ವಾಹನ ಸವಾರರ ಜೀವಕ್ಕೆ ಕಂಟಕವಾದ ಗುಂಡಿಬೈಲು ರಸ್ತೆ !

ನಿರ್ಮಾಣಗೊಂಡ ವರ್ಷದೊಳಗೆ ಹಾಳಾದ ರಸ್ತೆ

Team Udayavani, Oct 25, 2020, 1:41 PM IST

ವಾಹನ ಸವಾರರ ಜೀವಕ್ಕೆ ಕಂಟಕವಾದ ಗುಂಡಿಬೈಲು ರಸ್ತೆ !

ಉಡುಪಿ, ಅ. 24:  ಗುಂಡಿಬೈಲು ಜಂಕ್ಷನ್‌ ಮಾರ್ಗವಾಗಿ ದೊಡ್ಡಣಗುಡ್ಡೆ ಸಂಪರ್ಕಿಸುವ, ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ ಇದೀಗ ವಾಹನ ಸವಾರರ ಹಾಗೂ ಸಾರ್ವಜನಿಕರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ.

2019ರ ಕೊನೆಯಲ್ಲಿ ನಗರಸಭೆ ವತಿಯಿಂದ 40 ಲ.ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ನಡೆದಿದ್ದು, 22 ಅಡಿ ಆಳ ಮಾಡಿ, ಹೊಸ ಪೈಪ್‌ ಅಳವಡಿಸಲಾಗಿತ್ತು. ಆದರೆ ಇದು ನಿಗದಿತ ಸಮಯದಲ್ಲಿ ಮುಗಿದಿರಲಿಲ್ಲ. ಅವಸರವಸರವಾಗಿ ಕಾಮಗಾರಿ ನಡೆದು ಇದರ ಮೇಲೆಯೇ ಡಾಮರು ಹಾಕಲಾಗಿದೆ. ಆದರೆ ಒಳಭಾಗ ಕುಸಿದಿದ್ದರಿಂದ ರಸ್ತೆಯೇ ಗುಂಡಿಬಿದ್ದು ಹಾಳಾಗಿದೆ.

ನಿರ್ಲಕ್ಷ್ಯ ಕಾರಣ :  ಒಳಚರಂಡಿ ಕಾಮಗಾರಿ ನಡೆದು ಕನಿಷ್ಠ ಹಾಕಿದ  ಮಣ್ಣು ಗಟ್ಟಿಯಾಗಲು ಎರಡು ತಿಂಗಳಾದರೂ ಸಮಯ ಬೇಕಾಗಿತ್ತು. ಈ ಬಗ್ಗೆ ಮುತುವರ್ಜಿ ವಹಿಸದ ಅಧಿಕಾರಿಗಳು ತುರ್ತಾಗಿ ಡಾಮರು ಕಾಮಗಾರಿ ಮಾಡಿರುವುದರಿಂದ ಗುಂಡಿಬೈಲು ರಸ್ತೆಗಳಲ್ಲಿ ಒಳಚರಂಡಿ ಕಾಮಗಾರಿ ಮಾಡಿರುವ ಭಾಗ ಜೂನ್‌ ತಿಂಗಳ ಅಂತ್ಯಕ್ಕೆ ಸಂಪೂರ್ಣ ಬಿರುಕು ಬಿಟ್ಟು ಕುಸಿದಿತ್ತು.

ಸಮಸ್ಯೆಗಳ ಆಗರ :  ಈ ಮಾರ್ಗದಲ್ಲಿ ಮ್ಯಾನ್‌ಹೋಲ್‌ನಲ್ಲಿ ಕೊಳಚೆ ನೀರು ಉಕ್ಕಿ ರಸ್ತೆಯಲ್ಲಿ ಹರಿಯುತ್ತಿರುವ ಕುರಿತು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಮ್ಯಾನ್‌ಹೋಲ್‌ಗೆ ಪೈಪ್‌ ಲೈನ್‌ ಅಳವಡಿಸಿ ಕೊಳಚೆ ನೀರನ್ನು ರಸ್ತೆ ಬದಿಯ ನೀರಿನ ಚರಂಡಿಗೆ ಬಿಡಲಾಗಿದೆ.  ಇದೇ ಮಾರ್ಗದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಒಡೆದು ಹೋಗಿದ್ದು, ಭಾರೀ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ.

