ಮುಂದುವರಿದ ಡ್ರೆಜ್ಜಿಂಗ್‌, ಟ್ಯಾಂಕರ್‌ ನೀರು ಪೂರೈಕೆ

Team Udayavani, May 17, 2019, 6:10 AM IST

ಉಡುಪಿ: ಸ್ವರ್ಣಾ ನದಿ ಪಾತ್ರದ ಮಾಣೈ ಹಳ್ಳದಲ್ಲಿ ಸಂಗ್ರಹವಾಗಿ ರುವ ನೀರನ್ನು ಭಂಡಾರಿಬೆಟ್ಟು ಹಳ್ಳಕ್ಕೆ ಡ್ರೆಜ್ಜಿಂಗ್‌ ಮಾಡಿ ಅಲ್ಲಿಂದ ಬಜೆ ಅಣೆಕಟ್ಟೆಯ ಜಾಕ್‌ವೆಲ್‌ಗೆ ಪೂರೈಸುವ ಕಾರ್ಯ ನಡೆಯುತ್ತಿದೆ. ಜೂನ್‌ ಮೊದಲ ವಾರ ಅಥವಾ ಮಳೆಗಾಲ ಆರಂಭವಾಗು ವವರೆಗೂ ಸ್ವರ್ಣಾ ಹಾಗೂ ಬಜೆಯಲ್ಲಿ ಲಭ್ಯವಿರುವ ನೀರನ್ನು ರೇಷನಿಂಗ್‌ ಮೂಲಕ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.

35 ವಾರ್ಡ್‌ಗಳಿಗೆ ತಲಾ ಒಬ್ಬರಂತೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಆಯಾಯ ವಾರ್ಡ್‌ನ ನೀರಿನ ಸಮಸ್ಯೆ ಬಗೆಹರಿಸುವತ್ತ ಗಮನಹರಿಸುತ್ತಿದ್ದಾರೆ. ಸ್ವರ್ಣಾ ನದಿಯಲ್ಲಿ ದೊಡ್ಡ ಗುಂಡಿಗಳಿಂದ ಪಂಪ್‌ಗ್ಳ ಮೂಲಕ ನೀರು ಹಾಯಿಸುವ ಕಾರ್ಯ ಮುಂದುವರಿದಿದೆ.

ನೀರು ವಿತರಣೆ ಮುಂದುವರಿಕೆ
ನಗರಸಭೆಯ ಸದಸ್ಯರು, ಶಾಸಕರು, ಸಂಘ-ಸಂಸ್ಥೆಗಳು, ಜಿಲ್ಲಾ ನಾಗರಿಕ ಸಮಿತಿ ಸೇವಾ ಟ್ರಸ್ಟ್‌ ಮುಖಾಂತರ ಟ್ಯಾಂಕರ್‌ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ನಡೆಯುತ್ತಿದೆ.

ಹೂಳು ತೆಗೆಯುವ ಪ್ರಕ್ರಿಯೆ ನಿರಂತರ
ಬಜೆ ಅಣೆಕಟ್ಟಿನಲ್ಲಿ ಹೂಳು ತೆಗೆಯುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಒಂದು ಹಿಟಾಚಿ ಮತ್ತು 2 ಟಿಪ್ಪರ್‌ಗಳು ಜಾಕ್‌ವೆಲ್‌ ಆಸುಪಾಸಿನಲ್ಲಿ ನಿರಂತರವಾಗಿ ಹೂಳು ತೆಗೆಯುವ ಕೆಲಸ ನಡೆಯುತ್ತಿವೆೆ. ನಗರಸಭೆಯ ಎಂಜಿನಿಯರ್‌ಗಳು ಕೂಡ ವಾರದಿಂದ ನಿರಂತರವಾಗಿ ಪಂಪಿಂಗ್‌ ನಡೆಸುವ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿ ಕಾರ್ಯಾಚರಣೆ ಶೀಘ್ರಗತಿಯಲ್ಲಿ ನಡೆಯುವಂತೆ ನೋಡಿಕೊಳ್ಳುತ್ತಿ¨ªಾರೆ.

