ವೈಟ್‌ ಕಾಲರ್‌ ಜಾಬ್‌ ಬಿಟ್ಟು ಹೈನುಗಾರಿಕೆ ಆರಿಸಿಕೊಂಡ ಯುವಕ


Team Udayavani, Jan 23, 2019, 12:50 AM IST

white-color.jpg

ಕೋಟ: ವಿದ್ಯಾಭ್ಯಾಸ ಮುಗಿದ ಬಳಿಕ ಎಲ್ಲರೂ ಪೇಟೆಗಳತ್ತಲೇ ಮುಖ ಮಾಡುತ್ತಿರುವುದರಿಂದ ಕೃಷಿ ಕ್ಷೇತ್ರ ಬಡವಾಗುತ್ತಿದೆ ಎನ್ನುವುದು ಎಲ್ಲೆಡೆ ಕೇಳಿಬರುವ ಮಾತು. ಆದರೆ ಮಂದಾರ್ತಿ ಸಮೀಪ ಬಾರಾಳಿ ನಿವಾಸಿ ಪ್ರಥೀಶ್‌ ಶೆಟ್ಟಿ ಇವರೆಲ್ಲರಿಗಿಂತ ವಿಭಿನ್ನವಾಗಿದ್ದಾರೆ. ಡಿಪ್ಲೊಮಾ ಎಂಜಿನಿಯಂರಿಂಗ್‌ ಪದವಿ ಪಡೆದ ಬಳಿಕ ನಗರದತ್ತ ತೆರಳಿ ಸಾವಿರಾರು ರೂ. ಸಂಪಾದಿಸುವ ಅವಕಾಶವಿದ್ದರೂ 29ರ ಹರೆಯದ ಈ ಯುವಕ  ಅದೆಲ್ಲವನ್ನು ಬಿಟ್ಟು ಹೈನುಗಾರಿಕೆಯನ್ನು ವೃತ್ತಿಯಾಗಿ ಸ್ವೀಕರಿಸಿ ತಕ್ಕಮಟ್ಟಿನ ಯಶಸ್ಸು ಕಂಡಿದ್ದಾರೆ.

ಯುವಕರಿಗೆ ಆದರ್ಶ 
ಇಲ್ಲಿನ ಸ್ಥಳೀಯ ನಿವಾಸಿ ರಾಘವ ಶೆಟ್ಟಿಯವರ ಮೂವರು  ಮಕ್ಕಳಲ್ಲಿ ಪ್ರಥೀಶ್‌ ಎರಡನೆಯವರು. ಇವರ ಸಹೋದರರಿಬ್ಬರೂ ವೈದ್ಯರಾಗಿದ್ದು ಮನೆಯಲ್ಲಿ ಕೃಷಿ ಅನಾಥವಾಗುವ ಆತಂಕ ಕಾಡುತ್ತಿತ್ತು. ಡಿಪ್ಲೊಮಾ ಬಳಿಕ ಹಲವೆಡೆಗಳಿಂದ ಉದ್ಯೋಗಾವಕಾಶ ಬಂದಿದ್ದರೂ ಕೃಷಿ ಮೇಲಿನ ಪ್ರೀತಿ, ಪ್ರಾಣಿಗಳ ಮೇಲಿನ ಪ್ರೀತಿಯಿಂದ ಹುಟ್ಟೂರಿನಲ್ಲಿ ಹೈನುಗಾರಿಕೆ ಶುರು ಮಾಡಲು ಪ್ರೇರಣೆ ನೀಡಿತು.  

