Udayavni Special

ಇಸ್ರೇಲ್‌ನಿಂದ ಮರಳಿದ ಕಾರ್ಕಳ ವ್ಯಕ್ತಿಗೆ ಕೊರೊನಾ ಶಂಕೆ

Team Udayavani, Mar 6, 2020, 5:09 AM IST

ಇಸ್ರೇಲ್‌ನಿಂದ ಮರಳಿದ ಕಾರ್ಕಳ ವ್ಯಕ್ತಿಗೆ ಕೊರೊನಾ ಶಂಕೆ

ಉಡುಪಿ: ಕಾರ್ಕಳ ತಾಲೂಕಿನ ಮುನಿಯಾಲಿನ ವ್ಯಕ್ತಿಯೊಬ್ಬರು ಶಂಕಿತ ಕೊರೋನಾ ವೈರಸ್‌ ಪರೀಕ್ಷೆಗೆ ಮಾ. 4ರಂದು ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು, ವ್ಯಕ್ತಿಯ ಗಂಟಲಿನ ದ್ರವ (ಥ್ರೋಟ್‌ ಸ್ವಾಬ್‌)ವನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ ಚಂದ್ರ ಸೂಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇಸ್ರೇಲ್‌ ಪ್ರವಾಸ ಮುಗಿಸಿ ಮರಳಿರುವ ಮುನಿಯಾಲಿನ 75 ವರ್ಷದ ವ್ಯಕ್ತಿ ಕೆಮ್ಮು ಹಾಗೂ ಶೀತದ ತೊಂದರೆಯಿಂದ ಬಳಲುತ್ತಿರುವ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಅವರ ಮನೆಗೆ ಭೇಟಿ ನೀಡಿ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಬೆಂಗಳೂರಿನಿಂದ ವರದಿ ಬಂದ ಬಳಿಕ ಮುಂದಿನ ಚಿಕಿತ್ಸೆ ಕುರಿತು ಆಲೋಚಿಸಲಾಗುವುದು ಎಂದರು.

ವೈರಲ್‌ ಜ್ವರದ ಲಕ್ಷಣ ಹಾಗೂ ಕೊರೊನಾ ಲಕ್ಷಣಗಳಿಗೆ ಸಾಮ್ಯ ಇರುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಇರಿಸಲಾಗಿದೆ. ದಂಪತಿ ಇಸ್ರೇಲಿನಲ್ಲಿ ಉದ್ಯೋಗದಲ್ಲಿರುವ ಪುತ್ರನ ಬಳಿ ತೆರಳಿ ಮಾ. 4ರಂದು ಮರಳಿದ್ದರು. ಕೆಮ್ಮು ಹಾಗೂ ನೆಗಡಿ ಇದ್ದು ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯದಿಂದ ಇದ್ದಾರೆ ಎಂದು ಪತ್ನಿ ಮಾಹಿತಿ ನೀಡಿದರು.

ವದಂತಿಗೆ ಗಮನ ಬೇಡ
ಕೊರೊನಾ ವೈರಸ್‌ನಿಂದ ಹರಡುವ ರೋಗದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಸಾರ್ವಜನಿಕರು ವದಂತಿಗೆ ಗಮನ ನೀಡಬೇಡಿ. ಯಾವುದೇ ಆತಂಕ, ಗಾಬರಿಪಡುವ ಅಗತ್ಯವಿಲ್ಲ. ಆದರೆ ರೋಗದ ಲಕ್ಷಣಗಳನ್ನು ತಿಳಿದುಕೊಂಡು ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ನೀಡಿದರು.

ವಿಶೇಷ ಕೊಠಡಿ
ಕೊರೊನಾ ವೈರಸ್‌ ಶಂಕಿತರಿಗೆ ಚಿಕಿತ್ಸೆ ನೀಡಲು ಉಡುಪಿ ಜಿಲ್ಲಾಸ್ಪತ್ರೆ ಯಲ್ಲಿ 5 ಬೆಡ್‌ಗಳ ಕೊಠಡಿ, ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 3 ಐಸೋಲೇಷನ್‌ ಕೊಠಡಿಯನ್ನು ಕಾದಿರಿಸಲಾಗಿದೆ. ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಬಾಧಿತರ ಚಿಕಿತ್ಸೆಗೆ ಅಗತ್ಯವಿರುವ ಕೊಠಡಿಗಳನ್ನು ಕಾದಿರಿಸುವಂತೆ ಆದೇಶ ನೀಡಲಾಗಿದೆ ಎಂದರು.

