ಪತಿಯಿಂದ ಪತ್ನಿಗೆ ಮಾರಾಣಾಂತಿಕ ಹಲ್ಲೆ ; ದೂರು ದಾಖಲು
Team Udayavani, May 18, 2022, 12:59 AM IST
ಉಡುಪಿ: ಪತ್ನಿಗೆ ಪತಿ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ಅಂಬಾಗಿಲಿನಲ್ಲಿ ನಡೆದಿದೆ.
14 ವರ್ಷಗಳ ಹಿಂದೆ ಪೂರ್ಣಿಮಾ ಅವರು ವೆಂಕಟರಾಜ್‌ನನ್ನು ವಿವಾಹವಾಗಿದ್ದು, ಅಂಬಾಗಿಲಿನ ಫ್ಲ್ಯಾಟ್‌ವೊಂದರಲ್ಲಿ ವಾಸವಾಗಿದ್ದರು.
ಇವರಿಗೆ ಓರ್ವ ಮಗನಿದ್ದಾನೆ. ಕಳೆದ 2-3 ವರ್ಷದಿಂದ ಪೂರ್ಣಿಮಾ ಹಾಗೂ ಆರೋಪಿ ವೆಂಕಟರಾಜ್‌ಮಧ್ಯೆ ವೈಮನಸ್ಸು ಉಂಟಾಗಿದ್ದು, ಆತ ಪತ್ನಿ ಹಾಗೂ ಮಗನಿಗೆ ಖರ್ಚಿಗೆ ಹಣ ಕೊಡುತ್ತಿರಲಿಲ್ಲ.
ಅವಾಚ್ಯ ಶಬ್ದಗಳಿಂದ ಬೈಯುವುದು, ಹೊಡೆಯುವುದು ಮಾಡುತ್ತಿದ್ದನು. ಇದರಿಂದ ಬೇಸತ್ತು ಪೂರ್ಣಿಮಾ 3 ತಿಂಗಳಿಂದ ಮಗನೊಂದಿಗೆ ತವರು ಮನೆಯಲ್ಲಿ ವಾಸವಾಗಿದ್ದರು. ಮೇ 16ರಂದು ಪೂರ್ಣಿಮಾ ಬಟ್ಟೆ ತರಲು ಗಂಡನ ಮನೆಯಾದ ತಾಂಗದಗಡಿಗೆ ಹೋಗಿ ಮನೆಯೊಳಗಿದ್ದ ಗೋದ್ರೇಜ್‌ನ ಬಾಗಿಲು ತೆಗೆಯುತ್ತಿದ್ದಾಗ ವೆಂಕಟರಾಜ್ ಆಗಮಿಸಿ ಅವಾಚ್ಯ ವಾಗಿ ಬೈದು ಕೈಯಿಂದ ಹೊಡೆದಿದ್ದಾನೆ.
ಈ ವೇಳೆ ಆರೋಪಿಗಳಾದ ನಾಗರಾಜ, ಗೋಪಿ ನೆಲ ಒರೆಸುವ ಕೋಲಿನಿಂದ ಪೂರ್ಣಿಮಾ ಅವರ ತಲೆಗೆ ಹೊಡೆದಿದ್ದಾರೆ. ಪರಿಣಾಮ ಪೂರ್ಣಿಮಾ ತಲೆ ತಿರುಗಿ ಬಿದ್ದಿದ್ದು, ಪೂರ್ಣಿಮಾ ಅವರ ಜತೆ ಬಂದಿದ್ದ ತಂಗಿ ಹಾಗೂ ಮಗ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ಹೊಸ ಸೇರ್ಪಡೆ
ರೈಲ್ನಲ್ಲಿ ಕಾಸರಗೋಡಿನ ಮಹಿಳೆಯ ಬ್ಯಾಗ್ ಕಸಿದು ಪರಾರಿ; ದೂರು
ರಾಜ್ಯದಲ್ಲಿ 67 ಕೋಟಿ ರೂ. ಮೌಲ್ಯದ ಮಾದಕವಸ್ತು ನಾಶ
ಟಿ20 ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್, ಮಳೆ ಅಡಚಣೆ, ಉಮ್ರಾನ್ ಮಲಿಕ್ ಪದಾರ್ಪಣೆ
ವಿಂಬಲ್ಡನ್ ಗ್ರ್ಯಾನ್ಸ್ಲಾಂ ಟೆನಿಸ್ ಟೂರ್ನಿ: ವೀನಸ್ ದಾಖಲೆ ಮುರಿಯುವತ್ತ ಸ್ವಿಯಾಟೆಕ್
ಮಾರುತಿ ಸುಜುಕಿ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದ ಡಾ| ವೆಂಕಟರಾಮನ್ ಇನ್ನಿಲ್ಲ