ಆಧುನಿಕ ವಿಧಾನದ ಹೈನುಗಾರಿಕೆ  
ಪ್ರಥೀಶ್‌ ಹೈನುಗಾರಿಕೆ ಯಶಸ್ಸಿನ ದಾರಿ ಹಿಡಿಯಲು ಕಾರಣ ಆಧುನಿಕ ವಿಧಾನಗಳನ್ನು ಅಳವಡಿಸಿಕೊಂಡಿರುವುದು. ಪಶು ಆಹಾರವನ್ನು ಕಡಿಮೆ ಬಳಕೆ ಮಾಡಿ, ಇತರ ಪೌಷ್ಟಿಕ ಆಹಾರವನ್ನು ನೀಡಿ  ಹೆಚ್ಚು ಹಾಲು ಉತ್ಪಾದನೆಯಾಗುವಂತೆ ಮಾಡಿದರೆ ಅಧಿಕ ಲಾಭಗಳಿಸಬಹುದು ಎನ್ನುವ ಇವರು ಸುಮಾರು ಅರ್ಧ ಎಕ್ರೆ ಜಾಗದಲ್ಲಿ ಹಸಿ ಹುಲ್ಲು ಬೆಳೆದಿದ್ದಾರೆ. ಹಾಲು ಹಿಂಡಲು ಮೆಷಿನ್‌ ಬಳಸಲಾಗುತ್ತದೆ  ಹಾಗೂ ಹಸಿ ಹಲ್ಲು ಹದಗೊಳಿಸಲೂ ಮೆಷಿನ್‌ ಬಳಸುತ್ತಿದ್ದಾರೆ. ಹಸುಗಳ ಮೈ ತೊಳೆಯಲು ಪ್ರಶರ್‌ ಪಂಪ್‌ ಮತ್ತು ಗೊರಸು ರೋಗ ಬಾರದಂತೆ ಹಟ್ಟಿಗೆ ಮ್ಯಾಟ್‌ ಅಳವಡಿಸಿದ್ದಾರೆ. ಕಾಲಕಾಲಕ್ಕೆ ಲಸಿಕೆ ಹಾಕುತ್ತಾರೆ. ಹಟ್ಟಿ ಶುಚಿಯಾಗಿ ಇಟ್ಟುಕೊಂಡಿದ್ದಾರೆ.  ತಳಿ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು ಉತ್ತಮ ತಳಿಯ ಕರುಗಳನ್ನು ಪಡೆಯಲು ಆಧ್ಯತೆ ನೀಡಲಾಗುತ್ತಿದೆ ಮತ್ತು ವಾರಕ್ಕೆ ಒಂದೆರಡು ಬಾರಿ ಪಶು ವೈದ್ಯರ ಮೂಲಕ ಜಾನುವಾರುಗಳನ್ನು ತಪಾಸಣೆ ಮಾಡಿಸಲಾಗುತ್ತದೆ.

ಕಾರ್ಮಿಕನಾಗಿ ದುಡಿಮೆ 
ಡೈರಿಯ ಮಾಲಕ ಎನ್ನುವ  ಯಾವುದೇ  ಹಮ್ಮಿಲ್ಲದೆ ಬೆಳಗ್ಗೆಯಿಂದ ಸಂಜೆ ತನಕ ಇವರು ಕಾರ್ಮಿಕರ ಜತೆಯಲ್ಲಿ ದನಗಳ ಚಾಕರಿ ಮಾಡುತ್ತಾರೆ. ಡೈರಿಯಲ್ಲಿ ಎಚ್‌.ಎಫ್‌., ಜೆರ್ಸಿ ತಳಿಯ ದನಗಳಿವೆ.  ಮನೆಯವರು ಕೂಡ ಇವರಿಗೆ ಸಹಕಾರ ನೀಡುತ್ತಾರೆ. ಆದ್ದರಿಂದ ಇವರ ಉದ್ಯಮ ಯಶಸ್ಸಿನತ್ತ ಸಾಗುತ್ತಿದೆ.  ದನಗಳ ನಿರ್ವಹಣೆ, ಹಾಲು ಕರೆಯುವುದು, ಹಟ್ಟಿಯ ನಿರ್ವಹಣೆ ಎಲ್ಲದಕ್ಕೂ ಆಧುನಿಕ ವಿಧಾನವನ್ನು ಬಳಸಿಕೊಂಡಿದ್ದಾರೆ.

ದೊಡ್ಡ  ಸಾಧನೆಯ ಹಂಬಲ 
ಪ್ರಸ್ತುತ ಈ ಉದ್ಯಮದಿಂದ ದೊಡ್ಡ ಮಟ್ಟದ ಲಾಭ ಸಿಗುತ್ತಿಲ್ಲ. ಆದರೆ ಈಗ ಸಾಧಿಸಿರುವುದು ತೀರಾ ಚಿಕ್ಕದು. ಮಂದೆ  ನೂರಾರು ಸಂಖ್ಯೆಯ ದನಗಳನ್ನು ಸಾಕಿ ಉದ್ಯಮವನ್ನು ಯಶಸ್ವಿ ಮಾಡಬೇಕು. ಆ ಮೂಲಕ ಯುವಕರಿಗೆ ಪ್ರೇರಣೆಯಾಗಬೇಕು ಎನ್ನುವುದು ಪ್ರಥೀಶ್‌ರವರ ಆಸೆಯಾಗಿದೆ.