ಶಂಕಿತರಿಗೆ ಸೂಚನೆ
ಜಿಲ್ಲಾ ಸರ್ವೇಕ್ಷಣಾ ಘಟಕದ ಪ್ರಯೋಗ ಶಾಲೆಯಿಂ ದಲೇ ಶಂಕಿತ ರೋಗಿಗಳ ಗಂಟಲು ದ್ರವ ಮಾದರಿ ಸಂಗ್ರಹಿಸಿ ಬೆಂಗಳೂರಿಗೆ ಕಳುಹಿಸಲಾಗುತ್ತದೆ. ಆದ್ದರಿಂದ ಶಂಕಿತ ರೋಗಿಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡುವಂತೆ ಮನವಿ ಮಾಡಿದರು.

ತುರ್ತು ಕಾರ್ಯಪಡೆ ರಚನೆ
ರಾಜ್ಯ ಆರೋಗ್ಯ ಇಲಾಖೆಯ ನಿರ್ದೇಶನ ದಂತೆ ಜಿಲ್ಲೆಯಲ್ಲಿ ಈಗಾಗಲೇ ತುರ್ತು ಕಾರ್ಯಪಡೆ ರಚಿಸಲು ಕ್ರಮ ಕೈಗೊಳ್ಳಲಾಗಿದೆ. ಅರೆ ವೈದ್ಯಕೀಯ ಸಿಬಂದಿ ಸೇರಿದಂತೆ ಪಿಡಿಒಗಳಿಗೆ ಮತ್ತೆ ತರಬೇತಿ ನೀಡಲಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಔಷಧ ಮತ್ತು ಮಾಸ್ಕ್ ಸೇರಿದಂತೆ ಎಲ್ಲ ವೈಯಕ್ತಿಕ ರಕ್ಷಣಾ ಸಾಮಗ್ರಿಗಳ ದಾಸ್ತಾನು ಇದೆ ಎಂದರು.

ಪ್ರವಾಸಿ ಸ್ಥಳದಲ್ಲಿ ಹೋರ್ಡಿಂಗ್‌
ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಿಲ್ಲೆಯಾದ್ಯಂತ ವ್ಯಾಪಕ ಅರಿವು ಮೂಡಿಸುವ ನಿಟ್ಟಿನಲ್ಲಿ ಉಡುಪಿ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಮಲ್ಪೆ ಬೀಚ್‌, ಕೊಲ್ಲೂರು ದೇವಸ್ಥಾನ ಮುಂತಾದ ಪ್ರಮುಖ ಸ್ಥಳಗಳಲ್ಲಿ ಹೋರ್ಡಿಂಗ್‌, ಪೋಸ್ಟರ್‌ಗಳನ್ನು ಅಳವಡಿಸಲಾಗುತ್ತಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಮನೆಗೆ ಕರಪತ್ರಗಳನ್ನು ಹಂಚಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವೈದ್ಯಕೀಯ ಪರೀಕ್ಷೆ
ಜಿಲ್ಲೆಗೆ ವ್ಯಾಪಕವಾಗಿ ಹೊರರಾಜ್ಯ ಮತ್ತು ಹೊರದೇಶ ದಿಂದ ಆಗಮಿಸುವವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸುವಂತೆ ಇಲಾಖೆಯ ಸಿಬಂದಿಗೆ ಸೂಚಿಸಲಾಗಿದೆ. ವಿದೇಶದಿಂದ ಆಗಮಿಸುವ ಜಿಲ್ಲೆಯ ಸಾರ್ವಜನಿಕರು ಸೂಕ್ತ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹಾಗೂ ರೋಗ ಲಕ್ಷಣ ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಹೊರದೇಶದಿಂದ ಬರುವ ವಿದ್ಯಾರ್ಥಿಗಳ ಕುರಿತಂತೆ ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯ ದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ವಾಸುದೇವ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮರಾವ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸಹಾಯವಾಣಿ
ಯಾವುದೇ ಸಮಸ್ಯೆಗಳಿದ್ದಲ್ಲಿ ಆರೋಗ್ಯ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 104 ಅಥವಾ 080 2228541/ 22374658 ಅಥವಾ ಉಡುಪಿ ಜಿಲ್ಲಾ
ಸರ್ವೇಕ್ಷಣಾ ಘಟಕ ದೂ.ಸಂ. 0820 2525561 ಸಂರ್ಕಿಸಬಹುದು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಾಕಷ್ಟು ಮುಂಜಾಗ್ರತಾ ಕ್ರಮದೊಂದಿಗೆ SSLC ಪರೀಕ್ಷೆ ಬರೆಯಲು ಅವಕಾಶ: ಸುರೇಶ್ ಕುಮಾರ್

