ದೇಯಿ ಬೈದೆತಿ: ನಾಳೆಯಿಂದ ಕರಾವಳಿಯಾದ್ಯಂತ ತೆರೆಗೆ


Team Udayavani, Feb 14, 2019, 12:30 AM IST

deyi-baidati.jpg

ಬೆಳ್ತಂಗಡಿ: ಸಂಕ್ರಿ ಮೋಷನ್‌ ಪಿಕ್ಚರ್ಸ್‌ ಲಾಂಛನದ ಸೂರ್ಯೋದಯ ಪೆರಂಪಳ್ಳಿ ನಿರ್ದೇಶನದ ದೇಯಿ ಬೈದೆತಿ ಗೆಜ್ಜೆಗಿರಿ ನಂದನೊಡು ಐತಿಹಾಸಿಕ ಚಲನಚಿತ್ರ ಫೆ. 15ರಂದು ಕರಾವಳಿಯಾದ್ಯಂತ ಚಿತ್ರಮಂದಿರಗಳಲ್ಲಿ  ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಮಂಗಳೂರಿನಲ್ಲಿ ಜ್ಯೋತಿ, ಪಿವಿಆರ್‌, ಭಾರತ್‌ ಸಿನೆಮಾಸ್‌, ಸಿನೆ ಪೊಲಿಸ್‌, ಬೆಳ್ತಂಗಡಿಯಲ್ಲಿ  ಭಾರತ್‌ ಚಿತ್ರ ಮಂದಿರ, ಸುರತ್ಕಲ್‌ನಲ್ಲಿ ನಟರಾಜ್‌, ಉಡುಪಿಯ ಕಲ್ಪನಾ ಚಿತ್ರ ಮಂದಿರ, ಮಣಿಪಾಲದ ಐನಾಕ್ಸ್‌ ಮತ್ತು ಭಾರತ್‌ ಸಿನೆಮಾಸ್‌, ಮೂಡಬಿದಿರೆಯ ಅಮರಶ್ರೀ, ಕಾರ್ಕಳದ ಪ್ಲಾನೆಟ್‌ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ.ತುಳು ನಾಡಿಗರ ಬದುಕಿನ ಅಗೋಚರ ಸತ್ಯವನ್ನು ತೆರೆದಿಡುವ ಪ್ರಯತ್ನ ಈ ಚಿತ್ರದಲ್ಲಿದೆ. ಈ ಕಥೆಯು ಸುಮಾರು 500 ವರ್ಷಗಳ ಹಿಂದೆ ಕರಾವಳಿಯ ಪುತ್ತೂರಿನ ಪಡುಮಲೆಯಲ್ಲಿ ಕಾರಣಿಕ ವೀರ ಪುರುಷರಾದ ಕೋಟಿ – ಚೆನ್ನಯರ ತಾಯಿ ದೇಯಿ ಬೈದೆತಿಯ ಕುರಿತಾದ ಸತ್ಯ ಘಟನೆಯ ಕಥಾನಕವಿದು.ಬನ್ನಂಜೆ ಬಾಬು ಅಮೀನ್‌, ದಾಮೋದರ್‌ ಕಲ್ಮಾಡಿ, ಡಾ| ಗಣನಾಥ್‌ ಶೆಟ್ಟಿ ಎಕ್ಕಾರ್‌, ಚೆಲುವರಾಜ್‌ ಪೆರಂಪಳ್ಳಿ, ಬಾಬು ಶಿವ ಪೂಜಾರಿ ಮುಂಬಯಿ ಮೊದಲಾದ ಸಂಶೋಧಕರ ಸಹಕಾರದಲ್ಲಿ ಮೂಡಿದ ತುಳುನಾಡಿಗರ ರೋಚಕ ಇತಿಹಾಸವನ್ನು ವೀಕ್ಷಿಸಿದ ಸೆನ್ಸಾರ್‌ ಮಂಡಳಿಯು ಮೆಚ್ಚುಗೆ ವ್ಯಕ್ತಪಡಿಸಿ ‘ಯು’ ಪ್ರಮಾಣಪತ್ರ ನೀಡಿದೆ. 

ಲಕ್ಷ್ಮಣ ಕೆ. ಅಮೀನ್‌ ಅರ್ಪಿಸುವ ಸಂಕ್ರಿ ಮೋಷನ್‌ ಪಿಕ್ಚರ್‌ ಬ್ಯಾನರ್‌ನಲ್ಲಿ ತಯಾರಾದ ಚಿತ್ರಕ್ಕೆ ದೇವ್‌ರಾಜ್‌ ಪಾಲನ್‌, ರಾಜ್‌ಕೃಷ್ಣ, ಅಮಿತ್‌ ರಾವ್‌ ರವರ ಸಹ ನಿರ್ದೇಶನವಿದ್ದು ಸಂಜೀವ ಪೂಜಾರಿ ಹೆರ್ಗ, ಕಿರಣ್‌ ಹೆಗ್ಡೆ ಬಿಜ್ರಿಯವರ ನಿರ್ಮಾಣ ನಿರ್ವಹಣೆಯಿದೆ. ಚಿತ್ರಕ್ಕೆ ಭಾಸ್ಕರ್‌ ರಾವ್‌ ಸಂಗೀತ, ಮಣಿಕಾಂತ್‌ ಕದ್ರಿ ಅವರ ಹಿನ್ನೆಲೆ ಸಂಗೀತವಿದೆ. ರವಿ ಸುವರ್ಣ ಮತ್ತು ಹರೀಶ್‌ ಪೂಜಾರಿ ಕುಕ್ಕುಂಜೆ ಅವರ ಛಾಯಾಗ್ರಹಣ, ಮೋಹನ್‌ ಎಲ್‌. ಸಂಕಲನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

