Udayavni Special

ಮರತ್ತೂರು-ಕ್ರೋಢಬೈಲೂರು ಸಂಪರ್ಕ ಸೇತುವೆಗೆ ಬೇಡಿಕೆ


Team Udayavani, May 27, 2018, 6:00 AM IST

2505kdpp5a.jpg

ಕುಂದಾಪುರ: ಮರತ್ತೂರು – ಕ್ರೋಢಬೈಲೂರು ನಡುವೆ ಸುಮಾರು 40 ವರ್ಷಗಳಿಂದ ಸಂಪರ್ಕ ಸೇತುವೆ ಬೇಡಿಕೆಯಿದ್ದರೂ, ಯಾರೂ ಈ ಬಗ್ಗೆ ಗಂಭೀರವಾಗಿ ಪರಿಗಣಿಸದ್ದರಿಂದ ಜನರ ಬೇಡಿಕೆ ಕನಸಾಗಿಯೇ ಉಳಿದಿದೆ.  

ಮೊಳಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವಾರಾಹಿ ನದಿಗೆ ಸೇತುವೆ ನಿರ್ಮಿಸಿದರೆ ಮರತ್ತೂರು ಹಾಗೂ ಕ್ರೋಢಬೈಲೂರು ನಡುವೆ ಸಂಪರ್ಕ ಸಾಧ್ಯವಾಗಲಿದೆ. ಇದರಿಂದ ಬಿದ್ಕಲ್‌ಕಟ್ಟೆ-ಅಂಪಾರು ಮಧ್ಯೆ ಹತ್ತಿರದ ದಾರಿಯಾಗಲಿದೆ. 

ಈಗ ಬಿದ್ಕಲ್‌ಕಟ್ಟೆ, ಮೊಳಹಳ್ಳಿ, ಗಾವಳಿ ಭಾಗದಿಂದ ಶಂಕರನಾರಾಯಣಕ್ಕೆ ಹೋಗುವ ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಸುತ್ತು ಬಳಸಿ ಹೋಗುತ್ತಿದ್ದಾರೆ. ಈ ಸೇತುವೆ ನಿರ್ಮಾಣವಾದರೆ ನಿತ್ಯ ಪಡುತ್ತಿರುವ ಪ್ರಯಾಸಕ್ಕೆ ಮುಕ್ತಿ ಸಿಗಲಿದೆ.

ಯಾತ್ರಾರ್ಥಿಗಳಿಗೂ ಪ್ರಯೋಜನ
ಸೇತುವೆ ನಿರ್ಮಾಣವಾದರೆ ಬಾರಕೂರು ಕಡೆಯಿಂದ  ಕೊಲ್ಲೂರು  ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳಿಗೂ ಪ್ರಯೋಜನವಾಗಲಿದೆ. ಸೇತುವೆಯಾದರೆ ಬಾರಕೂರು, ಬಿದ್ಕಲ್‌ಕಟ್ಟೆ ಮಾರ್ಗವಾಗಿ ಅಂಪಾರು, ನೇರಳಕಟ್ಟೆಯಾಗಿ ಕೊಲ್ಲೂರಿಗೆ ಸಂಚರಿಸಬಹುದು.

ಊರ ಅಭಿವೃದ್ಧಿಗೂ ಸಹಕಾರಿ
ಸೇತುವೆ ನಿರ್ಮಾಣವಾದರೆ ತೀರಾ ಗ್ರಾಮೀಣ ಪ್ರದೇಶವಾಗಿರುವ ಮರತ್ತೂರು ಭಾಗ ಕೂಡ ಅಭಿವೃದ್ಧಿಯಾಗಲಿದೆ. ಬಿದ್ಕಲ್‌ಕಟ್ಟೆ- ಅಂಪಾರು ಈ ಎರಡು ಊರುಗಳಿಗೆ ಮರತ್ತೂರು ಕೊಂಡಿಯಾಗಲಿದ್ದು, ಸಂಚಾರ, ಸಾಗಾಟಕ್ಕೆಲ್ಲ ಅನುಕೂಲವಾಗಲಿದೆ.

