ದೀಪಾವಳಿ ತೈಲಾಭ್ಯಂಗದ ಹಿಂದೆ ಬಗೆಬಗೆ ಆರೋಗ್ಯ ಕಾಳಜಿ


Team Udayavani, Nov 13, 2020, 5:55 AM IST

ದೀಪಾವಳಿ ತೈಲಾಭ್ಯಂಗದ ಹಿಂದೆ ಬಗೆಬಗೆ ಆರೋಗ್ಯ ಕಾಳಜಿ

ಸಾಂದರ್ಭಿಕ ಚಿತ್ರ

ದೀಪಾವಳಿ ಹಬ್ಬದಲ್ಲಿ ನರಕ ಚತುರ್ದಶಿಯಂದು ತೈಲಾಭ್ಯಂಗ ಮಾಡುವ ಕ್ರಮವಿದೆ. ಅಸುರ ನರಕನು ಕೂಡಿಟ್ಟಿದ್ದ 16 ಸಹಸ್ರ ಯುವತಿಯರನ್ನು ಶ್ರೀಕೃಷ್ಣನು ವಿಮುಕ್ತಿಗೊಳಿಸಿದ್ದರ ಸಂಕೇತ ಇದು ಎನ್ನುವುದು ಕಥೆ. ಆದರೆ ಶುದ್ಧ ಎಣ್ಣೆಯನ್ನು ಮೈಯೆಲ್ಲ ಹಚ್ಚಿ ಬಿಸಿನೀರಿನಲ್ಲಿ ಅಭ್ಯಂಗ ಸ್ನಾನ ಮಾಡುವುದರಿಂದ ಆರೋಗ್ಯ ಲಾಭಗಳು ಹಲವಾರಿವೆ.

ಉಡುಪಿ: ಆರೋಗ್ಯ ಸುಧಾರಣೆಗೂ ದೀಪಾವ ಳಿಗೂ ಎತ್ತಣಿಂದೆತ್ತ ಸಂಬಂಧವಯ್ಯ?  ತಲೆಗೂದಲು ಉದುರುವುದನ್ನು ಗಂಭೀರವಾಗಿ ಪರಿಗಣಿಸುವುದರ ಹಿಂದೆ ಆರೋಗ್ಯ ಕಾಳಜಿಗಿಂತ ಸೌಂದರ್ಯ ಕಾಳಜಿ ಇದೆ. ಆರೋಗ್ಯ ಕಾಳಜಿಯೇ ಮುಖ್ಯ. ಆದರೆ ಸಾಮಾನ್ಯವಾಗಿ ಇದು ನಮಗೆ ಗೌಣ. ಕೂದಲು ಬಾಯಿ ಮೂಲಕ ಶರೀರದೊಳಗೆ ಹೋಗುವುದು ಅನಾರೋಗ್ಯವನ್ನು ತಂದೊಡ್ಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ.

ಕೂದಲು ಹೊಟ್ಟೆಗೆ ಹೋದ ಬಳಿಕ ಕರಗುವು ದಿಲ್ಲ ಎಂದು ಆರೋಗ್ಯ ವಿಜ್ಞಾನ ಹೇಳುತ್ತದೆ. ಫ‌ಂಗಲ್‌ ಇನ್‌ಫೆಕ್ಷನ್‌, ಆನುವಂಶಿಕ ಕಾರಣ, ಹಾರ್ಮೋನುಗಳ ಅಸಮತೋಲನದಿಂದ ಕೂದಲು ಉದುರುತ್ತವೆ ಎನ್ನುತ್ತಾರೆ ಮಣಿಪಾಲ ಕೆಎಂಸಿ ಮೈಕ್ರೋಬಯಾಲಜಿ ವಿಭಾಗ ಮುಖ್ಯಸ್ಥೆ ಮತ್ತು ಕರುಳು ಶಾಸ್ತ್ರ ತಜ್ಞೆ ಡಾ| ಮಮತಾ ಬಲ್ಲಾಳ್‌. ಕೂದಲಿನಂತಹ ಅಜೀರ್ಣ ಕಾರಕ ಗಳನ್ನು ನಿವಾರಿಸಲು ಬಾಳೆದಿಂಡಿನ ಪದಾರ್ಥ ಗಳನ್ನು ಮಾಡಿ ಸೇವಿಸುವುದು ದೇಸೀ ಪರಿಹಾರ ಕ್ರಮವಾಗಿದೆ.