ಅವಸರದ ಕಾಮಗಾರಿ :  ಗುಂಡಿಬೈಲು ಜುಮಾದಿಕಟ್ಟೆಯ ಬಳಿ ಒಳಚರಂಡಿ ಬ್ಲಾಕ್‌ ಆಗಿತ್ತು. ಸುಮಾರು 22 ಅಡಿ ಆಳ ಅಗೆದು, ಹೊಸ ಪೈಪ್‌ಲೈನ್‌ ಅಳವಡಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯರ ಆಗ್ರಹಕ್ಕೆ ಜುಮಾದಿ ಕೋಲದ ಹಿನ್ನೆಲೆಯಲ್ಲಿ ಅವಸರವಾಗಿ ಡಾಮರು ಕಾಮಗಾರಿ ಮಾಡಲಾಗಿತ್ತು.  ಪ್ರಭಾಕರ್‌ ಪೂಜಾರಿ,  ನಗರಸಭೆ ಸದಸ್ಯ

ಮತ್ತೆ ಟೆಂಡರ್‌ : ರಸ್ತೆ ಡಾಮರು ಕಾಮಗಾರಿಯ ಬಳಿಕ 14 ವರ್ಷಗಳ ಯುಜಿಡಿ ಹಾಳಾಗಿದೆ. ಈ ಹಿನ್ನೆಲೆ ರಸ್ತೆ ಅಗೆದು ದುರಸ್ತಿ ಮಾಡಲಾಗಿದೆ. ಇದೀಗ ರಸ್ತೆ ಡಾಮರು ಹಾಕಲು ಮತ್ತೆ ಟೆಂಡರ್‌ ಆಗಿದ್ದು, ಮಳೆಗಾಲದ ಬಳಿಕ ಕಾಮಗಾರಿ ಆರಂಭವಾಗಲಿದೆ. ಮೋಹನ್‌ ರಾಜ್‌,  ಎಇಇ ನಗರಸಭೆ ಉಡುಪಿ

ಟಾಪ್ ನ್ಯೂಸ್

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

Param-Bir-Singh

ಐಪಿಎಸ್‌ ಅಧಿಕಾರಿ ಪರಂಬೀರ್‌ ಸಿಂಗ್‌ ವಿರುದ್ಧ ಶಿಸ್ತಿನ ಕ್ರಮ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾರ್ಗಸೂಚಿಯಂತೆ ಪರ್ಯಾಯೋತ್ಸವ: ರಘುಪತಿ ಭಟ್‌

ಮಾರ್ಗಸೂಚಿಯಂತೆ ಪರ್ಯಾಯೋತ್ಸವ: ರಘುಪತಿ ಭಟ್‌

ಮಾಸ್ಕ್ ಧರಿಸದಿದ್ದರೆ ದಂಡ, ಜಿಲ್ಲೆಯಾದ್ಯಂತ ಮಾಸ್ಕ್ ಡ್ರೈವ್‌ : ಉಡುಪಿ ಜಿಲ್ಲಾಧಿಕಾರಿ

ಮಾಸ್ಕ್ ಧರಿಸದಿದ್ದರೆ ದಂಡ, ಜಿಲ್ಲೆಯಾದ್ಯಂತ ಮಾಸ್ಕ್ ಡ್ರೈವ್‌ : ಉಡುಪಿ ಜಿಲ್ಲಾಧಿಕಾರಿ

ಸೈನಿಕನ ಮಗಳ ಹೆಸರೇ “ಸೈನ್ಯ’!

ಸೈನಿಕನ ಮಗಳ ಹೆಸರೇ “ಸೈನ್ಯ’!

ಸೊರಗುತ್ತಿದೆ ವಸತಿ ರಹಿತರ ಆಶ್ರಯ ಕೇಂದ್ರ

ಸೊರಗುತ್ತಿದೆ ವಸತಿ ರಹಿತರ ಆಶ್ರಯ ಕೇಂದ್ರ

ಯಕ್ಷಗಾನದಿಂದ ಪುರಾಣ ಚಿಂತನೆಗಳ ಪ್ರಚಾರ: ಅದಮಾರು ಶ್ರೀ

ಯಕ್ಷಗಾನದಿಂದ ಪುರಾಣ ಚಿಂತನೆಗಳ ಪ್ರಚಾರ: ಅದಮಾರು ಶ್ರೀ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

ಮಾರ್ಗಸೂಚಿಯಂತೆ ಪರ್ಯಾಯೋತ್ಸವ: ರಘುಪತಿ ಭಟ್‌

ಮಾರ್ಗಸೂಚಿಯಂತೆ ಪರ್ಯಾಯೋತ್ಸವ: ರಘುಪತಿ ಭಟ್‌

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 7 ವರ್ಷ ಜೈಲು

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 7 ವರ್ಷ ಜೈಲು

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.