ಹೊಂಬಾಡಿ ಮಂಡಾಡಿ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್‌ ಭೇಟಿ

Team Udayavani, Jan 23, 2020, 7:57 PM IST

ಹುಣ್ಸೆಮಕ್ಕಿ : ಕುಂದಾಪುರ ತಾಲೂಕಿನ ಹೊಂಬಾಡಿ ಮಂಡಾಡಿ ಅಂಗನವಾಡಿ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಜ.23 ರಂದು ಭೇಟಿ ನೀಡಿ ಪುಟಾಣಿಗಳೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಅವರು ಅಂಗನವಾಡಿ ಪುಟಾಣಿಗಳೊಂದಿಗೆ ಕುಳಿತು ಅವರೊಂದಿಗೆ ಬೆರೆತು ಅವರ ಚಟುವಟಿಕೆಗಳನ್ನು ಅತ್ಯಂತ ಸನಿಹದಿಂದ ಆಲಿಸುವ ಮೂಲಕ ಇಂಗ್ಲೀಷ್‌ ಹಾಗೂ ಕನ್ನಡ ಅಕ್ಷರ ಮಾಲೆಗಳ ಬಗ್ಗೆ ಪುಟಾಣಿಗಳಲ್ಲಿ ಆಲಿಸಿ, ನಂತರ ಅಂಗನವಾಡಿ ಕೇಂದ್ರ ದಾಖಲಾತಿ ಹಾಗೂ ಇಲ್ಲಿನ ಆಹಾರ ತಯಾರಿಕಾ ಕೊಠಡಿಯನ್ನು ವೀಕ್ಷಿಸಿದರು.

ಗ್ರಾ.ಪಂ. ಕಛೇರಿಗೂ ಭೇಟಿ : ಇಲ್ಲಿನ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್‌ ಕಛೇರಿಗೆ ಭೇಟಿ ನೀಡಿ ಸಕಾಲದ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಭರತ್‌ ವಿ.ಶೆಟ್ಟಿ , ಗ್ರಾಮ ಲೆಕ್ಕಿಗ ಆನಂದ ಡಿ.ಎಂ., ಪ್ರಕಾಶ್‌ ಸುವರ್ಣ, ಅಂಗನವಾಡಿ ಕಾರ್ಯಕರ್ತೆ ನರ್ಮದಾ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