ಸಾಕುಪ್ರಾಣಿಗಳ ಆಹಾರ, ಔಷಧಕ್ಕೆ ಬೇಡಿಕೆ
ಸಮರ್ಪಕ ಪೂರೈಕೆಗೆ ಜಿಲ್ಲಾ ಪಶುಸಂಗೋಪನ ಇಲಾಖೆ ಮುರ್ತುವರ್ಜಿ
Team Udayavani, Apr 17, 2020, 6:03 AM IST
ಸಾಂದರ್ಭಿಕ ಚಿತ್ರ..
ಉಡುಪಿ: ಕೋವಿಡ್ 19 ವೈರಾಣು ಹರಡುವುದನ್ನು ತಪ್ಪಿಸಲು ದೇಶಾದ್ಯಂತ ಲಾಕ್‌ಡೌನ್ ಘೋಷಿಸಿ ಮುಂಜಾಗ್ರತೆ ವಹಿಸಲಾಗುತ್ತಿದೆ. ಕೆಲ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರಅವಕಾಶ ನೀಡಲಾಗಿದೆ. ಸಾಕು ಪ್ರಾಣಿಗಳಿಗೆ ಅಗತ್ಯವಿರುವ ಆಹಾರ, ಔಷಧಗಳಿಗೆ ತೊಂದರೆ ಆಗದಿರುವ ನಿಟ್ಟಿನಲ್ಲಿಯೂ ಜಿಲ್ಲಾ ಪಶುಸಂಗೋಪನ ಇಲಾಖೆ ಮುತುವರ್ಜಿ ವಹಿಸಿದೆ. ಪೆಟ್ ಶಾಪ್ ಮೆಡಿಕಲ್ ಶಾಪ್‌ಗ್ಳಲ್ಲಿ ಅಗತ್ಯ ಪ್ರಾಣಿಗಳ ವಸ್ತುಗಳು ಇರುವಂತೆ ನೋಡಿಕೊಳ್ಳಲಾಗಿದೆ.
ನಗರಭಾಗದಲ್ಲಿ ಒಟ್ಟು 3 ಪೆಟ್‌ಶಾಪ್‌ಗ್ಳಿದ್ದು, ನಿಗದಿತ ಅವಧಿಯಲ್ಲಿ ಕಾರ್ಯಾಚರಿಸುತ್ತಿವೆ. ಇವುಗಳಿಗೆ ಬೆಂಗಳೂರು, ಹೈದರಾಬಾದ್‌ಗಳಿಂದ ಅಗತ್ಯವಸ್ತುಗಳು ಪೂರೈಕೆ ಆಗುತ್ತಿವೆ. ವ್ಯಾಪಾರ ಕಡಿಮೆ ಲಾಕ್‌ಡೌನ್‌ನಿಂದಾಗಿ ಪೇಟ್ ಶಾಪ್‌ಗ್ಳಲ್ಲಿ ಹಿಂದೆ ಆಗುತ್ತಿದ್ದ ವ್ಯಾಪಾರ ಆಗುತ್ತಿಲ್ಲ. ಜನ ಪ್ರಾಣಿಗಳಿಗೆ ಮನೆ ಊಟ ನೀಡುತ್ತಿದ್ದಾರೆ. ಆದಾಗಿಯೂ ಶ್ವಾನಗಳ ಆಹಾರಕ್ಕೆ ಹೆಚ್ಚಿನ ಬೇಡಿಕೆ ಇದ್ದು ಔಷಧಗಳ ಬೇಡಿಕೆ ಕಡಿಮೆಯಿದೆ. ಕೆಲ ಮಂದಿ ಆನ್‌ಲೈನ್ ಬುಕಿಂಗ್ ಬೇಡಿಕೆಯನ್ನು ಇಟ್ಟರೂ ಈ ವ್ಯವಸ್ಥೆಯಿಲ್ಲ. ಸದ್ಯ ಸಾಕು ಪ್ರಾಣಿಗಳ ಆಹಾರ ವಸ್ತುಗಳ ಪೂರೈಕೆ ಸಮರ್ಪಕವಾಗಿದೆ ಎಂದು ಉಡುಪಿ ತಹಶೀಲ್ದಾರ್ ಪ್ರದೀಪ್ ಕುಡೇìಕರ್ ಸ್ಪಷ್ಟಪಡಿಸಿದ್ದಾರೆ.
ವ್ಯಾಪಾರ ಕಡಿಮೆ
ಪೆಟ್‌ಶಾಪ್‌ಗ್ಳಲ್ಲಿ ಆಡಳಿತ ಇಲಾಖೆಯಿಂದ ಕಾರ್ಯನಿರ್ವಹಿಸಲು ಆವಕಾಶ ನೀಡಲಾಗಿದೆ. ಸದ್ಯಕ್ಕೆ ವ್ಯಾಪಾರ ಕಡಿಮೆಯಾಗಿದೆ. ಪ್ರಾಣಿಗಳ ಆಹಾರಗಳಿಗೆ ಬೇಡಿಕೆ ಇವೆ. ಔಷಧಗಳು ಕಡಿಮೆ ಖರೀದಿಯಾಗುತ್ತಿವೆ.
ಕಿರಣ್ ಕುಮಾರ್
ಅಂಗಡಿ ಮಾಲಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜನರ ಸಮಸ್ಯೆಗೆ ತತ್ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್ ಸೂಚನೆ
ಉದಯವಾಣಿ-ಎಂಐಟಿ ಮಳೆ ನೀರು ಕೊಯ್ಲು ಕಾರ್ಯಾಗಾರ: ಸಮಸ್ಯೆಗೆ ಮೊದಲೇ ಪರಿಹಾರ: ಡಾ| ರಾಣ ಕರೆ
ಮದುವೆ ಹಾಲ್ನಲ್ಲಿ ಕಣ್ಮರೆಯಾದ ಚಿನ್ನದ ಸರ ದೈವ ಸನ್ನಿಧಿಯಲ್ಲಿ ಪತ್ತೆ!
ಅಗರಬತ್ತಿ ಉದ್ಯಮಕ್ಕೆ ಅಗತ್ಯದ ವಿನಾಯಿತಿ: ಶೋಭಾ ಕರಂದ್ಲಾಜೆ
ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಉಜ್ವಲ ಭವಿಷ್ಯಕ್ಕಾಗಿ T.A.T