ಡೆಂಗ್ಯೂ ಜ್ವರ: ತುರ್ತು ಮುನ್ನೆಚ್ಚರಿಕೆ ಅಗತ್ಯ

ಉಡುಪಿ ಜಿಲ್ಲೆಯಲ್ಲಿ 81 ಪ್ರಕರಣಗಳು ಪತ್ತೆ

Team Udayavani, Jul 19, 2019, 5:41 AM IST

ಕಾರ್ಕಳ: ಬಿಸಿಲು-ಮಳೆಯ ಕಣ್ಣಾ ಮುಚ್ಚಾಲೆಯಿಂದಾಗಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಗಳು ಹೆಚ್ಚುತ್ತಿದ್ದು ಮುನ್ನೆಚ್ಚರಿಕೆ ಅಗತ್ಯವಾಗಿದೆ.

ಈಡೀಸ್‌ ಈಜಿಪ್ಟೆ„ ಸೊಳ್ಳೆ ಕಡಿಯುವುದರಿಂದ ಡೆಂಗ್ಯೂ ವೈರಸ್‌ ಹರಡುತ್ತದೆ. ಹಗಲಿನಲ್ಲಿ ಈ ಸೊಳ್ಳೆಗಳು ಕಚ್ಚುತ್ತವೆ. ಇದರಿಂದ ಜ್ವರ ಉಂಟಾಗುತ್ತದೆ. ಡೆಂಗ್ಯೂ ಜ್ವರ, ಡೆಂಗ್ಯೂ ರಕ್ತಸ್ರಾವ ಜ್ವರ, ಡೆಂಗ್ಯೂ ಶಾಕ್‌ ಸಿಂಡ್ರೋಮ್‌ ಹೀಗೆ ಮೂರು ವಿಧದಲ್ಲಿ ಜ್ವರ ಹರಡುತ್ತದೆ.

ಜ್ವರದ ಲಕ್ಷಣಗಳು
ಇದ್ದಕ್ಕಿದ್ದಂತೆ ತೀವ್ರ ಜ್ವರ ಕಾಣಿಸಿಕೊಳ್ಳುವುದು. ತಲೆನೋವು, ಕಣ್ಣಿನ ಮುಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ರೋಗದ ಪ್ರಮುಖ ಲಕ್ಷಣಗಳು.

ತೀಕ್ಷ್ಣ ಜ್ವರದ ನಂತರ ರಕ್ತಸ್ರಾವ , ಮೈ, ಊತ, ರಕ್ತದ ಒತ್ತಡ ಉಂಟಾಗುತ್ತದೆ. ಸಾಮಾನ್ಯವಾಗಿ ಇದು ಮಕ್ಕಳಲ್ಲಿ ತೀವ್ರವಾಗಿ ಕಂಡು ಬರುತ್ತದೆ. ಜ್ವರ ಬಂದ 3-5 ದಿನಗಳಲ್ಲಿ ರಕ್ತ ಸ್ರಾವದ ಮತ್ತು ಮೈ ಊತದ ಲಕ್ಷಣಗಳು ಗೋಚರಿಸುತ್ತದೆ. ರೋಗಿಯು ತೀವ್ರ ನಿಶ್ಯಕ್ತಿಯಿಂದ ಬಳಲಿದಂತಾಗುತ್ತಾನೆ.

ತೀವ್ರ ತರದ ಹೊಟ್ಟೆ ನೋವು, ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು, ರಕ್ತಸಹಿತ ಅಥವಾ ರಕ್ತ ರಹಿತ ವಾಂತಿ, ಕಪ್ಪು ಮಲ ವಿಸರ್ಜನೆ, ವಿಪರೀತ ಬಾಯಾರಿಕೆ (ಬಾಯಿ ಒಣಗುವುದು), ತಣ್ಣನೆಯ ಬಿಳಿಚಿದ ಚರ್ಮ, ಚಡಪಡಿಸುವಿಕೆ ಅಥವಾ ಜ್ಞಾನ ತಪ್ಪುವುದೂ ಇದೆ.

