಮೊಳಹಳ್ಳಿ, ಕೃಷ್ಣಪ್ಪ ಸುಳ್ಯ, ಡಾ| ಸುಧೀರ್‌ ಹೆಗ್ಡೆ, ನೀರೆ ಕೃಷ್ಣ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಶಂಕರ್‌ ಕುಂದರ್‌ ಮೊದಲಾದವರು ಭಾಗವಹಿಸಿದ್ದರು. ವಕ್ತಾರ ಭಾಸ್ಕರ ರಾವ್‌ ಕಿದಿಯೂರು ನಿರ್ವಹಿಸಿ, ಮುಖಂಡ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ವಂದಿಸಿದರು.

ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿ: ಆಯನೂರು
ಪುತ್ತೂರು: ವಿಧಾನಸಭೆಯಲ್ಲಿ ಮಂಜೂರಾದ ಬಿಲ್‌ ಕಾರ್ಯರೂಪಕ್ಕೆ ಬರಬೇಕಾ ದರೆ ವಿಧಾನ ಪರಿಷತ್‌ನಲ್ಲಿ ಮಂಜೂ ರಾತಿ ಪಡೆ ಯಬೇಕು. ಆದರೆ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತದ ಕೊರತೆ ಇರುವುದರಿಂದ ಬಿಲ್‌ ಮಂಜೂರಾಗುತ್ತಿಲ್ಲ. ಹಾಗಾಗಿ ಕಾಂಗ್ರೆಸ್‌ಗೆ ವಿಧಾನ ಪರಿಷತ್‌ನಲ್ಲಿ ಬಹುಮತ ದೊರೆಯಲು ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಯನೂರು ಮಂಜುನಾಥ ಹೇಳಿದರು.

ಪುತ್ತೂರಿನ ಕಾಂಗ್ರೆಸ್‌ ಚುನಾವಣ ಕಚೇರಿಯಲ್ಲಿ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಪರ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕ ಅಶೋಕ್‌ ಕುಮಾರ್‌ ರೈ, ಬ್ಲಾಕ್‌ ಅಧ್ಯಕ್ಷ ಎಂ.ಬಿ. ವಿಶ್ವನಾಥ್‌ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್‌ ಬ್ಲಾಕ್‌ ಅಧ್ಯಕ್ಷ ಡಾ. ರಾಜಾರಾಂ, ಚುನಾವಣ ಉಸ್ತುವಾರಿ ಉಡುಪಿಯ ಗಫೂರ್‌ ಸಾಹೇಬ್‌ ಮಾಹಿತಿ ನೀಡಿದರು. ನಾಯಕರಾದ ಕಾವು ಹೇಮನಾಥ ಶೆಟ್ಟಿ, ಎಂ.ಎಸ್‌. ಮಹಮ್ಮದ್‌, ಮುಸ್ತಫಾ ಸುಳ್ಯ, ವೆಂಕಪ್ಪ ಗೌಡ ಸುಳ್ಯ, ಎಚ್‌ ಮಹಮ್ಮದಾಲಿ ಮೊದಲಾದವರಿದ್ದರು.