ಮಾಸಿಕ 1.20 ಲಕ್ಷ ರೂ. ಸಂಪಾದನೆ
ನಾಲ್ಕೈದು ವರ್ಷದ ಹಿಂದೆ ನಾಲ್ಕು ಹಸುಗಳ ಮೂಲಕ ಉದ್ಯಮವನ್ನು ಆರಂಭಿಸಿದ  ಇವರ ಚಿಕ್ಕ ಡೈರಿಯಲ್ಲಿ  ಇದೀಗ 17 ಹಸುಗಳು, 14 ಕಡಸು ಮತ್ತು 15ಕ್ಕೂ ಹೆಚ್ಚು  ಪುಟ್ಟ ಕರುಗಳಿದೆ ಮತ್ತು   ದಿನವೊಂದಕ್ಕೆ 150ರಿಂದ -170 ಲೀಟರ್‌ ಹಾಲು ಸಂಗ್ರಹವಾಗುತ್ತದೆ. ಇವರಿಗೆ ತಿಂಗಳಿಗೆ 70ರಿಂದ 80 ಸಾವಿರ ರೂ ತನಕ ಖರ್ಚಾಗುತ್ತಿದ್ದು   ಸುಮಾರು 1 ಲಕ್ಷದಿಂದ 1.20 ಲಕ್ಷ ರೂ. ವರೆಗೆ ಸಂಪಾದನೆಯಿದೆ. ಜಾನುವಾರುಗಳ ಸಂಖ್ಯೆ ಹೆಚ್ಚಿದಂತೆ ಹೆಚ್ಚು ಲಾಭ ಗಳಿಸಬಹುದು ಎನ್ನುವುದು ಇವರ ಅಭಿಪ್ರಾಯವಾಗಿದೆ.

ಆತ್ಮ ತೃಪ್ತಿ ಮುಖ್ಯ 
ಡಿಪ್ಲೊಮಾ  ಇ.ಎನ್‌.ಸಿ. ಪದವಿ ಪಡೆದ ನನಗೆ ಸಾಕಷ್ಟು ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗಕ್ಕೆ ಅವಕಾಶವಿತ್ತು. ಆದರೆ ಅಲ್ಲಿನ ಔದ್ಯೋಗಿಕ ವಾತಾವರಣ ಇಷ್ಟವಾಗಿರಲಿಲ್ಲ.  ಊರಿನಲ್ಲಿನ ತೋಟ, ಮನೆ ನೋಡಿಕೊಳ್ಳುವವರಿಲ್ಲ ಎನ್ನುವ ಕೊರಗು ಕಾಡುತಿತ್ತು. ಹೀಗಾಗಿ ಊರಿಗೆ ಬಂದು ಹೈನುಗಾರಿಕೆ ಆರಂಭಿಸಿದೆ. ನನಗೆ ನನ್ನ ವೃತ್ತಿ ಬಗ್ಗೆ  ತೃಪ್ತಿ ಇದೆ. ಹಸುಗಳ ಜತೆಗೆ ಇರುವಾಗ ಆಗುವ ಖುಷಿ ಬೇರೆ ಎಲ್ಲೂ ಸಿಗಲು ಸಾಧ್ಯವಿಲ್ಲ. ಉದ್ಯಮ ಅಭಿವೃದ್ಧಿ ಹೊಂದಿದಂತೆ ವೈಟ್‌ಕಾಲರ್‌ ಜಾಬ್‌ಗಿಂತ ಹೆಚ್ಚು  ಲಾಭಗಳಿಕೆಗೂ ಅವಕಾಶವಿದೆ.
-ಪ್ರಥೀಶ್‌,  ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ ಯುವಕ

ದ.ಕ. ಹಾಲು ಒಕ್ಕೂಟದ  ಪ್ರಶಸ್ತಿ 
ಹಸಿಹುಲ್ಲಿನ ಮೇವಿನ ಉತ್ತಮ ನಿರ್ವಹಣೆಗಾಗಿ ಇವರ ಡೈರಿಗೆ ಈ ಬಾರಿಯ ದ.ಕ.ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದಿಂದ ಕೊಡಮಾಡುವ ಉತ್ತಮ ಸಾಧನಾ ಪ್ರಶಸ್ತಿ  ಸಂದಿದೆ. ಇದರ ಜತೆಗೆ ದನಗಳ ನಿರ್ವಹಣೆಗೆ ಸ್ಥಳೀಯ ಹೈನುಗಾರರು ಪ್ರಶಂಸೆಗೆ ವ್ಯಕ್ತಪಡಿಸಿದ್ದಾರೆ.

– ರಾಜೇಶ್‌ ಗಾಣಿಗ ಅಚಾÉಡಿ

ಟಾಪ್ ನ್ಯೂಸ್

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.