ಕುಸಿಯುತ್ತಿರುವ ಚಿಕ್ಕಲ್‌ಬೆಟ್ಟು ಸೇತುವೆ: ಸಂಪರ್ಕ ಕಡಿತ ಭೀತಿ


Team Udayavani, Jun 8, 2018, 6:00 AM IST

0706ajke01.jpg

ಅಜೆಕಾರು: ಪ್ರತಿ ದಿನ ನೂರಾರು ವಾಹನಗಳು ಸಂಚರಿಸುವ 3 ಪ್ರಮುಖ ಪಂಚಾಯತ್‌ಗಳನ್ನ ಬೆಸೆಯುವ ಹಿರ್ಗಾನ ಗ್ರಾಮದ ಚಿಕ್ಕಲ್‌ಬೆಟ್ಟು ಸೇತುವೆ ಕುಸಿಯುತ್ತಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ.

1956ರಲ್ಲಿ  ನಿರ್ಮಾಣಗೊಂಡಿರುವ ಈ ಸೇತುವೆಯ ಆಧಾರಸ್ತಂಭಗಳ ಶಿಲೆಕಲ್ಲುಗಳು ಶಿಥಿಲಗೊಂಡು ನೀರಿನಲ್ಲಿ  ಕೊಚ್ಚಿಹೋಗುತ್ತಿದೆ.

ಸೇತುವೆಯ ಆಧಾರಸ್ತಂಭಗಳು ತಳ ಬಿಟ್ಟಿರುವುದರಿಂದ ಮಳೆಗಾಲದಲ್ಲಿ ನೀರಿನ ಸೆಳೆತಕ್ಕೆ ಸಂಪೂರ್ಣ ಕೊಚ್ಚಿ ಹೋಗಿ ಸೇತುವೆ ಸಂಪರ್ಕ ಕಡಿದುಕೊಳ್ಳುವ ಭೀತಿ ಸ್ಥಳೀಯರದ್ದಾಗಿದೆ. ಹಿರ್ಗಾನ, ಬೈಲೂರು ಹಾಗೂ ಎರ್ಲಪಾಡಿ ಪಂಚಾಯತ್‌ಗಳ  ಸಂಪರ್ಕ ಸೇತುವೆಯಾದ ಚಿಕ್ಕಲ್‌ಬೆಟ್ಟು ಸೇತುವೆ ನಿರ್ಮಾಣಗೊಂಡು ಸುಮಾರು 62 ವರ್ಷಗಳಾಗಿದ್ದು ಬಹಳಷ್ಟು ಅಗಲ ಕಿರಿದಾಗಿದೆ. 3 ಗ್ರಾಮಗಳಿಂದ ಪ್ರತಿ ನಿತ್ಯ ನೂರಾರು ವಾಹನಗಳು ಹಾಗೂ ಕಾರ್ಕಳ, ಹಿರ್ಗಾನ, ಬೈಲೂರಿನಲ್ಲಿ ಸಂಪರ್ಕಿಸುವ ಬಸ್ಸುಗಳು ನಿತ್ಯ ಸಂಚರಿಸುತ್ತವೆ. ಅಲ್ಲದೆ ಬೈಲೂರು ಭಾಗದಿಂದ ಹೆಬ್ರಿ ಕಡೆ ಸಂಚರಿಸುವವರು ಇದೇ ಮಾರ್ಗವನ್ನು ಅವಲಂಭಿಸಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಈ ಸೇತುವೆಯ ಎರಡೂ ಬದಿಯ ಆಧಾರ ಗೋಡೆಯ ಕಲ್ಲುಗಳು ದಶಕಗಳಿಂದ ಕುಸಿಯುತ್ತಿದ್ದು  ಈಗ ಸೇತುವೆಯ ಮಧ್ಯಭಾಗದ ಆಧಾರಸ್ತಂಭದ ತಳಭಾಗವೇ ಬಿರುಕು ಬಿಟ್ಟು ಯಾವುದೇ ಸಂದರ್ಭದಲ್ಲಿ ಸೇತುವೆ ಕುಸಿಯುವ ಭೀತಿ ನಿರ್ಮಾಣವಾಗಿದೆ.

