‘ಪ್ರಪಂಚದ ಶ್ರೀಮಂತ ಭಾಷೆಯನ್ನಾಡುವವರು ಕನ್ನಡಿಗರು’


Team Udayavani, Dec 6, 2018, 2:10 AM IST

hebbar-5-12.jpg

ಉಡುಪಿ: ಪ್ರಪಂಚದ ಶ್ರೀಮಂತ ಭಾಷೆಯನ್ನಾಡುವವರು ನಾವು ಎಂಬ ಹೆಮ್ಮೆಪಡುವುದರ ಜತೆಗೆ ಕನ್ನಡದಲ್ಲಿ ಅಪಭ್ರಂಶಗಳಾಗದಂತೆ ಕನ್ನಡದ ಭಾಷಾ ಕಾವಲುಗಾರರನ್ನು ಇಟ್ಟುಕೊಳ್ಳುವ ಅಗತ್ಯವಿದೆ ಎಂದು ಕುಂದಾಪುರದ ನ್ಯಾಯವಾದಿ, ಸಾಹಿತಿ ಎ.ಎಸ್‌.ಎನ್‌. ಹೆಬ್ಟಾರ್‌ ಹೇಳಿದರು. ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪ.ಪೂ. ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಐದನೆಯ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಸವಿ ನುಡಿ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಕೃತವನ್ನು ಸೇರಿಸಿ ಕನ್ನಡವನ್ನು ಶ್ರೀಮಂತಗೊಳಿಸಬೇಕಾದ ಅನಿವಾರ್ಯವಿಲ್ಲ. ಕನ್ನಡ ಅಷ್ಟು ಬಡತನದ ಭಾಷೆಯಲ್ಲ. ಕನ್ನಡದ ಕುರಿತು ಕೀಳರಿಮೆ ಬೇಡ. ಇಂಗ್ಲಿಷ್‌ ಕೊಂಡಿಯಾಗಿಬೇಕು, ಬಳಸಿಕೊಳ್ಳಲು, ಬದುಕಿಕೊಳ್ಳಲು ಕನ್ನಡ ಬೇಕು ಎಂದರು.

ಸಾಹಿತ್ಯದಲ್ಲಿ ಮೌಲ್ಯ ಮುಖ್ಯ
ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ವೇತಾ ಎಸ್‌. ಸಮ್ಮೇಳನಾಧ್ಯಕ್ಷತೆ ವಹಿಸಿ, ಮಕ್ಕಳ ನಡುವಿನ ಓಟದ ನಡುವೆ ಸ್ವಚ್ಛಂದದ ಓದಿನ ಕಡೆಗೆ ವಿಹಾರಕ್ಕೆ ಈ ಸಮ್ಮೇಳನ ಅವಕಾಶ ನೀಡಿದಂತಾಗಿದೆ. ಸಾಹಿತ್ಯದಲ್ಲಿ ಭಾಷೆ ಮುಖ್ಯ ಅಲ್ಲ, ಅದು ನೀಡುವ ಮೌಲ್ಯ ಮುಖ್ಯವಾಗುತ್ತದೆ. ಸಾಹಿತ್ಯದ ಮೌಲ್ಯ ಜೀವನ ಮಾರ್ಗ ತೋರಿಸುವ, ವ್ಯಕ್ತಿತ್ವ ರೂಪಿಸಲು ದಾರಿದೀಪವಾಗಿರುತ್ತದೆ ಎಂದರು. ಪ್ರಾಂಶುಪಾಲರಾದ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಜಿ.ಎಸ್‌.ವಿ.ಎಸ್‌. ಅಸೋಸಿಯೇಶ‌ನ್‌ನ ಅಧ್ಯಕ್ಷ ಡಾ| ಕಾಶೀನಾಥ ಪೈ, ಕುಂದಪ್ರಭಾ ಸಂಪಾದಕ ಯು.ಎಸ್‌. ಶೆಣೈ, ಗಂಗೊಳ್ಳಿಯ ಉದ್ಯಮಿ ಗಣೇಶ್‌ ಕಾಮತ್‌, ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕಾರ್ಯದರ್ಶಿ ಸದಾಶಿವ ನಾಯಕ್‌ ಎನ್‌., ಉಪಪ್ರಾಂಶುಪಾಲ ಉಮೇಶ್‌ ಕಾರ್ಣಿಕ್‌, ಎಸ್‌.ವಿ. ಆಂಗ್ಲಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್‌ ಮುಖ್ಯ ಅತಿಥಿಗಳಾಗಿದ್ದರು. ಉಡುಪಿ ಜಿಲ್ಲಾ ವಿವಿಧ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಸುಮಾರು 35 ವಿದ್ಯಾರ್ಥಿಗಳು ವಿಚಾರ ಗೋಷ್ಠಿ, ಕಥಾ ಗೋಷ್ಠಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಸ್ವಾಗತಿಸಿ, ಶ್ವೇತಾ, ಋತು ನಿರ್ವಹಿಸಿದರು. ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಸ್ತಾವಿಸಿ, ರಶಿತಾ ವಂದಿಸಿದರು.