ಸಾಕಷ್ಟು ಮುಂಜಾಗ್ರತಾ ಕ್ರಮದೊಂದಿಗೆ SSLC ಪರೀಕ್ಷೆ ಬರೆಯಲು ಅವಕಾಶ: ಸುರೇಶ್ ಕುಮಾರ್

ಮುಂಬೈನಿಂದ ಬಂದ ಮಹಿಳೆಗೆ ಸೋಂಕು ದೃಢ: ಉದ್ಯಾವರ ಕಲಾಯಿಬೈಲು ಸೀಲ್ ಡೌನ್

ಮುಂಬೈನಿಂದ ಬಂದ ಮಹಿಳೆಗೆ ಸೋಂಕು ದೃಢ: ಉದ್ಯಾವರ ಕಲಾಯಿಬೈಲು ಸೀಲ್ ಡೌನ್

ವಿಶ್ವಕಪ್ ನಲ್ಲಿ ಆಂಗ್ಲರ ವಿರುದ್ಧ ಭಾರತ ಬೇಕಂತಲೇ ಸೋಲನುಭವಿಸಿತ್ತೇ? ಚೋಪ್ರಾ ಹೇಳುವುದೇನು?

ವಿಶ್ವಕಪ್ ನಲ್ಲಿ ಆಂಗ್ಲರ ವಿರುದ್ಧ ಭಾರತ ಬೇಕಂತಲೇ ಸೋಲನುಭವಿಸಿತ್ತೇ? ಚೋಪ್ರಾ ಹೇಳುವುದೇನು?

ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ನೀಡುವಲ್ಲಿ ಸರ್ಕಾರ, ಬಿಬಿಎಂಪಿ ವಿಫಲ: ರಾಮಲಿಂಗ ರೆಡ್ಡಿ

ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ನೀಡುವಲ್ಲಿ ಸರ್ಕಾರ, ಬಿಬಿಎಂಪಿ ವಿಫಲ: ರಾಮಲಿಂಗ ರೆಡ್ಡಿ

ನಿಗದಿತ ಮುನ್ನೆಚ್ಚರಿಕೆಯೊಂದಿಗೆ ಹೋಟೆಲ್, ರೆಸ್ಟೋರೆಂಟ್ ತೆರೆಯಿರಿ: ಬಿಎಸ್ ವೈ ಸೂಚನೆ

ನಿಗದಿತ ಮುನ್ನೆಚ್ಚರಿಕೆಯೊಂದಿಗೆ ಹೋಟೆಲ್, ರೆಸ್ಟೋರೆಂಟ್ ತೆರೆಯಿರಿ: ಬಿಎಸ್ ವೈ ಸೂಚನೆ

ಶೃಂಗೇರಿ ಶಾರದಾಂಭೆ ದೇಗುಲದಲ್ಲೂ ಸದ್ಯಕ್ಕೆ ಭಕ್ತರಿಗೆ ದರ್ಶನ ಭಾಗ್ಯವಿಲ್ಲ!

ಶೃಂಗೇರಿ ಶಾರದಾಂಭೆ ದೇಗುಲದಲ್ಲೂ ಸದ್ಯಕ್ಕೆ ಭಕ್ತರಿಗೆ ದರ್ಶನ ಭಾಗ್ಯವಿಲ್ಲ!

