ಮನೆಯಲ್ಲಿ ತಾಯಿ ಮಗಳ ಮೃತದೇಹ ಪತ್ತೆ ಪ್ರಕರಣ: ಪ್ರಿಯಕರನಿಂದ ಕೊಲೆಯಾಗಿರುವ ಶಂಕೆ!
Team Udayavani, May 10, 2022, 10:27 PM IST
ಹೆಬ್ರಿ: ಆತ್ರಾಡಿ ಗ್ರಾ.ಪಂ. ವ್ಯಾಪ್ತಿಯ ಮದಗ ಅಂಗನವಾಡಿ ಬಳಿ ಇರುವ ಮನೆಯೊಂದರಲ್ಲಿ ತಾಯಿ, ಮಗಳು ಮೃತಪಟ್ಟ ಸ್ಥಿತಿಯಲ್ಲಿ ರವಿವಾರ ಪತ್ತೆಯಾಗಿದ್ದು, ಇದು ಕೊಲೆಯಾಗಿರುವುದು ತನಿಖೆಯಲ್ಲಿ ಬಹುತೇಕ ಖಚಿತವಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ತಾಯಿ ಚೆಲುವಿ ಈ ಹಿಂದೆ ಮದುವೆಯಾಗಿದ್ದ ಪತಿಯಿಂದ ಕೊಲೆಯಾಗಿರಬಹುದು ಎನ್ನುವ ವದಂತಿ ಮೊದಲು ಹಬ್ಬಿತ್ತಾದರೂ, ಅನಂತರದಲ್ಲಿ ಈ ಪ್ರಕರಣ ತಿರುವು ಪಡೆದುಕೊಂಡಿದೆ.
ಆಕೆಯ ಪ್ರಿಯಕರನಿಂದಲೇ ಕೊಲೆಯಾಗಿರುವ ಶಂಕೆ ಬಲಗೊಳ್ಳುತ್ತಿದೆ. ತನ್ನ ದೂರದ ಸಂಬಂಧಿಯೋರ್ವರನ್ನು ಚೆಲುವಿ ಪ್ರೀತಿಸುತ್ತಿದ್ದು, ಆತ ವಾರಕ್ಕೊಮ್ಮೆ ಆಕೆಯನ್ನು ಭೇಟಿಯಾಗಲು ಮನೆಗೆ ಬರುತ್ತಿದ್ದ ಎನ್ನಲಾಗುತ್ತಿದೆ.
ಆತನೇ ಕೊಲೆ ಮಾಡಿರಬಹುದೆಂಬ ಸಂದೇಹ ಬಹುತೇಕ ಬಲಗೊಳ್ಳುತ್ತಿದ್ದು, ಪೊಲೀಸರ ತನಿಖೆ ತೀವ್ರವಾಗಿ ನಡೆಯುತ್ತಿದೆ. ಇನ್ನೊಂದು ಆಯಾಮದಲ್ಲೂ ಪೊಲೀಸ್ ತನಿಖೆ ನಡೆಯುತ್ತಿದೆ.