ಹಗಲು ರಾತ್ರಿ ಕೆಲಸ
ಕಳೆದೊಂದು ವಾರದಿಂದ ಚುರುಕಿನ ಕಾರ್ಯಾಚರಣೆಗಳು ಪರಿಣಾಮಕಾರಿ ಯಾಗಿ ನಡೆಯುತ್ತಿದ್ದು, ಜಿÇÉಾಧಿಕಾರಿ ಯಿಂದ ಹಿಡಿದು ಇಡೀ ಅಧಿಕಾರಿ ವರ್ಗ ಸಕ್ರಿಯವಾಗಿ ರಾತ್ರಿ ಹಗಲು ಕೆಲಸ ಮಾಡುತ್ತಿವೆ.

ಪಂಪಿಂಗ್‌ ಮುಂದುವರಿಕೆ
ಪ್ರಸ್ತುತ 9 ಪಂಪ್‌ಗ್ಳ ಮೂಲಕ ನೀರೆತ್ತುವ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ 4 ಪಂಪ್‌ಗ್ಳನ್ನು ಶಾಸಕ ಕೆ. ರಘುಪತಿ ಭಟ್‌ ಅವರು ಸ್ವಂತ ಖರ್ಚಿನಿಂದ ನಿರ್ವಹಿಸುತ್ತಿದ್ದಾರೆ. ಉಳಿದ 5 ಪಂಪ್‌ಗ್ಳನ್ನು ಜಿಲ್ಲಾಡಳಿತದ ಮೂಲಕ ನೀಡಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕೋಲಾರ: ಲೋಕಸಭಾ ಕ್ಷೇತ್ರದ ನೂತನ ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮುಕ್ತ ಮಾಡಿಸಿ ಬಿಜೆಪಿ...

  • ಬ್ಯಾಡಗಿ: ವೀರಯೋಧ ಶಿವಲಿಂಗೇಶ ಪಾಟೀಲ ನಿಧನದ ಸುದ್ದಿ ಗುಂಡೇನಹಳ್ಳಿ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದ್ದು, ಇದೀಗ ಸ್ಮಶಾನ ಮೌನ ಆವರಿಸಿದೆ. ಯೋಧ ಶಿವಲಿಂಗೇಶ...

  • ಹಾವೇರಿ: ಮಳೆ ಆರಂಭಕ್ಕೂ ಮುನ್ನವೇ ಡೆಂಘೀ ಜ್ವರ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಆರೋಗ್ಯ, ಶಿಕ್ಷಣ, ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ...

  • ಸಕಲೇಶಪುರ: ತಾಲೂಕಿನಲ್ಲಿ ಅನುಷ್ಠಾನಗೊಳಿಸ ಲಾಗುತ್ತಿರುವ ಎತ್ತಿನಹೊಳೆ ಸಮಗ್ರ ನೀರಾವರಿ ಯೋಜನೆಯಿಂದ ಮಲೆನಾಡಿನ ಪರಿಸರ ಹದಗೆಡಲು ಕಾರಣವಾಗಿದೆ ಎಂಬ ಮಾತುಗಳು...

  • ಹಾಸನ: ನಗರದ ಎಪಿಎಂಸಿ ಪ್ರಾಂಗಣದಲ್ಲಿ ಬಿತ್ತನೆ ಆಲೂಗಡ್ಡೆ ವ್ಯಾಪಾರ ಆರಂಭವಾಗಿ ಎರಡು ವಾರ ಗಳಾಗುತ್ತಾ ಬಂದರೂ ಆಲೂಗಡ್ಡೆ ಖರೀದಿಗೆ ರೈತರಿಂದ ನೀರಸ ಪ್ರತಿಕ್ರಿಯೆ...

  • ನರೇಗಲ್ಲ: ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಸಂಚಾರಿ ಸುರಕ್ಷಾ ಸಪ್ತಾಹ ಅಡಿಯಲ್ಲಿ ರವಿವಾರ ವಿಶೇಷ ಕಾರ್ಯಾಚರಣೆ ನಡೆಸಿ ಆಟೋಗಳ ದಾಖಲೆಗಳನ್ನು ನರಗುಂದ ಡಿವೈಎಸ್‌ಪಿ...