ಚಿಕ್ಕಮಗಳೂರು ಜಿಲ್ಲೆ ಮತ್ತೆ ಕೋವಿಡ್-19 ಸೋಂಕು ಮುಕ್ತ

ಚಿಕ್ಕಮಗಳೂರು ಜಿಲ್ಲೆ ಮತ್ತೆ ಕೋವಿಡ್-19 ಸೋಂಕು ಮುಕ್ತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬೈನಿಂದ ಬಂದ ಮಹಿಳೆಗೆ ಸೋಂಕು ದೃಢ: ಉದ್ಯಾವರ ಕಲಾಯಿಬೈಲು ಸೀಲ್ ಡೌನ್

ಮುಂಬೈನಿಂದ ಬಂದ ಮಹಿಳೆಗೆ ಸೋಂಕು ದೃಢ: ಉದ್ಯಾವರ ಕಲಾಯಿಬೈಲು ಸೀಲ್ ಡೌನ್

ಕೋವಿಡ್ ಹರಡಲು ತಬ್ಲಿ ವ್ಯವಸ್ಥಿತ ಷಡ್ಯಂತ್ರ: ಶೋಭಾ

ಕೋವಿಡ್ ಹರಡಲು ತಬ್ಲಿ ವ್ಯವಸ್ಥಿತ ಷಡ್ಯಂತ್ರ: ಶೋಭಾ

ಜೂ. 8ರಿಂದ ದೇಗುಲ ದರ್ಶನಾವಕಾಶ

ಜೂ. 8ರಿಂದ ದೇಗುಲ ದರ್ಶನಾವಕಾಶ

ಮನೆ ಸೀಲ್ ಡೌನ್ ಆದರೂ ಸೋಂಕಿತ ಮನೆಯಲ್ಲಿಯೇ ಬಾಕಿ: ಸ್ಥಳೀಯರ ಆಕ್ರೋಶ

ಮನೆ ಸೀಲ್ ಡೌನ್ ಆದರೂ ಸೋಂಕಿತ ಮನೆಯಲ್ಲಿಯೇ ಬಾಕಿ: ಸ್ಥಳೀಯರ ಆಕ್ರೋಶ

ಕಸ್ತೂರ್ಬಾನಗರ ವಾರ್ಡ್‌ನಲ್ಲಿ ಬೆಟ್ಟದಷ್ಟು ಸಮಸ್ಯೆ

ಕಸ್ತೂರ್ಬಾ ನಗರ ವಾರ್ಡ್‌ನಲ್ಲಿ ಬೆಟ್ಟದಷ್ಟು ಸಮಸ್ಯೆ

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

9 ಜನ ಸೋಂಕಿತರು ಗುಣಮುಖ

9 ಜನ ಸೋಂಕಿತರು ಗುಣಮುಖ

ಸಾಕಷ್ಟು ಮುಂಜಾಗ್ರತಾ ಕ್ರಮದೊಂದಿಗೆ SSLC ಪರೀಕ್ಷೆ ಬರೆಯಲು ಅವಕಾಶ: ಸುರೇಶ್ ಕುಮಾರ್

ಸಾಕಷ್ಟು ಮುಂಜಾಗ್ರತಾ ಕ್ರಮದೊಂದಿಗೆ SSLC ಪರೀಕ್ಷೆ ಬರೆಯಲು ಅವಕಾಶ: ಸುರೇಶ್ ಕುಮಾರ್

ಮುಂಬೈನಿಂದ ಬಂದ ಮಹಿಳೆಗೆ ಸೋಂಕು ದೃಢ: ಉದ್ಯಾವರ ಕಲಾಯಿಬೈಲು ಸೀಲ್ ಡೌನ್

ಮುಂಬೈನಿಂದ ಬಂದ ಮಹಿಳೆಗೆ ಸೋಂಕು ದೃಢ: ಉದ್ಯಾವರ ಕಲಾಯಿಬೈಲು ಸೀಲ್ ಡೌನ್

ವಿಶ್ವಕಪ್ ನಲ್ಲಿ ಆಂಗ್ಲರ ವಿರುದ್ಧ ಭಾರತ ಬೇಕಂತಲೇ ಸೋಲನುಭವಿಸಿತ್ತೇ? ಚೋಪ್ರಾ ಹೇಳುವುದೇನು?

ವಿಶ್ವಕಪ್ ನಲ್ಲಿ ಆಂಗ್ಲರ ವಿರುದ್ಧ ಭಾರತ ಬೇಕಂತಲೇ ಸೋಲನುಭವಿಸಿತ್ತೇ? ಚೋಪ್ರಾ ಹೇಳುವುದೇನು?

ಜೀವ ವೈವಿಧ್ಯತೆ ಕಾಳಜಿ ಅಗತ್ಯ

ಜೀವ ವೈವಿಧ್ಯತೆ ಕಾಳಜಿ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.