ಈ ಸಂಪರ್ಕ ರಸ್ತೆಯು ಬಹಳಷ್ಟು ಅಭಿವೃದ್ಧಿಯಾಗಿದ್ದು ಘನ ವಾಹನಗಳು ಈ ಸೇತುವೆಯ ಮೇಲಿಂದಲೇ ಸಂಚರಿಸುತ್ತವೆ. ಹಾಗೂ ಇದು ಕಡಿದಾದ ತಿರುವಿನಿಂದ ಕೂಡಿರುವ ಭಾಗದಲ್ಲಿ ಸೇತುವೆ ಇರುವುದರಿಂದ ಬಹಳಷ್ಟು ಅಪಘಾತಗಳಿಗೂ ಕಾರಣವಾಗಿದೆ.

ದಶಕಗಳಿಂದ ಮನವಿ
ಅಗಲ ಕಿರಿದಾದ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಸೇತುವೆಯನ್ನು ತೆರವುಗೊಳಿಸಿ ವಿಶಾಲವಾದ ಸೇತುವೆ ನಿರ್ಮಿಸಿಕೊಡುವಂತೆ ಸುಮಾರು 10 ವರ್ಷಗಳಿಂದ ಸ್ಥಳೀಯರು ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಯವರಿಗೆ ನಿರಂತರ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂಬುದು ಸ್ಥಳೀಯರ ಅಳಲಾಗಿದೆ.

ಮಳೆಗಾಲದ ನೀರಿನ ಪ್ರವಾಹಕ್ಕೆ ಒಂದು ವೇಳೆ ಸೇತುವೆ ಕುಸಿತಗೊಂಡರೆ ನಿತ್ಯ ಸಂಚರಿಸುವ ಶಾಲೆಯ ಮಕ್ಕಳಿಗೆ, ಉದ್ಯೋಗಸ್ಥರಿಗೆ ತೀವ್ರ ತೊಂದರೆಯಾಗಲಿದ್ದು  ಸುಮಾರು 15 ಕಿ.ಮೀ. ಸುತ್ತುಬಳಸಿ ಸಂಚರಿಸುವ ಅನಿವಾರ್ಯತೆ ಉಂಟಾಗಲಿದೆ.

ಮುಂದಿನ ದಿನಗಳಲ್ಲಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿವರ್ಗದವರು ಸೂಕ್ತ ರೀತಿಯಲ್ಲಿ ಸಮಸ್ಯೆಗೆ ಸ್ಪಂದಿಸಿ ಹೊಸ ಸೇತುವೆ ನಿರ್ಮಾಣ ಮಾಡುವ ಭರವಸೆಯಲ್ಲಿ ಸ್ಥಳೀಯರಿದ್ದಾರೆ.

ಸೇತುವೆಯು ಅಗಲ ಕಿರಿದು
ಈಗಿರುವ ಸೇತುವೆಯು ಅಗಲ ಕಿರಿದಾಗಿದ್ದು ಈ ಜಾಗದಲ್ಲಿ ವಿಶಾಲ ಸೇತುವೆ ನಿರ್ಮಿಸಲು ಹೆಚ್ಚಿನ ಅನುದಾನದ ಅಗತ್ಯವಿದೆ. ಸ್ಥಳೀಯರ ಬೇಡಿಕೆಯಂತೆ ಹೆಚ್ಚಿನ ಅನುದಾನ ಒದಗಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ಸುಮಾ,ಪಿಡಿಒ ಹಿರ್ಗಾನ ಗ್ರಾ.ಪಂ.

ಅಪಾಯಕಾರಿ ಸ್ಥಿತಿ
ಹಿರ್ಗಾನ, ಬೈಲೂರು, ಎರ್ಲಪಾಡಿ ಪಂಚಾಯತ್‌ಗಳ ಸಂಪರ್ಕ ಸೇತುವೆಯಾದ ಚಿಕ್ಕಲ್‌ಬೆಟ್ಟು ಸೇತುವೆ ಶಿಥಿಲಗೊಂಡು ತೀರಾ ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಸೇತುವೆ ಪುನರ್‌ನಿರ್ಮಾಣಕ್ಕೆ ಕಳೆದ 15 ವರ್ಷಗಳಿಂದ ಸಂಸದರಿಗೆ, ಶಾಸಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಸೇತುವೆ ಮಾತ್ರ ನಿರ್ಮಾಣವಾಗಿಲ್ಲ .
– ತಾರಾನಾಥ ಶೆಟ್ಟಿ,ಸ್ಥಳೀಯರು