ರವಿ ಪೂಜಾರಿ ಹಿರಿಯಡ್ಕ ಹಾಗೂ ದಿನೇಶ್‌ ಸುವರ್ಣ ರಾಯಿ ಚಿತ್ರದ ಕಲಾ ನಿರ್ದೇಶಕರು.  ಉಮೇಶ್‌ ಪೂಜಾರಿ ಬೆಳ್ತಂಗಡಿ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ಸೌಜನ್ಯ ಹೆಗ್ಡೆ, ಸೀತಾ ಕೋಟೆ, ಅಮಿತ್‌ ರಾವ್‌, ಚೇತನ್‌ ರೈ ಮಾಣಿ, ಎಂ.ಕೆ. ಮಠ, ಪ್ರಕಾಶ್‌ ಧರ್ಮನಗರ, ಅಶ್ವಿ‌ನಿ ಕೋಟ್ಯಾನ್‌, ಕಾಜೊಲ್‌ ಕುಂದರ್‌, ಪ್ರವೀಣ್‌ ಶೆಟ್ಟಿ, ಸುನಿಲ್‌ ನೆಲ್ಲಿಗುಡ್ಡೆ, ಲಕ್ಷ್ಮಣ್‌ ಮಲ್ಲೂರ್‌, ಸುನಿಲ್‌ ಪಲ್ಲಮಜಲು, ಹೆಚ್‌.ಕೆ. ನಯನಾಡು, ಸುಜಾತಾ ಶೆಟ್ಟಿ, ಮೋನಿಕಾ ಆಂಡ್ರದೆ, ನಾಗರಾಜ್‌ ವರ್ಕಾಡಿ, ಭಾಸ್ಕರ್‌ ಮಣಿಪಾಲ್‌, ಸೂರ್ಯೋದಯ್‌, ಪವಿತ್ರಾ ಶೆಟ್ಟಿ ಕಟಪಾಡಿ, ಇಡ್ಲಿ ರಾಜ ಮತ್ತಿತರರು ತಾರಾಗಣದಲ್ಲಿದ್ದಾರೆ.

ಟಾಪ್ ನ್ಯೂಸ್

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

hunasuru news

ಕೋಳಿಗಳಲ್ಲಿ ಕೊಕ್ಕರೆ ರೋಗ! : ನೂರಾರು ಕೋಳಿಗಳ ಸಾವು

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

dandeli news

ಅನಾಥ ಜೀವಕ್ಕೆ ಆಧಾರವಾಗಿ ಮಾನವೀಯತೆ ಮೆರೆದ ಎಸ್.ಆರ್.ಗಜಾಕೋಶ

shivamogga news

ಭಟ್ಕಳದ ಶಂಕಿತ ಉಗ್ರ ಸದ್ದಾಂ ಹುಸೇನ್ ಪತ್ನಿ ಶಾಹಿರಾ ಬಂಧನ

ಕೊವಿಡ್‌ 3ನೇ ಡೋಸ್‌ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ

ಕೊವಿಡ್‌ 3ನೇ ಡೋಸ್‌ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

katapadi news

ಕಟಪಾಡಿ : ಏಣಗುಡ್ಡೆ ಬ್ರಹ್ಮ ಬೈದೇರುಗಳ ಗರಡಿಯ ನಿಧಿ ಕುಂಭ ಯೋಗನಾಳದಲ್ಲಿ ತೀರ್ಥೋದ್ಭವ!

shirva news

ಅಕ್ರಮ ಮರಳುಗಾರಿಕೆ: ಸ್ಥಳೀಯಾಡಳಿತದಿಂದ ಪರಿಶೀಲನೆ

ಸವಾಲಿನ ನಡುವೆಯೂ ಬಿಸಿಯೂಟ ಸಾಂಗ

ಸವಾಲಿನ ನಡುವೆಯೂ ಬಿಸಿಯೂಟ ಸಾಂಗ

ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ

ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

hunasuru news

ಕೋಳಿಗಳಲ್ಲಿ ಕೊಕ್ಕರೆ ರೋಗ! : ನೂರಾರು ಕೋಳಿಗಳ ಸಾವು

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

dandeli news

ಅನಾಥ ಜೀವಕ್ಕೆ ಆಧಾರವಾಗಿ ಮಾನವೀಯತೆ ಮೆರೆದ ಎಸ್.ಆರ್.ಗಜಾಕೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.