ಬಗೆಬಗೆ ಅನಾರೋಗ್ಯಮೂಲ
ಕೂದಲು ಉದುರುವುದಕ್ಕೆ ಅನೇಕ ಕಾರಣ ಗಳಿರುತ್ತವೆ, ಮುಖ್ಯ ಕಾರಣ ದೇಹ ಉಷ್ಣವಾಗಿ ರುವುದು. ಕೂದಲು ಉದುರುವುದು ಒಂದು ಲಕ್ಷಣವಷ್ಟೆ. ದೇಹ ಉಷ್ಣವಾದರೆ ನಿದ್ರಾಹೀನತೆ, ನಿದ್ರೆ ಕಡಿಮೆಯಾದಾಗ ಬಿಪಿ, ಮಧುಮೇಹ ಹೀಗೆ ಒಂದಕ್ಕೊಂದು ಸರಣಿಯಂತೆ ಸಮಸ್ಯೆಗಳು ಬೆಳೆಯುತ್ತವೆ. ಇದು ಕೊನೆಯ ಹಂತದಲ್ಲಿರುವಾಗ ಚಿಕಿತ್ಸೆ ಬೇಕಾಗುತ್ತದೆ.

ವಾರಕ್ಕೊಮ್ಮೆ ಎಣ್ಣೆ ಸ್ನಾನ
ಶರೀರಕ್ಕೆ ಉಷ್ಣವಾಗಿ ಕೂದಲು ಉದುರುವುದಕ್ಕೆ ಸೂಕ್ತ ಪರಿಹಾರವೆಂದರೆ ಕನಿಷ್ಠ ವಾರಕ್ಕೊಂದಾ ವರ್ತಿಯಾದರೂ ಎಣ್ಣೆ ಹಚ್ಚಿಕೊಂಡು (ಶುದ್ಧ ಎಳ್ಳೆಣ್ಣೆ /ತೆಂಗಿನೆಣ್ಣೆ) ಸ್ನಾನ ಮಾಡುವುದು ಎಂಬ ಸಲಹೆ ಆಯುರ್ವೇದ ವೈದ್ಯ ಡಾ| ಜಯರಾಮ ಭಟ್‌ ಅವರದು.

ಎಳ್ಳೆಣ್ಣೆ-ತೆಂಗಿನೆಣ್ಣೆ
ವಾತ ಮತ್ತು ಪಿತ್ಥದ ಕಾರಣ ಕೂದಲು ಉದುರು ತ್ತದೆ. ಕಿಮೋಥೆರಪಿಯಿಂದಲೂ ಕೂದಲುಉದು ರುತ್ತದೆ. ಈಗೀಗ ವಿಶೇಷವಾಗಿ ಮಹಿಳೆಯರಲ್ಲಿ ವ್ಯಾಕ್ಸಿನ್‌, ಹೇರ್‌ ರಿಮೂವರ್‌ ಮೂಲಕ ಉದ್ದೇಶ ಪೂರ್ವಕವಾಗಿ ಕಾಲುಗಳ ಕೂದಲುಗಳನ್ನು ತೆಗೆ ಯುವ ಕ್ರಮ ಬಂದಿದೆ. ಇದು ಒಳ್ಳೆಯದಲ್ಲ. ಎಳ್ಳೆಣ್ಣೆ ವಾತಶಾಮಕವಾದರೆ ತೆಂಗಿನೆಣ್ಣೆ ಪಿತ್ಥ ಶಾಮಕವಾ ಗಿದೆ. ಉತ್ತರ ಭಾರತದಲ್ಲಿ ಸಾಸಿವೆ ಎಣ್ಣೆಗೆ ಮಹತ್ವ ಕೊಡುತ್ತಾರೆ. ಕೂದಲು ಉದುರುವುದಕ್ಕೆ ಎಣ್ಣೆ ಹಚ್ಚಿ ಸ್ನಾನ ಸುಲಭ ಮತ್ತು ಪರಿಣಾಮಕಾರಿ ಮಾರ್ಗ. ಕೂದಲು ಶರೀರದೊಳಗೆ ಹೋಗುವುದಕ್ಕಿಂತ ಕೂದಲು ಉದುರುವುದು ಹೆಚ್ಚು ಅಪಾಯ ಕಾರಿ ಎಂದು ಮಣಿಪಾಲ ಮುನಿಯಾಲು ಆಯು ರ್ವೇದ ಕಾಲೇಜಿನ ಪ್ರಾಂಶುಪಾಲ ಡಾ| ಬಿ. ಸತ್ಯನಾರಾಯಣ ಅವರು ಅಭಿಪ್ರಾಯಪಡುತ್ತಾರೆ.