9 ಕಿ.ಮೀ. ಹತ್ತಿರ
ಬಿದ್ಕಲ್‌ಕಟ್ಟೆಯಿಂದ ಈಗ ಅಂಪಾರಿಗೆ ಸುತ್ತು ಬಳಸಿ ತೆರಳುವುದರಿಂದ 19 ಕಿ.ಮೀ. ದೂರವಿದ್ದು, ಮರತ್ತೂರು-ಕ್ರೋಢಬೈಲೂರು ಸೇತುವೆಯಾದರೆ 9 ಕಿ.ಮೀ. ಹತ್ತಿರವಾಗಲಿದೆ. ಈ ಮಾರ್ಗದಲ್ಲಿ ಮಧ್ಯೆ ಬಸ್‌ ಸಂಚಾರವನ್ನು ಆರಂಭಿಸಿದರೆ ಬಹಳಷ್ಟು ಮಂದಿಗೆ ಪ್ರಯೋಜನವಾಗಲಿದೆ.

ಚರ್ಚಿಸಿ ಕ್ರಮಕೈಗೊಳ್ಳಲಾಗುವುದು
ಮರತ್ತೂರು ಹಾಗೂ ಕ್ರೋಢಬೈಲೂರಿಗೆ ಸಂಪರ್ಕ ಕಲ್ಪಿಸಲು ಅಲ್ಲೊಂದು ಸೇತುವೆ ನಿರ್ಮಿಸಲು ಪ್ರಸ್ತಾವನೆಯಿದೆ. ಸೇತುವೆ ನಿರ್ಮಾಣವಾದರೆ ಜನರಿಗೆ ಪ್ರಯೋಜನವಾಗಲಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೇತುವೆ ನಿರ್ಮಾಣ ಬಗ್ಗೆ ಸರಕಾರಕ್ಕೆ ಬೇಡಿಕೆ ಪಟ್ಟಿ ಸಲ್ಲಿಸಲಾಗುವುದು.
– ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕರು

ಬೇಡಿಕೆ ಹಲವು ವರ್ಷಗಳಿಂದ ಇದೆ
ವಾರಾಹಿ ನದಿಗೆ ಮರತ್ತೂರಿನಿಂದ ಕ್ರೋಢಬೈಲೂರಿಗೆ ಸೇತುವೆ ನಿರ್ಮಿಸಿದರೆ ಸಾಕಷ್ಟು ಪ್ರಯೋಜನವಾಗಲಿದೆ. ಇದರಿಂದ ಬಿದ್ಕಲ್‌ಕಟ್ಟೆಯಿಂದ ಅಂಪಾರಿಗೆ ಸಂಪರ್ಕ ಸಾಧ್ಯವಾಗಲಿದೆ. ಹಿಂದೆಯೂ ಬೇಡಿಕೆಯನ್ನು ಜನಪ್ರತಿನಿಧಿಗಳಿಗೆ ತಿಳಿಸಿದ್ದರೂ ಯಾರೂ ಸ್ಪಂದಿಸಿಲ್ಲ.
– ಮರತ್ತೂರು ಗ್ರಾಮಸ್ಥರು

– ಪ್ರಶಾಂತ್‌ ಪಾದೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

50ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತ; ಎಕರೆಗಟ್ಟಲೆ ಗದ್ದೆ ಜಲಾವೃತ

ನೆರೆಗೆ ದ್ವೀಪವಾದ ನಾವುಂದದ ಸಾಲ್ಪುಡಾ; ಜನಜೀವನ ಸ್ತಬ್ಧ

ಹುಣಸೂರು: ಜಿಂಕೆ ಮಾಂಸ ಅಕ್ರಮ ಸಾಗಾಟ; ಇಬ್ಬರ ಬಂಧನ

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ; ಜಿಂಕೆ ಮಾಂಸ ಅಕ್ರಮ ಸಾಗಾಟ; ಇಬ್ಬರ ಬಂಧನ

ಹೆಚ್ಚುತ್ತಲೇ ಇದೆ ಆನ್‌ಲೈನ್‌ ವಂಚನೆ-ಸೈಬರ್‌ಕ್ರೈಂ

ಹೆಚ್ಚುತ್ತಲೇ ಇದೆ ಆನ್‌ಲೈನ್‌ ವಂಚನೆ-ಸೈಬರ್‌ಕ್ರೈಂ

ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆ ; ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿಯ ನೀರು

ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆ ; ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿಯ ನೀರು

