ಉಡುಪಿಯಲ್ಲಿ ನಿಲ್ಲದ ಕೋವಿಡ್ ಕಳವಳ: ಇಂದು 7 ಜನರಿಗೆ ಸೋಂಕು ದೃಢ
Team Udayavani, Jun 16, 2020, 6:37 PM IST
ಉಡುಪಿ: ರಾಜ್ಯದ ಕೋವಿಡ್-19 ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಪಟ್ಟಿ ಬೆಳೆಯುತ್ತಲೇ ಇದೆ. ಇಂದು ಜಿಲ್ಲೆಯಲ್ಲಿ ಮತ್ತೆ 7 ಜನರಿಗೆ ಸೋಂಕು ದೃಢವಾಗಿದೆ.
ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1035ಕ್ಕೆ ಏರಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ 81ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 817 ಮಂದಿ ಗುಣಮುಖರಾಗಿ ಬಿಡುಗಡೆಯಾದಂತಾಗಿದೆ.
ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 79 ಮಂದಿಗೆ ಸೋಂಕು ತಾಗಿರುವುದು ದೃಢವಾಗಿದೆ. ಪುತ್ತೂರು ಹಿರೇಂಬಾಡಿಯ 25 ವರ್ಷದ ಕಾರ್ಮಿಕನೋರ್ವನಿಗೆ ಸೋಂಕು ತಾಗಿರುವುದು ದೃಢವಾಗಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ಕ್ಕೆ ಏರಿಕೆಯಾಗಿದೆ.