ದೀಪಾವಳಿ – ಸ್ನಾನದ ಆಚರಣೆ
ಈಗ ಮಧುಮೇಹ ದಿನ, ಅಪ್ಪಂದಿರ ದಿನ, ಅಮ್ಮಂದಿರ ದಿನ, ಸ್ವಾತಂತ್ರ್ಯ ದಿನ, ಏಡ್ಸ್‌ ದಿನ ಹೀಗೆ ಅನೇಕಾನೇಕ ದಿನಾಚರಣೆಗಳು ನಡೆಯುವಂತೆ ದೀಪಾವಳಿಯ ಹಬ್ಬದ ಸಂದರ್ಭ ಎಣ್ಣೆ ಸ್ನಾನ (ತೈಲಾಭ್ಯಂಗ) ಮಾಡುವ ಕ್ರಮ ಅನುಸರಿಸಲಾಗುತ್ತಿದೆ. ಎಲ್ಲ ದಿನಾಚರಣೆಗಳಂತೆ ಇದೊಂದು ಸಂಕೇತ ಮಾತ್ರ. ಸಾಧ್ಯವಾದರೆ ಎಲ್ಲ ದಿನವೂ ಎಣ್ಣೆ ಸ್ನಾನ ಮಾಡಿದರೆ ಉತ್ತಮ; ಇಲ್ಲವಾದರೆ ಅಪರೂಪದಲ್ಲಿಯಾದರೂ ಮಾಡಬೇಕು ಎಂಬ ಸಂದೇಶವಿರಿಸಿ ಕೊಂಡು ದೀಪಾವಳಿಯ ಎಣ್ಣೆ ಸ್ನಾನವನ್ನು ಹಿರಿಯರು ಜಾರಿಗೆ ತಂದಿರುವ ಸಾಧ್ಯತೆ ಹೆಚ್ಚು. ಕೂದಲು ಉದುರಿದ ಬಳಿಕ ಸಮಸ್ಯೆ ಬಗೆ ಹರಿಸುವುದಕ್ಕಿಂತ ಕೂದಲು ಉದುರದೆ ಇರುವಂತೆ ನೋಡಿಕೊಳ್ಳಲು ಎಣ್ಣೆ ಹಚ್ಚಿ ಸ್ನಾನ ಮಾಡುವುದು ಉತ್ತಮ. ಎಣ್ಣೆ ಹಚ್ಚುವಾಗಲೂ ಪಾದದಿಂದ ನೆತ್ತಿಯವರೆಗೆ ಹೆಚ್ಚಬೇಕೆಂಬ ಶಾಸ್ತ್ರೀಯ ಶಾಸನವೂ ಇದೆ. ಇದರರ್ಥ ದೇಹದ ಎಲ್ಲ ಭಾಗಗಳಿಗೂ ತೈಲದ ಅಗತ್ಯವಿದೆ. ದೇಹಾರೋಗ್ಯವನ್ನು ಸಮತೋಲನದಲ್ಲಿರಿಸುವ ಗುಣಧರ್ಮವನ್ನು ತೈಲ ಹೊಂದಿದೆ. ಧರ್ಮದ ಮೂಲಕ ಆರೋಗ್ಯ ಸೂತ್ರವನ್ನೋ ಅಥವಾ ಆರೋಗ್ಯದ ಮೂಲಕ ಧರ್ಮಸೂತ್ರವನ್ನೋ ಹಿರಿಯರು ಕೊಟ್ಟಂತಿದೆ.

ಟಾಪ್ ನ್ಯೂಸ್

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.