ಭಾಷಾಭಿಮಾನ ಬೆಳೆಸಿಕೊಳ್ಳಿ
ಸಾಹಿತ್ಯದ ಇತಿಹಾಸ, ಸಾಹಿತ್ಯದ ಶಕ್ತಿ ಯುವಜನತೆಗೆ ಅರಿವಿರಬೇಕು. ಭಾಷೆ ಸಂವಹನ ಸಾಧನವಾಗಿದ್ದು ಭಾಷೆ ಎಷ್ಟು ಪರಿಣಾಮಕಾರಿ ಆಗಿರುತ್ತದೋ ನಮ್ಮ ಸಂವಹನ ಅಷ್ಟೇ ಪ್ರಭಾವಶಾಲಿಯಾಗಿರುತ್ತದೆ. ದೇಶಾಭಿಮಾನ, ಭಾಷಾಭಿಮಾನ ಬೆಳೆಸಿಕೊಂಡಿರಬೇಕು. ಶಬ್ದ ಸಂಪತ್ತಿನಿಂದ ಸಮೃದ್ಧವಾದ ಸರಸ್ವತಿ ನಮ್ಮ ಕನ್ನಡ.
– ಎ.ಎಸ್‌.ಎನ್‌. ಹೆಬ್ಟಾರ್‌

ಟಾಪ್ ನ್ಯೂಸ್

bhagavanth-kubha

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

Tesla’s market cap crosses $1 trillion

ಟೆಸ್ಲಾ ಮಾರುಕಟ್ಟೆ ಮೌಲ್ಯ 1ಲಕ್ಷ ಕೋಟಿ ರೂ. ದಾಟಿದೆ..!

111111111

ನವೆಂಬರ್ ನಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ ‘ಟಾಮ್ ಅಂಡ್ ಜೆರ್ರಿ’

siddaramaiah

ಜನತಾ ನ್ಯಾಯಾಲಯದ ಮುಂದೆ ಚರ್ಚೆಗೆ ಭಯವೇಕೆ : ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ

WS_Jazz 4

ಕನ್ನಡದಲ್ಲೇ ಮೊದಲ ಪ್ರಯೋಗ : ವಿಂಡೋಸೀಟ್ ನಲ್ಲಿ ಮೂಡಿ ಬಂತು ಜಾಝ್ ಸಾಂಗ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎಲ್‌ಇಡಿ ಲೈಟ್ ಅಳವಡಿಕೆಗೆ ಪ್ರಾಯೋಗಿಕ ಚಾಲನೆ

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎಲ್‌ಇಡಿ ಲೈಟ್ ಅಳವಡಿಕೆಗೆ ಪ್ರಾಯೋಗಿಕ ಚಾಲನೆ

ಜನಪ್ರತಿನಿಧಿಗಳೇ… ವಿಳಂಬ ನೀತಿಯಿಂದ ಪ್ರಯೋಜನವಿಲ್ಲ

ಜನಪ್ರತಿನಿಧಿಗಳೇ… ವಿಳಂಬ ನೀತಿಯಿಂದ ಪ್ರಯೋಜನವಿಲ್ಲ

ನಾಳೆ ರಾಜ್ಯಾದ್ಯಂತ ಏಕಕಾಲಕ್ಕೆ ಕನ್ನಡ ಗೀತೆಗಳ ಗಾಯನ: ಸುನಿಲ್‌

ನಾಳೆ ರಾಜ್ಯಾದ್ಯಂತ ಏಕಕಾಲಕ್ಕೆ ಕನ್ನಡ ಗೀತೆಗಳ ಗಾಯನ: ಸುನಿಲ್‌

ಐದರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 10 ವರ್ಷ ಜೈಲು

ಐದರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 10 ವರ್ಷ ಜೈಲು

Untitled-1

ಶಿರ್ವ ಶ್ರೀ ಸಿದ್ಧಿ ವಿನಾಯಕ ದೇಗುಲದಲ್ಲಿ ದೃಢಕಲಶ ಸಂಪನ್ನ

MUST WATCH

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

ಹೊಸ ಸೇರ್ಪಡೆ

ಅರಣ್ಯ ಇಲಾಖೆ ವಸತಿಗೃಹ

ಅರಣ್ಯ ಇಲಾಖೆ ವಸತಿಗೃಹ ಉದಾಟನೆ ಯಾವಾಗ?

bhagavanth-kubha

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ಮೈಸೂರು ಆರ್ಟಿಸ್ಟ್‌ ಅಸೋಸಿಯೇಷನ್‌ನಿಂದ ಸಾಮೂಹಿಕ ನಾಡಗೀತೆ

ಅನಂತಸ್ವಾಮಿ ಗೀತೆಯನ್ನೇ ನಾಡಗೀತೆಯಾಗಿ ಘೋಷಿಸಿ

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.