0000

ಆರ್ ಸಿಬಿ – ಸನ್ ರೈಸರ್ಸ್ : ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ

ಚಾಮರಾಜ ನಗರ: ಸೋಮವಾರ 57 ಕೋವಿಡ್ ಪ್ರಕರಣ ದೃಢ: ಇಬ್ಬರ ಸಾವು

ಚಾಮರಾಜ ನಗರ: ಸೋಮವಾರ 57 ಕೋವಿಡ್ ಪ್ರಕರಣ ದೃಢ: ಇಬ್ಬರ ಸಾವು

ಮಂಡ್ಯ ಜಿಲ್ಲೆಯಲ್ಲಿ 102 ಮಂದಿಗೆ ಕಾವಿಡ್ ಪಾಸಿಟಿವ್! 424 ಮಂದಿ ಡಿಸ್ಚಾರ್ಜ್; ಇಬ್ಬರು ಸಾವು

ಮಂಡ್ಯ ಜಿಲ್ಲೆಯಲ್ಲಿ 102 ಮಂದಿಗೆ ಕೋವಿಡ್ ಪಾಸಿಟಿವ್! 424 ಮಂದಿ ಡಿಸ್ಚಾರ್ಜ್; ಇಬ್ಬರು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

50ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತ; ಎಕರೆಗಟ್ಟಲೆ ಗದ್ದೆ ಜಲಾವೃತ

ನೆರೆಗೆ ದ್ವೀಪವಾದ ನಾವುಂದದ ಸಾಲ್ಪುಡಾ; ಜನಜೀವನ ಸ್ತಬ್ಧ

ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆ ; ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿಯ ನೀರು

ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆ ; ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿಯ ನೀರು

ಮಣಿಪಾಲ : ಕುಸಿಯುವ ಭೀತಿಯಲ್ಲಿದೆ ಎಂಟು ಅಂತಸ್ತಿನ ಕಟ್ಟಡ!

ಮಣಿಪಾಲ : ಕುಸಿಯುವ ಭೀತಿಯಲ್ಲಿದೆ ಎಂಟು ಅಂತಸ್ತಿನ ಕಟ್ಟಡ! ಸ್ಥಳಕ್ಕೆ ಅಧಿಕಾರಿಗಳ ದೌಡು

ನದಿ ಪಾತ್ರವನ್ನೇ ಬದಲಿಸಿದ ಉತ್ತರಾ ನೆರೆ: ಕಾಪು ಲೈಟ್ ಹೌಸ್ ನ ಸಂಪರ್ಕ ವ್ಯವಸ್ಥೆ ಕಡಿತ

ಹೊಳೆ ಹರಿವಿನ ದಿಕ್ಕನ್ನೇ ಬದಲಿಸಿದ ಉತ್ತರಾ ನೆರೆ:ಕಾಪು ಲೈಟ್ ಹೌಸ್ ನ ಸಂಪರ್ಕ ವ್ಯವಸ್ಥೆ ಕಡಿತ

ಕುಂಜೂರು‌ ದೇವಳ ಜಲಾವೃತ್ತ: ‘ನೆರೆನೀರು’ ನೆನಪಿಸಿದ “ಪುರಾಣ”

ಕುಂಜೂರು‌ ದೇವಳ ಜಲಾವೃತ್ತ: ‘ನೆರೆನೀರು’ ನೆನಪಿಸಿದ “ಪುರಾಣ”

MUST WATCH

udayavani youtube

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

udayavani youtube

ಬೆಳೆ ಹಾನಿ ತಡೆಗೆ ಪಟಾಕಿ ಸಿಡಿಸುವ ಕೋವಿ ತಯಾರಿ

udayavani youtube

ಕಬ್ಬಿನ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತಹೊಸ ಸೇರ್ಪಡೆ

50ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತ; ಎಕರೆಗಟ್ಟಲೆ ಗದ್ದೆ ಜಲಾವೃತ

ನೆರೆಗೆ ದ್ವೀಪವಾದ ನಾವುಂದದ ಸಾಲ್ಪುಡಾ; ಜನಜೀವನ ಸ್ತಬ್ಧ

ಮೆಸೇಜ್‌ ಮಾಡಿ ಕಾಸು ಕೇಳ್ತಾರೆ, ಹುಷಾರ್‌

ಮೆಸೇಜ್‌ ಮಾಡಿ ಕಾಸು ಕೇಳ್ತಾರೆ, ಹುಷಾರ್‌

ಕುರಿ ಸಾಕಿದರೆ ಕೈತುಂಬಾ ಕಾಂಚಾಣ

ಕುರಿ ಸಾಕಿದರೆ ಕೈತುಂಬಾ ಕಾಂಚಾಣ

isiri-tdy-2

ಆಸೆ ಇರಬೇಕು ನಿಜ, ಅದು ಅತಿಯಾಗಬಾರದು…

isiri-tdy-1

ಸೆಕೆಂಡ್‌ ಹ್ಯಾಂಡ್‌ ವಾಹನಗಳಿಗೆ ಶುಕ್ರದೆಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.