– ಜಗದೀಶ್‌ ರಾವ್‌ ಅಂಡಾರು

ಟಾಪ್ ನ್ಯೂಸ್

president Kovind

ನ್ಯಾಯಾಧೀಶರ ಹೇಳಿಕೆಗಳಲ್ಲಿ ಅತ್ಯಂತ ವಿವೇಚನೆ ಅಗತ್ಯ: ರಾಷ್ಟ್ರಪತಿ ಕೋವಿಂದ್

ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ

ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ

hkjkhgf

ಕೊರೊನಾಕ್ಕಿಂತ ಅಪಾಯಕಾರಿ ಈ ಒಮಿಕ್ರಾನ್‌ : ಏನಿದರ ಸ್ವರೂಪ, ಏಕೆ ಆತಂಕ?

rwytju11111111111

ಭಾನುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

ಸೋಲಿಗೆ ಟಿಕೆಟ್‌ ಕೊಡಿಸಿದವರೇ ಹೊಣೆ

ಸೋಲಿಗೆ ಟಿಕೆಟ್‌ ಕೊಡಿಸಿದವರೇ ಹೊಣೆ

ಕೇರಳ-ದ.ಕ. ಪ್ರವೇಶಕ್ಕೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ

ಕೇರಳ-ದ.ಕ. ಪ್ರವೇಶಕ್ಕೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರ್ಕಳ: ಬಟ್ಟೆ ಒಣಗಿಸುವಾಗ ಆಯತಪ್ಪಿ ಬಿದ್ದ ಮಹಿಳೆ; ಚಿಕಿತ್ಸೆ ಫಲಕಾರಿಯಾಗದೆ ಸಾವು

ಕಾರ್ಕಳ: ಬಟ್ಟೆ ಒಣಗಿಸುವಾಗ ಆಯತಪ್ಪಿ ಬಿದ್ದ ಮಹಿಳೆ; ಚಿಕಿತ್ಸೆ ಫಲಕಾರಿಯಾಗದೆ ಸಾವು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಶಾಲಾ ಮಕ್ಕಳ ಖಾತೆ ಸೇರದ ಕುಕ್ಕಿಂಗ್‌ ಕಾಸ್ಟ್‌ !

ಶಾಲಾ ಮಕ್ಕಳ ಖಾತೆ ಸೇರದ ಕುಕ್ಕಿಂಗ್‌ ಕಾಸ್ಟ್‌ !

https://www.udayavani.com/news-section/national-news/colonial-mindset-disrupting-indias-development-journey

ಅಸ್ಪೃಶ್ಯತೆ ನಿವಾರಣೆಗೆ ಕಾರ್ಯಕ್ರಮ: ಕೋಟ

1-sds

ದಿಢೀರ್ ಬದಲಾವಣೆಗೆ ಕಾರಣ ಏನು? ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ : ಜನ್ಸಾಲೆ ಭಾಗವತರ ಮನದ ಮಾತು

MUST WATCH

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

udayavani youtube

ಮೈಮೇಲೆ ದೇವರು ಬಂದಿದ್ದಾರೆ ಎಂದು ಲಸಿಕೆ ಹಾಕಲು ಬಂದವರನ್ನೇ ಯಾಮಾರಿಸಿದ ವ್ಯಕ್ತಿ

udayavani youtube

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಹೊಸ ಸೇರ್ಪಡೆ

president Kovind

ನ್ಯಾಯಾಧೀಶರ ಹೇಳಿಕೆಗಳಲ್ಲಿ ಅತ್ಯಂತ ವಿವೇಚನೆ ಅಗತ್ಯ: ರಾಷ್ಟ್ರಪತಿ ಕೋವಿಂದ್

ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ

ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ

hkjkhgf

ಕೊರೊನಾಕ್ಕಿಂತ ಅಪಾಯಕಾರಿ ಈ ಒಮಿಕ್ರಾನ್‌ : ಏನಿದರ ಸ್ವರೂಪ, ಏಕೆ ಆತಂಕ?

rwytju11111111111

ಭಾನುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.