ಹರಡುವ ರೀತಿ
ಡೆಂಗ್ಯೂ ಸೋಂಕು ಹೊಂದಿದ ವ್ಯಕ್ತಿಯನ್ನು ಸೊಳ್ಳೆ ಕಡಿಯುವುದರಿಂದ ವೈರಸ್‌ ಹರಡಲು ಕಾರಣವಾಗುತ್ತದೆ. ಸೊಳ್ಳೆ ಕಚ್ಚಿದ 5-7 ದಿವಸಗಳ ನಂತರ ಈ ರೋಗದ ಪ್ರಾಥಮಿಕ ಲಕ್ಷಣಗಳು ಕಂಡುಬರುತ್ತದೆ.

ನಿಯಂತ್ರಣ ಕ್ರಮಗಳು
ಮನೆಯೊಳಗೆ ಅಥವಾ ಮೇಲ್ಛಾವಣಿಯ ನೀರಿನ ತೊಟ್ಟಿಗಳಲ್ಲಿ ವಾರಕ್ಕೊಮ್ಮೆ ನೀರನ್ನು ಖಾಲಿ ಮಾಡಿ ಪುನಹಃ ಭರ್ತಿ ಮಾಡಿ ಭದ್ರವಾದ ಮುಚ್ಚಳಿಕೆಯಿಂದ ಮುಚ್ಚುವುದು. ಮನೆಯ ಒಳಗೆ ಹಾಗೂ ಹೊರಗೆ ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ಎಚ್ಚರವಹಿಸುವುದು. ಒಡೆದ ಬಾಟಲಿ, ಟಿನ್‌, ಟೈರು ಇತ್ಯಾದಿಗಳಲ್ಲಿ ನೀರು ಸಂಗ್ರಹ ವಾಗದಂತೆ ನೋಡಿಕೊಳ್ಳಬೇಕು. ವಾತಾವರಣ ಸ್ವತ್ಛವಾಗಿರಿಸಿಕೊಂಡರೆ ಇಂತಹ ಸಾಂಕ್ರಾಮಿಕ ರೋಗ ತಡೆಗಟ್ಟಬಹುದಾಗಿದೆ.

ತಾಲೂಕಿನ 5 ಮಂದಿಗೆ ಡೆಂಗ್ಯೂ
ಕಾರ್ಕಳ ತಾಲೂಕಿನ 5 ಮಂದಿಗೆ ಡೆಂಗ್ಯೂ ಬಾಧಿಸಿದೆ. ಸಾರ್ವಜನಿಕರು ಸೊಳ್ಳೆ ನಿಯಂತ್ರಣದ ನಿಟ್ಟಿನಲ್ಲಿ ಪರಿಸರ ಸ್ವತ್ಛಗೊಳಿಸುವುದರೊಂದಿಗೆ ಮೈ ಪೂರ್ತಿ ಮುಚ್ಚುವಂತೆ ಬಟ್ಟೆ ಧರಿಸುವುದು, ಸೊಳ್ಳೆ ಪರದೆ, ಸೊಳ್ಳೆ ಬತ್ತಿಯನ್ನು ಉಪಯೋಗಿಸುವುದು ಉತ್ತಮ.
-ಡಾ| ಕೃಷ್ಣಾನಂದ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ, ಕಾರ್ಕಳ

ಎಚ್ಚೆತ್ತುಕೊಳ್ಳಲಿ
ಕಾರ್ಕಳ ಪುರಸಭೆ ವ್ಯಾಪ್ತಿಯ ಹಲವೆಡೆಗಳಲ್ಲಿ ನೀರು ನಿಂತಿದ್ದು, ಡೆಂಗ್ಯೂ ಭೀತಿ ಹುಟ್ಟಿಸಿದೆ. ಚರಂಡಿ ಸಮರ್ಪಕವಾಗಿಲ್ಲದ ಕಾರಣ ಹಲವೆಡೆ ನೀರು ನಿಂತ ಪ್ರದೇಶಗಳು ಸೊಳ್ಳೆ ಉತ್ಪತ್ತಿ ತಾಣಗಳಾಗವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