ಕೊರೊನಾ ಭೀತಿ: ಕರಾವಳಿಯಿಂದ ಎನ್ನಾರೈಗಳಿಗೆ ಮಾಸ್ಕ್ ರವಾನೆ
Team Udayavani, Mar 10, 2020, 5:45 AM IST
ಉಡುಪಿ: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ವಿದೇಶಗಳಲ್ಲಿರುವ ಕರಾವಳಿ ಮೂಲದ ಎನ್ನಾರೈಗಳಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಎನ್ 95 ಮಾಸ್ಕ್ ರವಾನೆಯಾಗುತ್ತಿದೆ.
ಆತಂಕಗೊಂಡಿರುವ ಜನರು ಸೋಂಕು ಪ್ರಸರಣ ತಡೆಗಟ್ಟಲು ಹ್ಯಾಂಡ್ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳ ಮೊರೆ ಹೊಕ್ಕಿದ್ದಾರೆ.
ವಿದೇಶಗಳಲ್ಲಿ ಬೇಡಿಕೆಯಷ್ಟು ಮಾಸ್ಕ್ ಪೂರೈಕೆಯಾಗುತ್ತಿಲ್ಲ. ಕರಾವಳಿ ಮೂಲದವರು ವಿದೇಶ ಗಳಲ್ಲಿ ಭಾರೀ ಸಂಖ್ಯೆಯಲ್ಲಿದ್ದು, ಎನ್ 95 ಮಾಸ್ಕ್ಗೆ ಹುಟ್ಟಿದೂರಿನಲ್ಲಿರುವ ತಮ್ಮ ಸಂಬಂಧಿಕರನ್ನು ಆಶ್ರಯಿಸುತ್ತಿದ್ದಾರೆ. ಅವರು ಇಲ್ಲಿನ ಮೆಡಿಕಲ್ಗಳಿಂದ ಮಾಸ್ಕ್ ಖರೀದಿಸಿ ಕೊರಿಯರ್ ಮಾಡುತ್ತಿದ್ದಾರೆ. ಹೀಗಾಗಿ ಕಳೆದ 15 ದಿನಗಳಿಂದ ಇಲ್ಲಿನ ಮೆಡಿಕಲ್ಗಳಲ್ಲೂ ಮಾಸ್ಕ್ ಕೊರತೆ ಉಂಟಾಗಿದೆ.
ಮಾಸ್ಕ್ ಬೆಲೆ ಏರಿಕೆ
ಉಡುಪಿ ಜಿಲ್ಲೆಯಲ್ಲಿ 300 ರಿಟೇಲ್ ಮತ್ತು 50 ಹೋಲ್ಸೇಲ್ ಮೆಡಿಕಲ್ಗಳು ಇವೆ. ದ.ಕ.ದಲ್ಲಿ 500 ರಿಟೇಲ್ ಮತ್ತು 100 ಹೋಲ್ಸೇಲ್ ಶಾಪ್ಗ್ಳಿವೆ. ಇವುಗಳಲ್ಲಿ 5 ರೂ.ಗೆ ಮಾರಾಟವಾಗುತ್ತಿದ್ದ ಜನರಲ್ ಮಾಸ್ಕ್ ಬೆಲೆ ಈಗ 20ರಿಂದ 40 ರೂ. ವರೆಗೆ ಏರಿದೆ. ಎನ್ 95 ಮಾಸ್ಕ್ ಹಿಂದೆ 100 ರೂ. ಇದ್ದುದು ಈಗ 300 ರೂ. ಮುಟ್ಟಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಪೂರೈಕೆದಾರರು ಬೆಲೆ ಹೆಚ್ಚಳ ಮಾಡಿದ್ದಾರೆ. ಹಿಂದೆ ಒಂದು ರಿಟೇಲ್ ಮಡಿಕಲ್ನಲ್ಲಿ ಸರಾಸರಿ 10 ಮಾಸ್ಕ್ ಮಾರಾಟವಾಗುತ್ತಿದ್ದರೆ ಈಗ ದಿನಕ್ಕೆ 100ರಿಂದ 200 ಮಾರಾಟವಾಗುತ್ತಿವೆ.
ಕೊರಿಯರ್ಗಳ ಸಂಖ್ಯೆ ಹೆಚ್ಚಳ
ಹಿಂದೆ ತಿಂಗಳಿಗೆ, 3 ತಿಂಗಳಿಗೆ ಒಮ್ಮೆ ಒಂದು ಅಥವಾ 2 ಕೊರಿಯರ್ ವಿದೇಶಗಳಿಗೆ ಇರುತ್ತಿತ್ತು. ಈಗ 1 ತಿಂಗಳಿನಿಂದ ವಿದೇಶಕ್ಕೆ ಕಳುಹಿಸಲ್ಪಡುವ ಕೊರಿಯರ್ಗಳ ಸಂಖ್ಯೆ ಹೆಚ್ಚಾಗಿದೆ ಎಂದು ಕೊರಿಯರ್ ಸಂಸ್ಥೆ ಸಿಬಂದಿ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್