ಅಪಾಯ ಆಹ್ವಾನಿಸುತ್ತಿರುವ ಒಣ ಮರಗಳು

ರಸ್ತೆ ಬದಿಯಲ್ಲೇ ಇರುವ ವಿದ್ಯುತ್‌ ತಂತಿ

Team Udayavani, Aug 23, 2019, 5:35 AM IST

ಪಳ್ಳಿ: ನಿಟ್ಟೆ ಗ್ರಾ.ಪಂ. ವ್ಯಾಪ್ತಿಯ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ನಿಟ್ಟೆ ಕಾಲೇಜು ಬಳಿಯಿಂದ ದೂಪದಕಟ್ಟೆ ವರೆಗೆ ರಸ್ತೆ ಬದಿ ಒಣಗಿದ ಮರಗಳು ಅಪಾಯಕಾರಿ ಸ್ಥಿತಿಯಲ್ಲಿವೆ.

ರಸ್ತೆ ಬದಿಯಲ್ಲೇ ವಿದ್ಯುತ್‌ ತಂತಿಗಳೂ ಸಾಗಿದ್ದು ಜೋರಾದ ಗಾಳಿಗೆ ಒಣಗಿದ ಮರಗಳು ತುಂಡಾದಲ್ಲಿ ಭಾರೀ ಪ್ರಮಾಣದ ನಷ್ಟ ಸಂಭವಿಸಲಿದೆ. ಈ ರಸ್ತೆಯು ಕಾರ್ಕಳದಿಂದ ಪಡುಬಿದ್ರಿ ಮೂಲಕವಾಗಿ ಮಂಗಳೂರು ಸಂಚರಿಸಲು ಮುಖ್ಯ ರಸ್ತೆ. ನಿರಂತರ ವಾಗಿ ಸಾವಿರಾರು ವಾಹನಗಳು ಈ ಮಾರ್ಗವಾಗಿಯೇ ಸಂಚರಿಸುತ್ತವೆ.

ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳು ಎಚ್ಚೆತ್ತು ತೆರವು ಕಾರ್ಯ ಕೈಗೊಳ್ಳದಿದ್ದಲ್ಲಿ ಅಪಾರ ಪ್ರಮಾಣದ ನಷ್ಟದ ಜತೆಗೆ ಜೀವಹಾನಿ ಸಂಭವಿಸ ಬಹುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ತೆರವು ಕಾರ್ಯ ನಡೆಸಿ
ಅಪಾಯಕಾರಿ ಮರಗಳು ರಸ್ತೆಯಂಚಿನಲ್ಲಿದ್ದು ಯಾವುದೇ ಕ್ಷಣದಲ್ಲಿ ಉರುಳಿ ಬೀಳುವ ಹಂತದಲ್ಲಿವೆ. ವಿದ್ಯುತ್‌ ತಂತಿಗಳ ಮೇಲೆ ಉರುಳಿ ಬಿದ್ದು ಭಾರೀ ನಷ್ಟ ಸಂಭವಿಸುವ ಮುನ್ನ ಸಂಬಂಧ ಪಟ್ಟ ಇಲಾಖೆ ಎಚ್ಚೆತ್ತು ಇವುಗಳ ತೆರವು ಕಾರ್ಯ ನಡೆಸಬೇಕು. -ನಿತೀನ್‌ ಸಾಲ್ಯಾನ್‌, ನಿಟ್ಟೆ ಗ್ರಾ.ಪಂ. ಸದಸ್ಯ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