ಟಾಪ್ ನ್ಯೂಸ್

ಮುಂದುವರಿದ ಮಳೆಯಬ್ಬರ; ಹಲವೆಡೆ ರಸ್ತೆ ಸಂಪರ್ಕ ಕಡಿತ, ಕುಸಿದ ಸೇತುವೆ

Udupi ಮುಂದುವರಿದ ಮಳೆಯಬ್ಬರ; ಹಲವೆಡೆ ರಸ್ತೆ ಸಂಪರ್ಕ ಕಡಿತ, ಕುಸಿದ ಸೇತುವೆ

Kerala:ಬಂಕ್‌ ನಲ್ಲಿ ಪೆಟ್ರೋಲ್‌ ಹಣ ಕೊಡದೇ ಪರಾರಿಯಾದ ಪೊಲೀಸ್…ಮುಂದೇನಾಯ್ತು ನೋಡಿ

Kerala:ಬಂಕ್‌ ನಲ್ಲಿ ಪೆಟ್ರೋಲ್‌ ಹಣ ಕೊಡದೇ ಪರಾರಿಯಾದ ಪೊಲೀಸ್…ಮುಂದೇನಾಯ್ತು ನೋಡಿ

Vijayapura; ಬಿಜೆಪಿ ನನ್ನ ಹಿರಿತನ, ಅನುಭವ ಬಳಸಿಕೊಳ್ಳಲಿಲ್ಲ: ಸಂಸದ ರಮೇಶ ಜಿಗಜಿಣಗಿ

Vijayapura; ಬಿಜೆಪಿ ನನ್ನ ಹಿರಿತನ, ಅನುಭವ ಬಳಸಿಕೊಳ್ಳಲಿಲ್ಲ: ಸಂಸದ ರಮೇಶ ಜಿಗಜಿಣಗಿ

4-panaji

Panaji: ಭಾರೀ ಗಾಳಿ-ಮಳೆ; ಸಾರ್ವಜನಿಕರು ಎಚ್ಚರಿಕೆಯಿಂದಿರಲು ಹವಾಮಾನ ಇಲಾಖೆ ಸೂಚಿಸಿದೆ

ʼBad Newzʼಗೆ ʼಯುಎʼ ಸರ್ಟಿಫಿಕೇಟ್;‌ ವಿಕ್ಕಿ – ತೃಪ್ತಿ ಕಿಸ್ಸಿಂಗ್‌ ಸೀನ್ಸ್‌ಗೆ ಸೆನ್ಸಾರ್

ʼBad Newzʼ ಗೆ ʼಯುಎʼ ಸರ್ಟಿಫಿಕೇಟ್;‌ ವಿಕ್ಕಿ – ತೃಪ್ತಿ ಕಿಸ್ಸಿಂಗ್‌ ಸೀನ್ಸ್‌ಗೆ ಸೆನ್ಸಾರ್

2-ankola

Ankola: ನದಿಯಲ್ಲಿ ತೇಲಿ ಹೋದ ಗ್ಯಾಸ್ ಟ್ಯಾಂಕರ್; ಸೋರಿಕೆ ಸಾಧ್ಯತೆ: ಸ್ಥಳೀಯರಲ್ಲಿ ಆತಂಕ

ಭಾರಿ ಮಳೆಯಿಂದ ಆಲಮಟ್ಟಿ ಶಾಸ್ತ್ರೀ ಸಾಗರದ ಒಳಹರಿವು ಹೆಚ್ಚಳ: ಕೆಳಭಾಗದ ಜನರಿಗೆ ಎಚ್ಚರಿಕೆ

ಭಾರಿ ಮಳೆಯಿಂದ ಆಲಮಟ್ಟಿ ಶಾಸ್ತ್ರೀ ಸಾಗರದ ಒಳಹರಿವು ಹೆಚ್ಚಳ: ಕೆಳಭಾಗದ ಜನರಿಗೆ ಎಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-udupi-1

Udupi ಬೆಂಕಿ ಅವಘಡ ಪ್ರಕರಣ: ಹೊಟೇಲ್ ಉದ್ಯಮಿಯ ಪತ್ನಿಯೂ ಸಾವು

Manipal: ಫ್ಲ್ಯಾಟ್ ನಲ್ಲಿ ಸಿಲುಕಿದ್ದ ವಿದ್ಯಾರ್ಥಿನಿಯ ರಕ್ಷಣೆ…

Manipal: ಫ್ಲ್ಯಾಟ್ ನಲ್ಲಿ ಸಿಲುಕಿದ್ದ ವಿದ್ಯಾರ್ಥಿನಿಯ ರಕ್ಷಣೆ…

Shirva: ಹದಗೆಟ್ಟ ರಸ್ತೆಯಿಂದ ಬೈಕ್ ಅಪಘಾತ… ಯುವಕನಿಗೆ ಗಾಯ

Shirva: ಹದಗೆಟ್ಟ ರಸ್ತೆಯಿಂದ ಬೈಕ್ ಅಪಘಾತ… ಯುವಕನಿಗೆ ಗಾಯ

Udupi: ನಿಂತಿದ್ದ ಬಸ್ಸಿಗೆ ಹಿಂದಿನಿಂದ ಸ್ಕೂಟರ್ ಢಿಕ್ಕಿ: ಸವಾರ ಗಂಭೀರ

Udupi: ನಿಂತಿದ್ದ ಬಸ್ಸಿಗೆ ಹಿಂದಿನಿಂದ ಸ್ಕೂಟರ್ ಢಿಕ್ಕಿ: ಸವಾರ ಗಂಭೀರ

2

Heavy Rain: ಭಾರಿ ಮಳೆಗೆ ರಸ್ತೆ ಮೇಲೆ ಹರಿದ ಸೀತಾನದಿ; ವಾಹನ ಸಂಚಾರ ಬಂದ್

MUST WATCH

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

ಹೊಸ ಸೇರ್ಪಡೆ

ಮುಂದುವರಿದ ಮಳೆಯಬ್ಬರ; ಹಲವೆಡೆ ರಸ್ತೆ ಸಂಪರ್ಕ ಕಡಿತ, ಕುಸಿದ ಸೇತುವೆ

Udupi ಮುಂದುವರಿದ ಮಳೆಯಬ್ಬರ; ಹಲವೆಡೆ ರಸ್ತೆ ಸಂಪರ್ಕ ಕಡಿತ, ಕುಸಿದ ಸೇತುವೆ

Heavy Rain ಕೋಟೇಶ್ವರ: ಶ್ರೀ ಕೋಟಿಲಿಂಗೇಶ್ವರ ದೇಗುಲ ಜಲಾವೃತ

Heavy Rain ಕೋಟೇಶ್ವರ: ಶ್ರೀ ಕೋಟಿಲಿಂಗೇಶ್ವರ ದೇಗುಲ ಜಲಾವೃತ

Kerala:ಬಂಕ್‌ ನಲ್ಲಿ ಪೆಟ್ರೋಲ್‌ ಹಣ ಕೊಡದೇ ಪರಾರಿಯಾದ ಪೊಲೀಸ್…ಮುಂದೇನಾಯ್ತು ನೋಡಿ

Kerala:ಬಂಕ್‌ ನಲ್ಲಿ ಪೆಟ್ರೋಲ್‌ ಹಣ ಕೊಡದೇ ಪರಾರಿಯಾದ ಪೊಲೀಸ್…ಮುಂದೇನಾಯ್ತು ನೋಡಿ

Vijayapura; ಬಿಜೆಪಿ ನನ್ನ ಹಿರಿತನ, ಅನುಭವ ಬಳಸಿಕೊಳ್ಳಲಿಲ್ಲ: ಸಂಸದ ರಮೇಶ ಜಿಗಜಿಣಗಿ

Vijayapura; ಬಿಜೆಪಿ ನನ್ನ ಹಿರಿತನ, ಅನುಭವ ಬಳಸಿಕೊಳ್ಳಲಿಲ್ಲ: ಸಂಸದ ರಮೇಶ ಜಿಗಜಿಣಗಿ

4-panaji

Panaji: ಭಾರೀ ಗಾಳಿ-ಮಳೆ; ಸಾರ್ವಜನಿಕರು ಎಚ್ಚರಿಕೆಯಿಂದಿರಲು ಹವಾಮಾನ ಇಲಾಖೆ ಸೂಚಿಸಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.